
ಪುನೀತ್ ರಾಜ್ಕುಮಾರ್ ಅವರಿಗೆ ಇಬ್ಬರು ಪುತ್ರಿಯರು. ಒಬ್ಬರಿಗೆ ಧೃತಿ ಹಾಗೂ ಮತ್ತೊಬ್ಬರಿಗೆ ವಂದಿತಾ ಎಂದು ಹೆಸರು ಇಡಲಾಗಿದೆ. ಈಗ ಧೃತಿ ಅವರು ಇಡೀ ಕುಟುಂಬ ಹೆಮ್ಮೆ ಪಡುವ ಕೆಲಸ ಮಾಡಿದ್ದಾರೆ. ಆ ಸಂದರ್ಭದ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ.

ಧೃತಿ ಅವರು ಅಮೆರಿಕದ ನ್ಯೂಯಾರ್ಕ್ನಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಈಗ ಅವರು ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ‘ದಿ ನ್ಯೂ ಸ್ಕೂಲ್’ ಹೆಸರಿನ ಯೂನಿವರ್ಸಿಟಿಯಲ್ಲಿ ಶಿಕ್ಷಣ ಪಡೆದಿದ್ದಾರೆ. ಅವರು ಇಲ್ಲಿಸ್ಟ್ರೇಟರ್ ಹಾಗೂ ಡಿಸೈನರ್ ಕೋರ್ಸ್ ಮೇಲೆ ಪದವಿ ಪಡೆದಿದ್ದಾರೆ.

ಈ ಖುಷಿಯ ಕ್ಷಣಕ್ಕೆ ಅವರ ಕುಟುಂಬದವರು ಸಾಕ್ಷಿ ಆಗಿದ್ದಾರೆ. ಅವರ ಸಹೋದರಿ ವಂದಿತಾ, ಸಹೋದರ ವಿನಯ್ ರಾಜ್ಕುಮಾರ್, ತಾಯಿ ಅಶ್ವಿನಿ ಅವರು ಅಮೆರಿಕಕ್ಕೆ ತೆರಳಿದ್ದರು. ಈ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ.

ಈ ಫೋಟೋದಲ್ಲಿ ಅನೇಕರು ಧೃತಿಯನ್ನು ನೋಡಿದರೆ ಪುನೀತ್ ರಾಜ್ಕುಮಾರ್ ಅವರನ್ನು ಕಂಡಂತೆ ಆಗುತ್ತದೆ ಎಂದಿದ್ದಾರೆ. ಪುನೀತ್ ರಾಜ್ಕುಮಾರ್ ಜೊತೆ ಮಗಳನ್ನು ಹೋಲಿಕೆ ಮಾಡಿ ಅನೇಕರು ನೋಡಿದ್ದಾರೆ. ಈ ರೀತಿಯ ಸಾಕಷ್ಟು ಕಮೆಂಟ್ಗಳು ಬಂದಿವೆ.

ಪುನೀತ್ ರಾಜ್ಕುಮಾರ್ ನಿಧನ ಹೊಂದಿದ ಸಂದರ್ಭದಲ್ಲಿ ಧೃತಿ ಅವರು ಅಮೆರಿಕದಲ್ಲಿಯೇ ಶಿಕ್ಷಣ ಪಡೆಯುತ್ತಿದ್ದರು. ಅವರು ತಕ್ಷಣ ತಂದೆಯನ್ನು ನೋಡಲು ಅಮೆರಿಕದಿಂದ ಹೊರಟು ಬಂದರು. ತಂದೆಯನ್ನು ನೋಡಿ ಸಾಕಷ್ಟು ಕಣ್ಣೀರು ಹಾಕಿದ್ದರು.