ಬಸ್‌ ಪದದ ಫುಲ್‌ ಫಾರ್ಮ್‌ ಏನೆಂಬುದು ನಿಮ್ಗೆ ಗೊತ್ತಾ? ಹೆಚ್ಚಿನವರಿಗೆ ಈ ಬಗ್ಗೆ ಗೊತ್ತೇ ಇಲ್ಲ

Updated on: Apr 28, 2025 | 4:22 PM

ನಿತ್ಯ ಸಂಚಾರಕ್ಕೆ ಬಹುತೇಕ ಮಂದಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಈ ಬಸ್‌ ಪ್ರಮುಖ ಸಾರ್ವಜನಿಕ ಸಾರಿಗೆ ಸೇವೆಗಳಲ್ಲಿ ಒಂದಾಗಿದ್ದು, ಶಾಲಾ-ಕಾಲೇಜಿಗೆ ಹೋಗಲು, ಕೆಲಸಕ್ಕೆ ಹೋಗಿ ಬರಲು, ದೂರ ಪ್ರಯಾಣಕ್ಕೆ ಹೆಚ್ಚಿನವರು ಈ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಅದರಲ್ಲೂ ಕೆಲವರಿಗೆ ಬಸ್‌ನ ವಿಂಡೋ ಸೀಟ್‌ ಪಕ್ಕ ಕುಳಿತು ಪ್ರಯಾಣಿಸುವುದೆಂದರೆ ಬಲು ಇಷ್ಟ. ನೀವು ಕೂಡಾ ಬಸ್‌ನಲ್ಲಿ ಪ್ರಯಾಣಿಸಿರುತ್ತೀರಿ ಅಲ್ವಾ. ಈ ಬಸ್‌ನ ಪೂರ್ಣ ರೂಪ ಏನು ಎಂಬುದು ನಿಮಗೆ ತಿಳಿದಿದೆಯಾ? ಹೆಚ್ಚಿನವರಿಗೆ BUS ಪದದ ಫುಲ್‌ ಫಾರ್ಮ್‌ ಏನೆಂಬುದು ಗೊತ್ತಿಲ್ಲ. ಹಾಗಿದ್ರೆ ಬಸ್‌ ಪದದ ಫುಲ್‌ ಫಾರ್ಮ್‌ ಏನು? ಈ ಕುರಿತ ಇಂಟರೆಸ್ಟಿಂಗ್‌ ಸಂಗತಿಯನ್ನು ತಿಳಿಯಿರಿ.

1 / 5
ಸಾರ್ವಜನಿಕ ಸಾರಿಗೆ ಸೇವೆಗಳಲ್ಲಿ ಬಸ್‌ ಪ್ರಮುಖವಾಗಿದ್ದು, ಪ್ರತಿನಿತ್ಯ ಲಕ್ಷಾಂತರ ಮಂದಿ ತಮ್ಮ ನಿತ್ಯದ ಪ್ರಯಾಣಕ್ಕೆ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಹೆಚ್ಚಿನವರು ಶಾಲಾ-ಕಾಲೇಜುಗಳಿಗೆ, ಕೆಲಸಕ್ಕೆ ಹೆಚ್ಚಾಗಿ ಬಸ್‌ನಲ್ಲೇ ಹೋಗುತ್ತಾರೆ. ಹೀಗೆ ಬಹುತೇಕ ಮಂದಿ ಬಸ್ಸಿನಲ್ಲೇ ಪ್ರಯಾಣಿಸಿದರೂ ಕೂಡಾ ಹೆಚ್ಚಿನವರಿಗೆ ಈ ಬಸ್‌ನ ಪೂರ್ಣ ರೂಪ ಏನೆಂಬುದು ಗೊತ್ತಿಲ್ಲ.

ಸಾರ್ವಜನಿಕ ಸಾರಿಗೆ ಸೇವೆಗಳಲ್ಲಿ ಬಸ್‌ ಪ್ರಮುಖವಾಗಿದ್ದು, ಪ್ರತಿನಿತ್ಯ ಲಕ್ಷಾಂತರ ಮಂದಿ ತಮ್ಮ ನಿತ್ಯದ ಪ್ರಯಾಣಕ್ಕೆ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಹೆಚ್ಚಿನವರು ಶಾಲಾ-ಕಾಲೇಜುಗಳಿಗೆ, ಕೆಲಸಕ್ಕೆ ಹೆಚ್ಚಾಗಿ ಬಸ್‌ನಲ್ಲೇ ಹೋಗುತ್ತಾರೆ. ಹೀಗೆ ಬಹುತೇಕ ಮಂದಿ ಬಸ್ಸಿನಲ್ಲೇ ಪ್ರಯಾಣಿಸಿದರೂ ಕೂಡಾ ಹೆಚ್ಚಿನವರಿಗೆ ಈ ಬಸ್‌ನ ಪೂರ್ಣ ರೂಪ ಏನೆಂಬುದು ಗೊತ್ತಿಲ್ಲ.

2 / 5

ನಿಮ್ಗೂ ಕೂಡಾ ಬಸ್‌ ಪದದ ಫುಲ್‌ ಫಾರ್ಮ್‌ ಏನು ಎಂಬುದು ಗೊತ್ತಿಲ್ವಾ? ಅದಕ್ಕೆ ಉತ್ತರ ಇಲ್ಲಿದೆ. ಬಸ್ ಎಂಬ ಇಂಗ್ಲಿಷ್‌ ಪದವು ಲ್ಯಾಟಿನ್‌ ಮೂಲದಿಂದ ಬಂದಿದ್ದು, ಈ ಪದದ ಪೂರ್ಣ ರೂಪ ಓಮ್ನಿಬಸ್. ಇದರ ಅರ್ಥ “ಎಲ್ಲರಿಗೂ” ಎಂದು. ಇದನ್ನು ಫ್ರೆಂಚ್‌ನಲ್ಲಿ ವಾಯ್ಚರ್ ಆಮ್ನಿಬಸ್ ಎಂದು ಕರೆಯಲಾಗುತ್ತಿತ್ತು, ಇದರ ಅರ್ಥ ʼಎಲ್ಲರಿಗೂ ಒಂದು ವಾಹನʼ ಎಂದು. ಕಾಲಾನಂತರದಲ್ಲಿ ಇದನ್ನು ಆಡುಮಾತಿನಲ್ಲಿ ಬಸ್‌ ಎಂದು ಕರೆಯಲಾರಂಭಿಸಿದರು.

3 / 5

ಬಸ್ಸಿನ ಮೂಲ ಪರಿಕಲ್ಪನೆಯು ಕುದುರೆ ಎಳೆಯುವ ಸಾರ್ವಜನಿಕ ಸಾರಿಗೆ ವಾಹನಗಳೊಂದಿಗೆ ಪ್ರಾರಂಭವಾಯಿತು. ಆ ದಿನಗಳಲ್ಲಿ ಈ ವಾಹನಗಳನ್ನು ʼಓಮ್ನಿಬಸ್ʼ ಎಂದು ಕರೆಯಲಾಗುತ್ತಿತ್ತು. 1662 ರಲ್ಲಿ, ಫ್ರೆಂಚ್ ಗಣಿತಜ್ಞ ಮತ್ತು ತತ್ವಜ್ಞಾನಿ ಬ್ಲೇಸ್ ಪ್ಯಾಸ್ಕಲ್ ಪ್ಯಾರಿಸ್‌ನಲ್ಲಿ ಕುದುರೆ ಎಳೆಯುವ ಸಾರಿಗೆ ವ್ಯವಸ್ಥೆಯನ್ನು ಪರಿಚಯಿಸಿದರು. ಅದು ಅಷ್ಟಾಗಿ ಜನಪ್ರಿಯವಾಗಲಿಲ್ಲ ಮತ್ತು ಅದು ಶೀಘ್ರದಲ್ಲೇ ಮರೆಯಾಯಿತು. ನಂತರ 1820 ರ ದಶಕದಲ್ಲಿ ಸ್ಟಾನಿಸ್ಲಾಸ್ ಬೌಡ್ರಿ ಎಂಬವರು ಫ್ರಾನ್ಸ್‌ನ ನಾಂಟೆಸ್‌ ಎಂಬಲ್ಲಿ ಮೊದಲ ಯಶಸ್ವಿ ʼಓಮ್ನಿಬಸ್ʼ ಸೇವೆಯನ್ನು ಪ್ರಾರಂಭಿಸಿದರು.

4 / 5

ಮಾಹಿತಿಗಳ ಪ್ರಕಾರ, 1820 ರಲ್ಲೇ ಯುರೋಪ್‌ನಲ್ಲಿ ಬಸ್ ಸೇವೆಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ ಆ ಬಸ್ಸನ್ನು ಕುದುರೆಗಳು ಎಳೆಯಬೇಕಿತ್ತು. ಯಾಂತ್ರಿಕೃತ ಬಸ್ ಸೇವೆ 1882 ರ ಸುಮಾರಿಗೆ ಪ್ರಾರಂಭವಾಯಿತು ಮತ್ತು ಕಾಲಾನಂತರದಲ್ಲಿ ಅದರಲ್ಲೂ ಅನೇಕ ಬದಲಾವಣೆಗಳಾಯಿತು. ಭಾರತದಲ್ಲಿ ಬಸ್ ಸೇವೆ ಮೊದಲು 1926 ರಲ್ಲಿ ಮುಂಬೈನಲ್ಲಿ ಪ್ರಾರಂಭವಾಯಿತು.

5 / 5

1820 ರ ದಶಕದಲ್ಲಿ, ಸ್ಟಾನಿಸ್ಲಾಸ್ ಬೌಡ್ರಿ ಎಂಬವರು ಫ್ರಾನ್ಸ್‌ನ ನಾಂಟೆಸ್‌ನಲ್ಲಿ ಮೊದಲ ಯಶಸ್ವಿ "ಓಮ್ನಿಬಸ್" ಸೇವೆಯನ್ನು ಪ್ರಾರಂಭಿಸಿದರು. ಈ ಬಸ್‌ಗಳನ್ನು ಸಾಮಾನ್ಯವಾಗಿ ಕುದುರೆಗಳ ಮೂಲಕ ಎಳೆಯಲಾಗುತ್ತಿತ್ತು. 1900 ರ ದಶಕದ ಆರಂಭದಲ್ಲಿ, ಲಂಡನ್‌ನಲ್ಲಿ ವಿದ್ಯುತ್ ಬಸ್‌ಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿದವು. ನಂತರ, 1910 ಮತ್ತು 1920 ರ ದಶಕಗಳಲ್ಲಿ, ಡೀಸೆಲ್ ಮತ್ತು ಪೆಟ್ರೋಲ್ ಚಾಲಿತ ಬಸ್‌ಗಳು ವ್ಯಾಪಕವಾಗಿ ಬಳಸಲ್ಪಟ್ಟವು. ಈಗ ಹೆಚ್ಚಿನ ಜನ ತಮ್ಮ ನಿತ್ಯದ ಪ್ರಯಾಣಕ್ಕೆ ಸಾರ್ವಜನಿಕ ಸಾರಿಗೆ ಸೇವೆಗಳಲ್ಲಿ ಒಂದಾದ ಬಸ್‌ಗಳನ್ನೇ ಅವಲಂಬಿಸಿದ್ದಾರೆ.

Published On - 4:13 pm, Mon, 28 April 25

Loading...
Unable to load recommendations.
Follow Us