ಬರ್ತಿದೆ ‘ಧೂತ 2’; ಥ್ರಿಲ್ಲರ್ ಸರಣಿಗೆ ನಿರ್ಮಾಪಕನಾದ ನಾಗ ಚೈತನ್ಯ

Updated on: Jun 06, 2026 | 7:21 AM

Dhootha Season 2: ನಾಗ ಚೈತನ್ಯ ನಟನೆಯ 'ಧೂತ' ವೆಬ್ ಸರಣಿ ಗಮನ ಸೆಳೆದಿತ್ತು. ಇದರ ಎರಡನೇ ಸೀಸನ್ ಮುಹೂರ್ತ ಅಧಿಕೃತವಾಗಿ ನೆರವೇರಿದೆ, ಸೂಪರ್ ನ್ಯಾಚುರಲ್ ಥ್ರಿಲ್ಲರ್ ಸರಣಿ ಇದಾಗಿದೆ. ಈ ಸೀಸನ್ ಮೂಲಕ ನಾಗ ಚೈತನ್ಯ ನಿರ್ಮಾಪಕರಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ.

1 / 5
‘ಧೂತ 2’ ಸರಣಿಯ ಮುಹೂರ್ತದ ಪೂಜಾ ಸಮಾರಂಭದ ಫೋಟೋಗಳನ್ನು ನಾಗ ಚೈತನ್ಯ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಹಿರಿಯ ನಟ ಅಕ್ಕಿನೇನಿ ನಾಗಾರ್ಜುನ ಅವರು  ಮೊದಲ ದೃಶ್ಯಕ್ಕೆ ಚಪ್ಪಾಳೆ ತಟ್ಟುವ ಮೂಲಕ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.

‘ಧೂತ 2’ ಸರಣಿಯ ಮುಹೂರ್ತದ ಪೂಜಾ ಸಮಾರಂಭದ ಫೋಟೋಗಳನ್ನು ನಾಗ ಚೈತನ್ಯ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಹಿರಿಯ ನಟ ಅಕ್ಕಿನೇನಿ ನಾಗಾರ್ಜುನ ಅವರು ಮೊದಲ ದೃಶ್ಯಕ್ಕೆ ಚಪ್ಪಾಳೆ ತಟ್ಟುವ ಮೂಲಕ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.

2 / 5

ವಿಕ್ರಮ್ ಕುಮಾರ್ ನಿರ್ದೇಶನದ 'ಧೂತ' ಮೊದಲ ಸೀಸನ್ 2023ರಲ್ಲಿ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿ ಭಾರಿ ಯಶಸ್ಸು ಕಂಡಿತ್ತು. ಪತ್ರಿಕೆಯ ತುಣುಕುಗಳ ಮೂಲಕ ಭವಿಷ್ಯದಲ್ಲಿ ನಡೆಯುವ ನಿಗೂಢ ಘಟನೆಗಳನ್ನು ಮುಂಚಿತವಾಗಿ ತಿಳಿಯುವ ಪತ್ರಕರ್ತ ಸಾಗರ್ ಸುತ್ತ ಕಥೆ ಸಾಗುತ್ತದೆ.

3 / 5

ಈ ಸರಣಿಯಲ್ಲಿ ನಾಗ ಚೈತನ್ಯ ಜೊತೆಗೆ ಪಾರ್ವತಿ, ಪ್ರಾಚಿ ದೇಸಾಯಿ, ಪ್ರಿಯಾ ಭವಾನಿ ಶಂಕರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಎಂಟು ಕಂತುಗಳ ಸರಣಿಗೆ ಇಶಾನ್ ಛಾಬ್ರಾ ಸಂಗೀತವಿದ್ದು, ಮಿಕೋಲಾಜ್ ಸೈಗುಲಾ ಅವರ ಸಿನಿಮಾಟೋಗ್ರಫಿ ಇದೆ.

4 / 5

ಈಗ ಎರಡನೇ ಸೀಸನ್ ಅಲ್ಲಿ ಯಾವ ರೀತಿಯ ವಿಷಯವನ್ನು ನಾಗ ಚೈತನ್ಯ ಹೇಳುತ್ತಾರೆ ಎನ್ನುವ ಕುತೂಹಲ ಮೂಡಿದೆ. ಈ ಸರಣಿಗಾಗಿ ಅಭಿಮಾನಿಗಳು ಕಾದಿದ್ದಾರೆ.

5 / 5

ಮುಂದಿನ ದಿನಗಳಲ್ಲಿ ನಾಗ ಚೈತನ್ಯ ಅವರು 'ವಿರೂಪಾಕ್ಷ' ಖ್ಯಾತಿಯ ನಿರ್ದೇಶಕ ಕಾರ್ತಿಕ್ ವರ್ಮಾ ದಂಡು ಅವರ 'ವೃಷಕರ್ಮ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹೊಸ ಸಸ್ಪೆನ್ಸ್ ಚಿತ್ರದಲ್ಲಿ ಮೀನಾಕ್ಷಿ ಚೌಧರಿ ಅವರು ನಾಯಕಿಯಾಗಿ ಚೈತನ್ಯ ಅವರಿಗೆ ಜೋಡಿಯಾಗಿ ನಟಿಸಲಿದ್ದಾರೆ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us