ಬಸ್ ಪದದ ಫುಲ್ ಫಾರ್ಮ್ ಏನೆಂಬುದು ನಿಮ್ಗೆ ಗೊತ್ತಾ? ಹೆಚ್ಚಿನವರಿಗೆ ಈ ಬಗ್ಗೆ ಗೊತ್ತೇ ಇಲ್ಲ
ನಿತ್ಯ ಸಂಚಾರಕ್ಕೆ ಬಹುತೇಕ ಮಂದಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಈ ಬಸ್ ಪ್ರಮುಖ ಸಾರ್ವಜನಿಕ ಸಾರಿಗೆ ಸೇವೆಗಳಲ್ಲಿ ಒಂದಾಗಿದ್ದು, ಶಾಲಾ-ಕಾಲೇಜಿಗೆ ಹೋಗಲು, ಕೆಲಸಕ್ಕೆ ಹೋಗಿ ಬರಲು, ದೂರ ಪ್ರಯಾಣಕ್ಕೆ ಹೆಚ್ಚಿನವರು ಈ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಅದರಲ್ಲೂ ಕೆಲವರಿಗೆ ಬಸ್‌ನ ವಿಂಡೋ ಸೀಟ್ ಪಕ್ಕ ಕುಳಿತು ಪ್ರಯಾಣಿಸುವುದೆಂದರೆ ಬಲು ಇಷ್ಟ. ನೀವು ಕೂಡಾ ಬಸ್‌ನಲ್ಲಿ ಪ್ರಯಾಣಿಸಿರುತ್ತೀರಿ ಅಲ್ವಾ. ಈ ಬಸ್‌ನ ಪೂರ್ಣ ರೂಪ ಏನು ಎಂಬುದು ನಿಮಗೆ ತಿಳಿದಿದೆಯಾ? ಹೆಚ್ಚಿನವರಿಗೆ BUS ಪದದ ಫುಲ್ ಫಾರ್ಮ್ ಏನೆಂಬುದು ಗೊತ್ತಿಲ್ಲ. ಹಾಗಿದ್ರೆ ಬಸ್ ಪದದ ಫುಲ್ ಫಾರ್ಮ್ ಏನು? ಈ ಕುರಿತ ಇಂಟರೆಸ್ಟಿಂಗ್ ಸಂಗತಿಯನ್ನು ತಿಳಿಯಿರಿ.
Updated on:Apr 28, 2025 | 4:22 PM

ಸಾರ್ವಜನಿಕ ಸಾರಿಗೆ ಸೇವೆಗಳಲ್ಲಿ ಬಸ್ ಪ್ರಮುಖವಾಗಿದ್ದು, ಪ್ರತಿನಿತ್ಯ ಲಕ್ಷಾಂತರ ಮಂದಿ ತಮ್ಮ ನಿತ್ಯದ ಪ್ರಯಾಣಕ್ಕೆ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಹೆಚ್ಚಿನವರು ಶಾಲಾ-ಕಾಲೇಜುಗಳಿಗೆ, ಕೆಲಸಕ್ಕೆ ಹೆಚ್ಚಾಗಿ ಬಸ್‌ನಲ್ಲೇ ಹೋಗುತ್ತಾರೆ. ಹೀಗೆ ಬಹುತೇಕ ಮಂದಿ ಬಸ್ಸಿನಲ್ಲೇ ಪ್ರಯಾಣಿಸಿದರೂ ಕೂಡಾ ಹೆಚ್ಚಿನವರಿಗೆ ಈ ಬಸ್‌ನ ಪೂರ್ಣ ರೂಪ ಏನೆಂಬುದು ಗೊತ್ತಿಲ್ಲ.

ನಿಮ್ಗೂ ಕೂಡಾ ಬಸ್ ಪದದ ಫುಲ್ ಫಾರ್ಮ್ ಏನು ಎಂಬುದು ಗೊತ್ತಿಲ್ವಾ? ಅದಕ್ಕೆ ಉತ್ತರ ಇಲ್ಲಿದೆ. ಬಸ್ ಎಂಬ ಇಂಗ್ಲಿಷ್ ಪದವು ಲ್ಯಾಟಿನ್ ಮೂಲದಿಂದ ಬಂದಿದ್ದು, ಈ ಪದದ ಪೂರ್ಣ ರೂಪ ಓಮ್ನಿಬಸ್. ಇದರ ಅರ್ಥ “ಎಲ್ಲರಿಗೂ” ಎಂದು. ಇದನ್ನು ಫ್ರೆಂಚ್‌ನಲ್ಲಿ ವಾಯ್ಚರ್ ಆಮ್ನಿಬಸ್ ಎಂದು ಕರೆಯಲಾಗುತ್ತಿತ್ತು, ಇದರ ಅರ್ಥ ʼಎಲ್ಲರಿಗೂ ಒಂದು ವಾಹನʼ ಎಂದು. ಕಾಲಾನಂತರದಲ್ಲಿ ಇದನ್ನು ಆಡುಮಾತಿನಲ್ಲಿ ಬಸ್ ಎಂದು ಕರೆಯಲಾರಂಭಿಸಿದರು.

ಬಸ್ಸಿನ ಮೂಲ ಪರಿಕಲ್ಪನೆಯು ಕುದುರೆ ಎಳೆಯುವ ಸಾರ್ವಜನಿಕ ಸಾರಿಗೆ ವಾಹನಗಳೊಂದಿಗೆ ಪ್ರಾರಂಭವಾಯಿತು. ಆ ದಿನಗಳಲ್ಲಿ ಈ ವಾಹನಗಳನ್ನು ʼಓಮ್ನಿಬಸ್ʼ ಎಂದು ಕರೆಯಲಾಗುತ್ತಿತ್ತು. 1662 ರಲ್ಲಿ, ಫ್ರೆಂಚ್ ಗಣಿತಜ್ಞ ಮತ್ತು ತತ್ವಜ್ಞಾನಿ ಬ್ಲೇಸ್ ಪ್ಯಾಸ್ಕಲ್ ಪ್ಯಾರಿಸ್‌ನಲ್ಲಿ ಕುದುರೆ ಎಳೆಯುವ ಸಾರಿಗೆ ವ್ಯವಸ್ಥೆಯನ್ನು ಪರಿಚಯಿಸಿದರು. ಅದು ಅಷ್ಟಾಗಿ ಜನಪ್ರಿಯವಾಗಲಿಲ್ಲ ಮತ್ತು ಅದು ಶೀಘ್ರದಲ್ಲೇ ಮರೆಯಾಯಿತು. ನಂತರ 1820 ರ ದಶಕದಲ್ಲಿ ಸ್ಟಾನಿಸ್ಲಾಸ್ ಬೌಡ್ರಿ ಎಂಬವರು ಫ್ರಾನ್ಸ್‌ನ ನಾಂಟೆಸ್ ಎಂಬಲ್ಲಿ ಮೊದಲ ಯಶಸ್ವಿ ʼಓಮ್ನಿಬಸ್ʼ ಸೇವೆಯನ್ನು ಪ್ರಾರಂಭಿಸಿದರು.

ಮಾಹಿತಿಗಳ ಪ್ರಕಾರ, 1820 ರಲ್ಲೇ ಯುರೋಪ್‌ನಲ್ಲಿ ಬಸ್ ಸೇವೆಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ ಆ ಬಸ್ಸನ್ನು ಕುದುರೆಗಳು ಎಳೆಯಬೇಕಿತ್ತು. ಯಾಂತ್ರಿಕೃತ ಬಸ್ ಸೇವೆ 1882 ರ ಸುಮಾರಿಗೆ ಪ್ರಾರಂಭವಾಯಿತು ಮತ್ತು ಕಾಲಾನಂತರದಲ್ಲಿ ಅದರಲ್ಲೂ ಅನೇಕ ಬದಲಾವಣೆಗಳಾಯಿತು. ಭಾರತದಲ್ಲಿ ಬಸ್ ಸೇವೆ ಮೊದಲು 1926 ರಲ್ಲಿ ಮುಂಬೈನಲ್ಲಿ ಪ್ರಾರಂಭವಾಯಿತು.

1820 ರ ದಶಕದಲ್ಲಿ, ಸ್ಟಾನಿಸ್ಲಾಸ್ ಬೌಡ್ರಿ ಎಂಬವರು ಫ್ರಾನ್ಸ್‌ನ ನಾಂಟೆಸ್‌ನಲ್ಲಿ ಮೊದಲ ಯಶಸ್ವಿ "ಓಮ್ನಿಬಸ್" ಸೇವೆಯನ್ನು ಪ್ರಾರಂಭಿಸಿದರು. ಈ ಬಸ್‌ಗಳನ್ನು ಸಾಮಾನ್ಯವಾಗಿ ಕುದುರೆಗಳ ಮೂಲಕ ಎಳೆಯಲಾಗುತ್ತಿತ್ತು. 1900 ರ ದಶಕದ ಆರಂಭದಲ್ಲಿ, ಲಂಡನ್‌ನಲ್ಲಿ ವಿದ್ಯುತ್ ಬಸ್‌ಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿದವು. ನಂತರ, 1910 ಮತ್ತು 1920 ರ ದಶಕಗಳಲ್ಲಿ, ಡೀಸೆಲ್ ಮತ್ತು ಪೆಟ್ರೋಲ್ ಚಾಲಿತ ಬಸ್‌ಗಳು ವ್ಯಾಪಕವಾಗಿ ಬಳಸಲ್ಪಟ್ಟವು. ಈಗ ಹೆಚ್ಚಿನ ಜನ ತಮ್ಮ ನಿತ್ಯದ ಪ್ರಯಾಣಕ್ಕೆ ಸಾರ್ವಜನಿಕ ಸಾರಿಗೆ ಸೇವೆಗಳಲ್ಲಿ ಒಂದಾದ ಬಸ್‌ಗಳನ್ನೇ ಅವಲಂಬಿಸಿದ್ದಾರೆ.
Published On - 4:13 pm, Mon, 28 April 25









