ಈ 5 ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ; ಇದು ಗಂಭೀರ ಕಾಯಿಲೆಯ ಸಂಕೇತವಾಗಿರಬಹುದು ಎಚ್ಚರ
ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ನೋಡಲು ಸಾಮಾನ್ಯವೆಂದು ತೋರುತ್ತದೆ. ಆದರೆ ಕೆಲವೊಮ್ಮೆ ಅವು ಕೆಲವು ಗಂಭೀರ ಸಮಸ್ಯೆಗಳ ಲಕ್ಷಣಗಳಾಗಿವೆ. ಆದ್ದರಿಂದ ದೀರ್ಘಕಾಲದವರೆಗೆ ಸಮಸ್ಯೆ ಇದ್ದರೆ ಅದನ್ನು ಮುಂದೂಡಬಾರದು. ತಕ್ಷಣ ತಜ್ಞರನ್ನು ಸಂಪರ್ಕಿಸಿ.
Updated on: Dec 05, 2021 | 2:11 PM

ಸಣ್ಣ ಸಣ್ಣ ಮಾತಿಗೂ ನಿಮ್ಮ ಮೂಡ್ ಸ್ವಿಂಗ್ ಆಗುತ್ತಿದ್ದರೆ ಮತ್ತು ಇದು ಪದೇ ಪದೇ ಸಂಭವಿಸುತ್ತಿದ್ದರೆ, ಇದರಿಂದ ನೀವು ಕಿರಿಕಿರಿಗೊಳ್ಳುತ್ತಿದ್ದರೆ, ಇದನ್ನು ಲಘುವಾಗಿ ಪರಿಗಣಿಸಬೇಡಿ. ಇದು ಬೈಪೋಲಾರ್ ಡಿಸಾರ್ಡರ್, ಡಿಸ್ಟೈಮಿಯಾ ಮುಂತಾದ ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು. ಈ ಸಂದರ್ಭದಲ್ಲಿ ನೀವು ತಜ್ಞರನ್ನು ಸಂಪರ್ಕಿಸುವುದು ಉತ್ತಮ ಆಯ್ಕೆ.

ಜನರು 99 ಡಿಗ್ರಿ ಅಥವಾ 100 ಡಿಗ್ರಿ ಜ್ವರವನ್ನು ಸಾಮಾನ್ಯ ಜ್ವರದಂತೆ ಭಾವಿಸುತ್ತಾರೆ. ಆದರೆ ನೀವು ಆಗಾಗ್ಗೆ ಈ ಜ್ವರದಿಂದ ಬಳಲುತ್ತಿದ್ದರೆ, ಕಾಳಜಿ ಅಗತ್ಯ. ನಿರಂತರ ಜ್ವರವು ಸೋಂಕು ಮತ್ತು ಉರಿಯೂತವನ್ನು ಸೂಚಿಸುತ್ತದೆ. ಆದ್ದರಿಂದ ಇದನ್ನು ಸಾಮಾನ್ಯ ಎಂಬಂತೆ ನಿರ್ಲಕ್ಷ್ಯ ಮಾಡಬೇಡಿ.

ನಿರಂತರ ಕೆಮ್ಮು, ಕೆಮ್ಮಿನೊಂದಿಗೆ ತೂಕ ಇಳಿಕೆ, ಸೌಮ್ಯ ಜ್ವರ ಇತ್ಯಾದಿ ಸಮಸ್ಯೆಗಳಿದ್ದರೆ ತಜ್ಞರನ್ನು ಸಂಪರ್ಕಿಸಬೇಕು. ಇದು ಎದೆಯ ಸೋಂಕು ಆಗಿರಬಹುದು. ಇದಲ್ಲದೆ, ಇದು ಕೆಲವು ಗಂಭೀರ ಕಾಯಿಲೆಗಳ ಸಂಕೇತವೂ ಆಗಿರಬಹುದು.

ತ್ವರಿತ ತೂಕ ನಷ್ಟವು ಕಾಳಜಿಯ ವಿಷಯವಾಗಿದೆ. ಇದನ್ನು ನಿರ್ಲಕ್ಷಿಸಬೇಡಿ ಮತ್ತು ತಕ್ಷಣ ತಜ್ಞರ ಸಲಹೆಯೊಂದಿಗೆ ಪರೀಕ್ಷಿಸಿಕೊಳ್ಳಿ. ತ್ವರಿತ ತೂಕ ನಷ್ಟವು ಮಧುಮೇಹ ಯಾವುದೇ ದೀರ್ಘಕಾಲದ ಸೋಂಕಿನ ಸಂಕೇತವಾಗಿರಬಹುದು.

ತಲೆನೋವು ಸಾಮಾನ್ಯ ಸಮಸ್ಯೆಯಾಗಿದೆ. ಇದು ಯಾರಿಗಾದರೂ ಬರಬಹುದು. ಆದರೆ ನಿಮಗೆ ಆಗಾಗ್ಗೆ ತಲೆನೋವು ಇದ್ದರೆ ಅಥವಾ ರಾತ್ರಿ ಅಥವಾ ಬೆಳಿಗ್ಗೆ ತಲೆನೋವು ಉಲ್ಬಣಗೊಂಡರೆ, ಅದನ್ನು ಗಂಭೀರವಾಗಿ ತೆಗೆದುಕೊಳ್ಳಿ. ಇದಲ್ಲದೆ ತಲೆನೋವು ನಿರಂತರವಾಗಿದ್ದರೆ ಮತ್ತು ಅದರ ಮೇಲೆ ಯಾವುದೇ ಔಷಧಿ ಕಾರ್ಯನಿರ್ವಹಿಸದಿದ್ದರೆ, ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಇದು ಗೆಡ್ಡೆ ಅಥವಾ ಮೆನಿಂಜೈಟಿಸ್‌ನಂತಹ ಗಂಭೀರ ಅಸ್ವಸ್ಥತೆಯ ಸಂಕೇತವಾಗಿರಬಹುದು.



















