AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶಾಭಿಮಾನ ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಇದೆ, ದೇಶಸೇವೆಗೆ ಹೊರಟವು ಅಂಕೋಲಾದ 17 ಶ್ವಾನಮರಿಗಳು!

ದೇಶಾಭಿಮಾನ ಕೇವಲ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಇದೆ ಎಂಬುದು ಪದೆ ಪದೇ ಸಾಬೀತಾಗುತ್ತಿದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯ (Uttara Kannada) ಅಂಕೋಲದ 17 ಶ್ವಾನ ಮರಿಗಳು (Dog Breed) ಇದೀಗ ಭಾರತೀಯ ಸೈನ್ಯ (Indian Army) ಸೇರಿವೆ. ಅಷ್ಟಕ್ಕೂ ಈ ಶ್ವಾನ ಕುಟುಂಬಕ್ಕೆ ದೇಶ ಕಾಯುವ ಇತಿಹಾಸವಿದೆ. ಏನಿದು ವಿಶೇಷ ಅಂತೀರಾ ಈ ಸ್ಟೋರಿ ನೋಡಿ...

ವಿನಾಯಕ ಬಡಿಗೇರ್​
| Updated By: ಸಾಧು ಶ್ರೀನಾಥ್​|

Updated on: Jun 17, 2023 | 11:40 AM

Share
ದೇಶಾಭಿಮಾನ ಕೇವಲ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಇದೆ ಎಂಬುದು ಪದೆ ಪದೇ ಸಾಬೀತಾಗುತ್ತಿದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯ (Uttara Kannada) ಅಂಕೋಲದ 17 ಶ್ವಾನ ಮರಿಗಳು (Dog Breed) ಇದೀಗ ಭಾರತೀಯ ಸೈನ್ಯ (Indian Army) ಸೇರಿವೆ. ಅಷ್ಟಕ್ಕೂ ಈ ಶ್ವಾನ ಕುಟುಂಬಕ್ಕೆ ದೇಶ ಕಾಯುವ ಇತಿಹಾಸವಿದೆ. ಏನಿದು ವಿಶೇಷ ಅಂತೀರಾ ಈ ಸ್ಟೋರಿ ನೋಡಿ...

ದೇಶಾಭಿಮಾನ ಕೇವಲ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಇದೆ ಎಂಬುದು ಪದೆ ಪದೇ ಸಾಬೀತಾಗುತ್ತಿದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯ (Uttara Kannada) ಅಂಕೋಲದ 17 ಶ್ವಾನ ಮರಿಗಳು (Dog Breed) ಇದೀಗ ಭಾರತೀಯ ಸೈನ್ಯ (Indian Army) ಸೇರಿವೆ. ಅಷ್ಟಕ್ಕೂ ಈ ಶ್ವಾನ ಕುಟುಂಬಕ್ಕೆ ದೇಶ ಕಾಯುವ ಇತಿಹಾಸವಿದೆ. ಏನಿದು ವಿಶೇಷ ಅಂತೀರಾ ಈ ಸ್ಟೋರಿ ನೋಡಿ...

1 / 11
ಒಂದೆಡೆ ಗಜ ಗಾಂಭೀರ್ಯ ನೋಟ, ಮತ್ತೊಂದೆಡೆ ನೋಟದಲ್ಲೇ ಶತೃಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲ ಛಾಯೆ. ಹೌದು ನೀವೀಗ ನೋಡುತ್ತಿರು ಶ್ವಾನಗಳು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬಾವಿಕೇರಿಯ ರಾಘವೇಂದ್ರ ಭಟ್ ರವರ ಮನೆಯಲ್ಲಿ ಸಲಹಿರುವ ಬೆಲ್ಝಿಯಂ ಮೆಲಿನೋಯ್ಸ್ ತಳಿಯ ಶ್ವಾನಗಳು.

2 / 11
ರಾಘವೇಂದ್ರ ಭಟ್ ಅವರ ಬಳಿ ಕೆ.ಎಫ್. ಎಂಬ ಹೆಸರಿನ ನಾಲ್ಕು ವರ್ಷದ ಗಂಡು ಶ್ವಾನ, ಡೆವಿಲ್ ಎನ್ನುವ ಎರಡೂವರೆ ವರ್ಷದ ಗಂಡು ಶ್ವಾನ, ಲೀಸಾ ಹಾಗೂ ಟೈನಿ ಎನ್ನುವ ಮೂರು ವರ್ಷದ ಶ್ವಾನಗಳನ್ನು ಹವ್ಯಾಸಕ್ಕಾಗಿ ಸಾಕಿದ್ದಾರೆ.

3 / 11
 ಇವುಗಳ ಮರಿಗಳ ಪೋಟೋಗಳನ್ನ ರಾಘವೇಂದ್ರ ಭಟ್ ತಮ್ಮ ಫೇಸ್ ಬುಕ್ ನಲ್ಲಿ ಹಾಕಿದ್ದನ್ನು ಗಮನಿಸಿದ ಸೈನಿಕ ದಳದ ಅಧಿಕಾರಿಯೊಬ್ಬರು ಇವರನ್ನು ಸಂಪರ್ಕಿಸಿ ಸೈನ್ಯಕ್ಕೆ ಶ್ವಾನದ ಮರಿಗಳ ಬೇಡಿಕೆ ಇಟ್ಟಿದ್ದಾರೆ.

4 / 11
ನಂತರ ತಮ್ಮ ಅಧಿಕಾರಿಯನ್ನು ಅಸ್ಸಾಂನಿಂದ ಅಂಕೋಲಕ್ಕೆ ಕಳುಹಿಸಿ ಶ್ವಾನದ ಸಾಮರ್ಥ್ಯ, ಬುದ್ಧಿಮಟ್ಟ, ಆರೋಗ್ಯ ಪರೀಕ್ಷಿಸಿ ಇವುಗಳ ಆಹಾರ ಪದ್ದತಿಯನ್ನು 45 ದಿನಗಳ ಕಾಲ ಪರೀಕ್ಷಿಸಿ ಸೈನ್ಯಕ್ಕೆ ಪಡೆದುಕೊಳ್ಳಲು ಒಪ್ಪಿಗೆ ಸೂಚಿಸಿ ಮೂರು ತಿಂಗಳ ವಿಶೇಷ ನಿಗಾದೊಂದಿಗೆ ಅಸ್ಸಾಂ ನ ಸೈನಿಕ ತರಬೇತಿ ಕೇಂದ್ರಗಳಿಗೆ 17 ಶ್ವಾನಗಳನ್ನು ಕಳುಹಿಸಿಕೊಡಲಾಗಿದೆ.

5 / 11
ರಾಘವೇಂದ್ರ ಭಟ್ ರವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿದ್ದಾರೆ. ಶ್ವಾನ ಸಾಕುವುದು ಇವರ ಮೆಚ್ಚಿನ ಹವ್ಯಾಸದಲ್ಲಿ ಒಂದು. ಕಳೆದ 25 ವರ್ಷಗಳಿಂದ‌ ಇವರು ವಿಶೇಷ ಹಾಗೂ ಬೆಲೆ ಬಾಳುವ ತಳಿಗಳಾದ ಡಾಬರ್‌ಮನ್, ಜರ್ಮನ್ ಶೆಫರ್ಡ್, ಪಿಟ್‌ಬುಲ್, ಅಮೇರಿಕನ್ ಬುಲ್ಲಿ, ಮುಧೋಳ್, ಪಾಕಿಸ್ತಾನ ಬುಲ್ಲಿ, ಬಾಕ್ಸರ್, ಪಗ್, ಗ್ರೇಟ್ ಡೇನ್, ಲ್ರಾಬ್ರಡಾರ್ ಹಾಗೂ ಬೆಲ್ಝಿಯಂ‌ ಮೆಲಿನೋಯ್ಸ್ ಮುಂತಾದ ಶ್ವಾನದ ತಳಿಗಳನ್ನು ಸಾಕಿದ್ದಾರೆ.

6 / 11
ಪ್ರಸ್ತುತ ರಾಘವೇಂದ್ರ ಭಟ್ ಅವರ ಮನೆಯಲ್ಲಿ ಬೆಲ್ಝಿಯಂ ಮೆಲಿನೋಯ್ಸ್ ತಳಿಯ ನಾಲ್ಕು ಶ್ವಾನಗಳಿವೆ. ಈ ಹಿಂದೆ ಈ ಶ್ವಾನಗಳ ಮರಿಗಳು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸ್ಥಾನ ಪಡೆದರೆ ಇದೇ ಮೊದಲ ಬಾರಿಗೆ ಭಾರತೀಯ ಸೇನೆಯಲ್ಲಿ ಒಂದೇ ಬಾರಿಗೆ 17 ಶ್ವಾನ ಮರಿಗಳು ಸೇರ್ಪಡೆಗೊಂಡಿವೆ. ತಮ್ಮ ಮನೆಯಲ್ಲಿರುವ ಈ ಶ್ವಾನಗಳು ತುಂಬಾ ವಿಧೇಯವಾಗಿವೆ. ಇವುಗಳ ಮರಿಗಳು ದೇಶಸೇವೆಗೆ ಸೇರ್ಪಡೆಗೊಳ್ಳುತ್ತಿರುವುದು ಖುಷಿ ತಂದಿದೆ. ದುಡ್ಡಿಗಾಗಿ ಮಾರಾಟ ಮಾಡುವ ಇರಾದೆ ನಮಗಿಲ್ಲ, ಅವುಗಳು ಸೈನ್ಯಕ್ಕೆ ಸೇರುತ್ತಿವೆ ಎಂಬುದೇ ನಮಗೆ ಹೆಮ್ಮೆ ಎನ್ನುತ್ತಾರೆ ಈ ಶ್ವಾನಗಳ ಒಡತಿ ರಾಜೇಶ್ವರಿ.

7 / 11
ಬುದ್ದಿ ಚಾಣಾಕ್ಷತನ, ಧೈರ್ಯ, ಎಲ್ಲದಕ್ಕೂ ಹೊಂದಿಕೊಳ್ಳುವ ಶಕ್ತಿ ಹೊಂದಿರುವ ಬೆಲ್ಝಿಯಂ‌ ಮೆಲಿನೋಯ್ಸ್ ಶ್ವಾನಗಳು ಅಮೆರಿಕಾ ನಡೆಸಿದ ಬಿನ್ ಲಾಡನ್ ಹತ್ಯೆ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಹೆಚ್ಚು ಪ್ರಚಲಿತಕ್ಕೆ ಬಂದಿವೆ.

8 / 11
ಆದ್ರೆ ಲೀಸಾ ಹಾಗೂ ಟೈನಿ ಮರಿ ಹಾಕಿದಾಗ ಇವುಗಳ ಮರಿಗಳು ರಾಜ್ಯ ಪೊಲೀಸ್ ಇಲಾಖೆಯ ಶ್ವಾನದಳಕ್ಕೆ ಸೇರ್ಪಡೆಗೊಂಡವು .ಇದರ ನಂತರ ಮೂರು ತಿಂಗಳ ಹಿಂದೆ ಲೀಸಾ 10 ಮರಿಗಳಿಗೆ ಜನ್ಮ ನೀಡಿದರೇ ಟೈನಿ ಎಂಟು ಮರಿಗಳಿಗೆ ಜನ್ಮ ನೀಡಿತ್ತು.

9 / 11
ದೇಶಾಭಿಮಾನ ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಇದೆ, ದೇಶಸೇವೆಗೆ ಹೊರಟವು ಅಂಕೋಲಾದ 17 ಶ್ವಾನಮರಿಗಳು!

10 / 11
ಇದರ ನಂತರ ಯುರೋಪ್, ಬ್ರಿಟನ್, ಆಷ್ಟ್ರೇಲಿಯಾದ ಶ್ವಾನದಳದಲ್ಲಿಯೂ ಸ್ಥಾನ ಪಡೆದಿವೆ. ಇದಾದ ನಂತರ ಇದೀಗ ಭಾರತದಲ್ಲಿಯೂ ಸಹ ಸೈನ್ಯ, ಪೊಲೀಸ್ ಇಲಾಖೆಗಳಲ್ಲಿ ಸ್ಥಾನ ಪಡೆಯುತಿದ್ದು, ತನ್ನ ಬುದ್ಧಿಶಕ್ತಿಯಿಂದ ಜನರ ಪ್ರಾಣ ರಕ್ಷಣೆ ಮಾಡುತ್ತಿವೆ.

11 / 11
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ