ಬೆಂಗಳೂರು; ಡ್ರೈವರ್ ಸೀಟ್​ನಲ್ಲಿ ಡ್ರೈವರ್ ಇಲ್ಲ, ಆದರೂ ಊರೆಲ್ಲ ಸುತ್ತುತ್ತಿದೆ ಈ ಕಾರು

| Updated By: ಆಯೇಷಾ ಬಾನು

Updated on: May 20, 2024 | 7:09 AM

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಾಲಕನಿಲ್ಲದೇ ಕಾರು ಓಡಾಡುತ್ತಿದೆ. ಡ್ರೈವರ್ ಸೀಟ್​ನಲ್ಲಿ ಚಾಲಕನಿಲ್ಲದೆ ಕಾರು ರಸ್ತೆಗಿಳಿದಿರುವುದನ್ನು ಕಂಡು ಇತರೆ ಸವಾರರು ಶಾಕ್ ಆಗಿದ್ದಾರೆ. ಆದರೆ ನನ್ನ ರೀತಿ ಡ್ರೈವರ್ ಸೀಟ್ ಬಿಟ್ಟು ಯಾರೂ ಕಾರು ಚಾಲನೆ ಮಾಡಬೇಡಿ ಎಂದು ಫರಾನ್ ಮನವಿ ಮಾಡಿದ್ದಾರೆ.

1 / 8
ಬೆಂಗಳೂರಲ್ಲಿ ಕಳೆದ ನಾಲ್ಕೈದು ದಿನಗಳಿಂದ ಈ ಕಾರನ್ನ ನೋಡಿ ಜನರು ಶಾಕ್ ಆಗಿದ್ದಾರೆ. ಈ ಕಾರಲ್ಲಿ ದೆವ್ವ ಭೂತ ಏನಾದರೂ ಇದ್ಯಾ? ಡ್ರೈವರ್ ಸೀಟ್ ನಲ್ಲಿ ಡ್ರೈವರ್ ಇಲ್ಲದೆ ಕಾರು ಓಡಾಡಲು ಸಾಧ್ಯ ನಾ? ಎಂದು ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ. ಈ ಕಾರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಯಲ್ಲಿದೆ.

2 / 8
ಡ್ರೈವರ್ ಸೀಟ್ ನಲ್ಲಿ ಡ್ರೈವರ್ ಇಲ್ಲ. ಡ್ರೈವರ್ ಇಲ್ಲದೆ ಈ ಕಾರು ರಾಜ್ಯ ರಾಜಧಾನಿಯಲ್ಲಿ ಸಂಚಾರ ಮಾಡ್ತಿದೆ. ಯಾವುದೇ ಸಿಗ್ನಲ್, ಯಾವುದೇ ಟ್ರಾಫಿಕ್, ಎಂತಹದ್ರಲ್ಲೂ ಈ ಕಾರು ಸಂಚಾರ ಮಾಡುತ್ತೆ. ಎಲ್ಲೂ ನಿಲ್ಲಲ್ಲ. ಅಕ್ಕಪಕ್ಕದ ಸವಾರರು ಕಾರನ್ನು ಕಂಡು ಶಾಕ್ ಆಗಿ ನೋಡ್ತಿದ್ದಾರೆ.

3 / 8
ಜೆಪಿ ನಗರದ ನಿವಾಸಿ ಫರಾನ್, ಕಳೆದ ಹತ್ತು ವರ್ಷಗಳ ಹಿಂದಿನಿಂದ ಕಾರಿನ ಡ್ರೈವರ್ ಸೀಟ್ ನಲ್ಲಿ ಕುಳಿತುಕೊಳ್ಳದೆ ಪಕ್ಕದ ಸೀಟ್ ನಲ್ಲಿ ಕುಳಿತುಕೊಂಡು ಕಾರು ಚಾಲನೆ ಮಾಡುತ್ತಿದ್ದಾರೆ. ಅದು ತನ್ನ ಒಂದೇ ಕಾಲಿನಲ್ಲಿ ಡ್ರೈವ್ ಮಾಡ್ತಿದ್ದಾರೆ.

4 / 8
ಬ್ರೇಕ್, ಕ್ಲಚ್, ಆಕ್ಸಿಲೇಟರ್ ಹಾಗೂ ಗೇರ್ ಕೂಡ ಒಂದೇ ಕಾಲಿನಲ್ಲಿ ಅಪರೇಟ್ ಮಾಡ್ತಿದ್ದಾರೆ. ವಿಶೇಷ ಅಂದರೆ ಸ್ಟೇರಿಂಗ್ ಅನ್ನು ಕಾಲಿನಲ್ಲೇ ಆಪರೇಟ್ ಮಾಡ್ತಾರೆ. ಇದು ಹೇಗೆ ಸಾಧ್ಯ ಅಂದರೆ ಫರಾನ್ ಆರಡಿ ಮೂರಿಂಚು ಉದ್ದ ಇದ್ದಾರೆ.

5 / 8
ಇದರಿಂದ ತನ್ನ ಕಾಲಲ್ಲೇ ಆಪರೇಟ್ ಮಾಡಲು ಸಾಧ್ಯವಾಗಿದೆ. ನಾನು ಸಾಕಷ್ಟು ವರ್ಷಗಳಿಂದ ಪ್ರಾಕ್ಟೀಸ್ ಮಾಡಿ ಎಕ್ಸ್ಪಿರಿಯನ್ಸ್ ಆಗಿದೆ, ಹಾಗಾಗಿ ಇದು ಸಾಧ್ಯವಾಗಿದೆ. ಇದನ್ನು ದಯವಿಟ್ಟು ಯಾರು ಟ್ರೈ ಮಾಡಬೇಡಿ ಎಂದು ಮನವಿ ಮಾಡ್ತಿದ್ದಾರೆ.

6 / 8
ಇನ್ನೂ ಫರಾನ್ ಈ ಕಾರಿನ ಮೇಲೆ ಸಾಕಷ್ಟು ಸಮಾಜಕ್ಕೆ ಬೇಕಾದ ಸಂದೇಶಗಳ ಬಿತ್ತಿಪತ್ರಗಳನ್ನು ಹಾಕಿಕೊಂಡು ಸಿಟಿ ರೌಂಡ್ಸ್ ಹಾಕ್ತಾರೆ. ಮಹಿಳೆಯರನ್ನು ಗೌರವಿಸಿ, ಕುಡಿದು ವಾಹನ ಚಾಲನೆ ಮಾಡಬೇಡಿ, ಹೀಗೆ ಕಾರಿನ ಸುತ್ತಲೂ ಸುಮಾರು ಹತ್ತಕ್ಕೂ ಹೆಚ್ಚು ಪೋಸ್ಟರ್ ಗಳನ್ನು ಅಂಟಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

7 / 8
ನಾನು ಕಾರಿನಲ್ಲಿ ಡ್ರೈವರ್ ಇಲ್ಲದ್ದನ್ನು ಕಂಡು ಶಾಕ್ ಆದೆ. ಡ್ರೈವರ್ ಇಲ್ಲದೆ ಕಾರು ರನ್ ಆಗ್ತಿತ್ತು. ಅದಕ್ಕೆ ನಾನು ಸ್ಕೂಟರ್ ನಿಲ್ಲಿಸಿ ಬಂದು ಕಾರು ಒಳಗೆ ನೋಡಿದ್ರೆ ಡ್ರೈವರ್ ಸೀಟ್ ನಲ್ಲಿ ಯಾರು ಇಲ್ಲ. ಕಾರಿನ ಸುತ್ತ ಅಂಟಿಸಿರುವ ಪೋಸ್ಟರ್ ನೋಡಿ ಬಹಳ ಖುಷಿ ಆಯಿತು ಎಂದು ಬೈಕ್ ಸವಾರ ಶರೀಫ್ ತಿಳಿಸಿದರು.

8 / 8
ಒಟ್ನಲ್ಲಿ ನಾಲ್ಕೈದು ದಿನಗಳಿಂದ ಈ ಕಾರಿನಲ್ಲಿ ಫರಾನ್ ಸಿಟಿ ರೌಂಡ್ಸ್ ಹಾಕುತ್ತಿದ್ದು, ಈ ಕಾರನ್ನು ಕಂಡು ಜನರು ಕುತೂಹಲದಿಂದ ಪೋಟೋ ವಿಡಿಯೋ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಫರಾನ್ ಮುಂದಿನ ದಿನಗಳಲ್ಲಿ ಕನ್ನಡದಲ್ಲೂ ಸಂದೇಶ ಹಾಕಿಕೊಂಡು ನಗರವನ್ನು ಸುತ್ತಾಕ್ತಿನಿ ಅಂತಿದ್ದಾರೆ.