ಮೈಸೂರು: ಡಿ.ಕೆ.ಶಿವಕುಮಾರ್ ಮುಂದಿನ ಸಿಎಂ ಆಗಲಿ; ಬಾಳೆಹಣ್ಣಿನ ಮೇಲೆ ಬರೆದು ಬನ್ನೂರು ಹೇಮಾದ್ರಾಂಬನಿಗೆ ಬೇಡಿಕೆ ಇಟ್ಟ ಅಭಿಮಾನಿ
ವಹ್ನೀಪುರ ಎಂದು ಇತಿಹಾಸ ಪ್ರಸಿದ್ದವಾದ ಹಸಿ ಬತ್ತ ಬಿಸಿ ಬೆಲ್ಲದ ಪಟ್ಟಣ ಬನ್ನೂರಿನಲ್ಲಿ ನಡೆಯುವ ಹೇಮಾದ್ರಾಂಬ ಜಾತ್ರೆ ಸುಮಾರು ಹನ್ನೊಂದು ದಿನ ನಡೆಯುತ್ತದೆ. ಹೇಮಾದ್ರಾಂಬ ಅಮ್ಮನವರ ಬಂಡಿಜಾತ್ರೆಯಲ್ಲಿ ದನಗಳ ಜಾತ್ರೆ ನಡೆಯುತ್ತದೆ. ಉತ್ತಮ ರಾಸುಗಳಿಗೆ ಬಹುಮಾನ ನೀಡಲಾಗುತ್ತದೆ. ಇದರಲ್ಲಿ ಭಾಗಿಯಾಗಲು ದೂರದೂರಿಂದ ದನ ಸಾಕುವವರು ತಮ್ಮ ದನಗಳನ್ನು ಕರೆದುಕೊಂಡುಬರುತ್ತಾರೆ.
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಬನ್ನೂರಿನಲ್ಲಿ ನಡೆದ ಜಾತ್ರೆಯಲ್ಲಿ ಡಿ.ಕೆ.ಶಿವಕುಮಾರ್ ಮುಂದಿನ ಸಿಎಂ ಆಗಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ.
1 / 6
ಬಾಳೆಹಣ್ಣಿನಲ್ಲಿ ಮುಂದಿನ ಸಿಎಂ ಡಿಕೆ ಎಂದು ಬರೆದು ಪ್ರಾರ್ಥನೆ ಸಲ್ಲಿಸಲಾಗಿದೆ. ಜೊತೆಗೆ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಪುತ್ರ ಸುನೀಲ್ ಬೋಸ್ ಮುಂದಿನ ಎಂಎಲ್ಎ ಎಂಬ ಬರಹ ಕೂಡ ಕಂಡುಬಂದಿದೆ.
2 / 6
ಬನ್ನೂರಿನಲ್ಲಿ ಅಧಿದೇವತೆ ಹೇಮಾದ್ರಾಂಬ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಜಾತ್ರಾ ಮಹೋತ್ಸವದಲ್ಲಿ ಕೆಲ ಅಭಿಮಾನಿಗಳು ಬಾಳೆಹಣ್ಣಿನಲ್ಲಿ ಕೆಲವು ಬೇಡಿಕೆಗಳನ್ನು ಬರೆದು ರಥಕ್ಕೆ ಎಸೆಯುವ ಮೂಲಕ ದೇವಿಯ ಪಾದಕ್ಕೆ ಅರ್ಪಿಸಿದ್ದಾರೆ.
3 / 6
ರಥೋತ್ಸವದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದು ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ ಅನ್ನಸಂತರ್ಪಣೆ ಮಾಡಲಾಯಿತು. ಈ ಬಾರಿ ರಥೋತ್ಸವದಲ್ಲಿ ಡಿಕೆ ಶಿವಕುಮಾರ್ ಮತ್ತು ಸುನಿಲ್ ಬೋಸ್ ಹೆಸರು ಸದ್ದು ಮಾಡಿದೆ.
4 / 6
ಈ ಜಾತ್ರೆಯ ವಿಶೇಷವೆಂದರೆ ಪಟ್ಟಣದ ನಿವಾಸಿಗಳು ಮಾಂಸಾಹಾರ ಸೇವನೆಯನ್ನು ತ್ಯಜಿಸುತ್ತಾರೆ. ರಥಸಪ್ತಮಿಯಂದು ಕರಿಕಲ್ಲುಗಳಿಗೆ ಪೂಜೆ ಸಲ್ಲಿಸಿ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ವೀಳ್ಯ ನೀಡುವ ಮೂಲಕ ಹಬ್ಬದ ಆಚರಣೆ ಆರಂಭಗೊಳ್ಳುತ್ತದೆ.
5 / 6