Kannada News Photo gallery Devotees Padayatra Starts for Srisaila Mallikarjuna Jatra held during Ugadi bagalkote news
ಯುಗಾದಿಯಲ್ಲಿ ನಡೆಯುವ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆಗಾಗಿ ಪಾದಯಾತ್ರೆ ಹೊರಟ ಭಕ್ತರು, ದಾರಿಯುದ್ದಕ್ಕೂ ಆಹಾರ ನೀಡಿ ಸೇವೆ
ಯುಗಾದಿ ಪಾಡ್ಯದ ದಿನ ಶ್ರೀಶೈಲ ಮಲ್ಲಿಕಾರ್ಜುನನ ಜಾತ್ರೆ ರಥೋತ್ಸವ ಇದ್ದು, ಈಗಿಂದಲೇ ಭಕ್ತರು ಪಾದಯಾತ್ರೆ ನಡೆಸುತ್ತಾ ಶ್ರೀಶೈಲ ಕಡೆ ಹೊರಟಿದ್ದಾರೆ. ಮಕ್ಕಳು, ವೃದ್ದರು, ಮಹಿಳೆಯರು, ಯುವಕ ಯುವತಿಯರು ಸೇರಿದಂತೆ ಲಕ್ಷಾಂತರ ಮಂದಿ ಮಲ್ಲಯ್ಯನ ಕಣ್ತುಂಬಿಕೊಳ್ಳಲು ರಸ್ತೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಪಾದಯಾತ್ರೆ ಹೊರಟ ಭಕ್ತರಿಗಾಗಿ ಕೆಲವರು ನೀರು, ಮಜ್ಜಿಗೆ, ಆಹಾರ ವಿತರಿಸುತ್ತಿದ್ದಾರೆ.