Updated on: Mar 13, 2024 | 12:02 PM
ದೀಪಿಕಾ ದಾಸ್ ಹಾಗೂ ದೀಪಕ್ ಗೌಡ ಅವರ ಮದುವೆ ಇತ್ತೀಚೆಗೆ ಗೋವಾದಲ್ಲಿ ನಡೆದಿದೆ. ಈ ಮದುವೆ ಸುದ್ದಿ ಅವರ ಫ್ಯಾನ್ಸ್ಗೆ ಶಾಕಿಂಗ್ ಆಗಿತ್ತು. ಅವರು ಏಕಾಏಕಿ ಮದುವೆ ಆಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.
ಬೆಂಗಳೂರಿನಲ್ಲಿ ದೀಪಿಕಾ ದಾಸ್ ಅವರು ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಅವರ ಆಪ್ತರು ಆಗಮಿಸಿ ದೀಪಿಕಾಗೆ ಶುಭಕೋರಿದ್ದಾರೆ. ನವ ದಂಪತಿಯ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆರತಕ್ಷತೆ ದಿನ ದೀಪಿಕಾ ದಾಸ್ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಗಮನ ಸೆಳೆಯುತ್ತಿವೆ. ದೀಪಿಕಾ ಹಾಗೂ ದೀಪಕ್ ಜೋಡಿ ಸೂಪರ್ ಆಗಿದೆ ಎಂದು ಫ್ಯಾನ್ಸ್ ಹೇಳಿದ್ದಾರೆ.
ದೀಪಕ್ ಹಾಗೂ ದೀಪಿಕಾಗೆ ನಾಲ್ಕು ವರ್ಷಗಳ ಪರಿಚಯ. ಮೊದಲು ಫ್ರೆಂಡ್ಸ್ ಆಗಿದ್ದ ಇವರು ನಂತರ ಮದುವೆ ಆಗುವ ನಿರ್ಧಾರಕ್ಕೆ ಬಂದರು. ಒಂದು ವರ್ಷಗಳ ಕಾಲ ಇಬ್ಬರೂ ಡೇಟ್ ಮಾಡಿದ್ದರು.
ಹೊಂದಾಣಿಕೆ ಬಂದರಷ್ಟೇ ಮದುವೆ ಆಗೋದು ಎನ್ನುವ ಆಲೋಚನೆಯಿಂದ ಇಬ್ಬರೂ ಸುತ್ತಾಟ ಶುರು ಮಾಡಿದರು. ಎಲ್ಲವೂ ಹೊಂದಿಕೆ ಆಯಿತು ಎಂದು ಅನಿಸಿದ ಬಳಿಕ ದೀಪಿಕಾ ಹಾಗೂ ದೀಪಕ್ ಮದುವೆ ಆದರು.
ದೀಪಿಕಾ ದಾಸ್ ಅವರು ‘ನಾಗಿಣಿ’ ಧಾರಾವಾಹಿ ಮೂಲಕ ಫೇಮಸ್ ಆದರು. ಆ ಬಳಿಕ ಅವರು ‘ಬಿಗ್ ಬಾಸ್ ಸೀಸನ್ 7’ಗೆ ಕಾಲಿಟ್ಟರು. ‘ಬಿಗ್ ಬಾಸ್ 9’ನಲ್ಲೂ ಅವರು ಕಾಣಿಸಿಕೊಂಡರು.
ಬಿಗ್ ಬಾಸ್ಗೆ ಬಂದಾಗ ದೀಪಿಕಾ ಸೈಲೆಂಟ್ ಆಗಿ ಇರುತ್ತಿದ್ದರು. ಈಗ ಮದುವೆ ಕೂಡ ಸೈಲೆಂಟ್ ಆಗಿ ಆಗಿದ್ದಾರೆ. ಆರತಕ್ಷತೆಗೆ ಅನುಪಮಾ ಗೌಡ, ನೀತು ವನಜಾಕ್ಷಿ ಸೇರಿ ಅನೇಕರು ಆಗಮಿಸಿದ್ದರು.