Updated on: Mar 22, 2023 | 8:15 AM
‘ಬಿಗ್ ಬಾಸ್ ಕನ್ನಡ ಸೀಸನ್ 9’ ಪೂರ್ಣಗೊಂಡ ನಂತರದಲ್ಲಿ ನಟಿ ದೀಪಿಕಾ ದಾಸ್ ಅವರು ಸುತ್ತಾಟದಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಅವರು ದುಬೈಗೆ ತೆರಳಿದ್ದರು. ಈಗ ಅವರು ಮುಂಬೈಗೆ ಹಾರಿದ್ದಾರೆ.
ಮುಂಬೈನ ಮೆರೈನ್ ಡ್ರೈವ್ನಲ್ಲಿ ಕಾಫಿ ಕುಡಿಯುತ್ತಾ ನಿಂತಿರುವ ಫೋಟೋನ ಅವರು ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಮುಂಬೈನಲ್ಲಿ ಸಮಯ ಕಳೆಯುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ದೀಪಿಕಾ ದಾಸ್ ಅವರು ಕಿರುತೆರೆ ಮೂಲಕ ಫೇಮಸ್ ಆದವರು. ‘ಬಿಗ್ ಬಾಸ್’ನಿಂದ ಅವರ ಜನಪ್ರಿಯತೆ ಹೆಚ್ಚಿದೆ. ಈಗ ಸಿನಿಮಾ ಕೆಲಸಗಳಲ್ಲಿ ದೀಪಿಕಾ ಬ್ಯುಸಿ ಇದ್ದಾರೆ.
ದೀಪಿಕಾ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಇದಕ್ಕೆ ಇನ್ನೂ ಶೀರ್ಷಿಕೆ ಫೈನಲ್ ಆಗಿಲ್ಲ. ಈ ಚಿತ್ರದಲ್ಲಿ ಅವರು ಪಾಯಲ್ ಹೆಸರಿನ ಹುಡುಗಿಯ ಪಾತ್ರ ಮಾಡುತ್ತಿದ್ದಾರೆ.
ಈ ಚಿತ್ರದ ಟೈಟಲ್ ಶೀಘ್ರವೇ ಅನಾವರಣ ಆಗಲಿದೆ. ಸೋಲೋ ಬೈಕ್ ರೈಡ್ ಹೋಗುವ ಹುಡುಗಿಯ ಕಥೆಯನ್ನು ಇದು ಹೊಂದಿದೆ ಎನ್ನಲಾಗುತ್ತಿದೆ.