
ಕಾಲಿವುಡ್ ‘ಸೂಪರ್ ಸ್ಟಾರ್’ ರಜನಿಕಾಂತ್ ಅವರು ಮೈಸೂರಿನಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಅವರು ನಟಿಸುತ್ತಿರುವ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾದ ಶೂಟಿಂಗ್ ಈಗ ಮೈಸೂರಿನಲ್ಲಿ ನಡೆಯುತ್ತಿದೆ.

ರಜನಿಕಾಂತ್ ಅವರನ್ನು ಭೇಟಿ ಮಾಡಲು ನಟಿ ಧನ್ಯಾ ರಾಮ್ಕುಮಾರ್ ತೆರಳಿದ್ದಾರೆ. ಅವರ ಜೊತೆ ತಾಯಿ ಪೂರ್ಣಿಮಾ ಕೂಡ ಸಾಥ್ ನೀಡಿದ್ದಾರೆ. ಈ ಫೋಟೋಗಳನ್ನು ಧನ್ಯಾ ಅವರು ಹಂಚಿಕೊಂಡಿದ್ದಾರೆ.

ಧನ್ಯಾ ರಾಮ್ಕುಮಾರ್ ಅವರಿಗೆ ರಜನಿಕಾಂತ್ ಅವರನ್ನು ಭೇಟಿ ಮಾಡಿ ಸಖತ್ ಖುಷಿಯಾಗಿದೆ. ಈ ಫೋಟೋ ನೋಡಿ ಅವರ ಅಭಿಮಾನಿಗಳು ಕೂಡ ಖುಷಿಪಟ್ಟಿದ್ದಾರೆ. ಹಲವು ಬಗೆಯಲ್ಲಿ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.

ಡಾ. ರಾಜ್ಕುಮಾರ್ ಕುಟುಂಬ ಮತ್ತು ರಜನಿಕಾಂತ್ ನಡುವೆ ಮೊದಲಿನಿಂದಲೂ ಆತ್ಮೀಯತೆ ಇದೆ. ಡಾ. ರಾಜ್ ಮಕ್ಕಳ ಸಿನಿಮಾಗಳಿಗೆ ರಜನಿಕಾಂತ್ ಅವರು ಮೊದಲಿನಿಂದಲೂ ಬೆಂಬಲ ನೀಡುತ್ತಾ ಬಂದಿದ್ದಾರೆ.

ಮೈಸೂರಿನಲ್ಲಿ ಇರುವ ರಜನಿಕಾಂತ್ ಅವರನ್ನು ನೋಡಿ ಅಪಾರ ಸಂಖ್ಯೆಯ ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ. ಅವರಿಗೆ ಇರುವ ಫ್ಯಾನ್ ಫಾಲೋಯಿಂಗ್ ಅಪಾರ. ‘ಜೈಲರ್ 2’ ಮೇಲೆ ಸಖತ್ ನಿರೀಕ್ಷೆ ಇದೆ.