- Kannada News Photo gallery Duniya Vijay started shooting of Nandamuri Balakrishna starring NBK107 photos here
Duniya Vijay: ‘ಎನ್ಬಿಕೆ107’ ಚಿತ್ರದ ಶೂಟಿಂಗ್ ಆರಂಭಿಸಿದ ದುನಿಯಾ ವಿಜಯ್
NBK107: ದುನಿಯಾ ವಿಜಯ್ ಬಹುನಿರೀಕ್ಷಿತ ‘ಎನ್ಬಿಕೆ107’ ಚಿತ್ರದ ಚಿತ್ರೀಕರಣ ಆರಂಭಿಸಿದ್ದಾರೆ. ನಂದಮೂರಿ ಬಾಲಕೃಷ್ಣ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಮೂಲಕ ದುನಿಯಾ ವಿಜಯ್ ಟಾಲಿವುಡ್ ಪ್ರವೇಶ ಮಾಡುತ್ತಿದ್ದಾರೆ. ಅವರನ್ನು ಸೆಟ್ಗೆ ಸ್ವಾಗತಿಸಿದ ಫೋಟೋವನ್ನು ನಟ ಹಂಚಿಕೊಂಡಿದ್ದಾರೆ. ಪ್ರಸ್ತುತ ಆಕ್ಷನ್ ದೃಶ್ಯಗಳ ಶೂಟಿಂಗ್ನಲ್ಲಿ ವಿಜಯ್ ಭಾಗಿಯಾಗಿದ್ದಾರೆ ಎನ್ನಲಾಗಿದೆ.
Updated on:Mar 10, 2022 | 10:13 AM

ದುನಿಯಾ ವಿಜಯ್ ‘ಎನ್ಬಿಕೆ107’ ಚಿತ್ರದ ಮೂಲಕ ಟಾಲಿವುಡ್ಗೆ ಪ್ರವೇಶ ಮಾಡುತ್ತಿದ್ದಾರೆ. ಈ ಬಗ್ಗೆ ಕೆಲಸಮಯದ ಹಿಂದೆಯೇ ಘೋಷಣೆಯಾಗಿತ್ತು.

‘ಎನ್ಬಿಕೆ 107’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಗೋಪಿಚಂದ್.

ನಂದಮೂರಿ ಬಾಲಕೃಷ್ಣ ‘ಅಖಂಡ’ದ ಯಶಸ್ಸಿನಲ್ಲಿದ್ದಾರೆ. ಅವರ 107ನೇ ಚಿತ್ರ ‘ಎನ್ಬಿಕೆ 107’ ಆಗಿದ್ದು, ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆ. ಮೈತ್ರಿ ಮೂವಿ ಮೇಕರ್ಸ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.

ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಶೃತಿ ಹಾಸನ್ ಹಾಗೂ ವರಲಕ್ಷ್ಮಿ ಶರತ್ಕುಮಾರ್ ಕೂಡ ನಟಿಸುತ್ತಿದ್ದಾರೆ.

ಪ್ರಸ್ತುತ ದುನಿಯಾ ವಿಜಯ್ ‘ಎನ್ಬಿಕೆ 107’ ಚಿತ್ರದ ಚಿತ್ರೀಕರಣ ಆರಂಭಿಸಿದ್ದಾರೆ. ನಿರ್ದೇಶಕ ಗೋಪಿಚಂದ್ ಸೆಟ್ಗೆ ತಮ್ಮನ್ನು ಸ್ವಾಗತಿಸುತ್ತಿರುವ ಫೋಟೋವನ್ನು ದುನಿಯಾ ವಿಜಯ್ ಹಂಚಿಕೊಂಡಿದ್ದಾರೆ.

ಕೆಲವೇ ದಿನಗಳ ಹಿಂದೆ ದುನಿಯಾ ವಿಜಯ್ ತಮ್ಮ ಹೊಸ ಚಿತ್ರ ‘ಭೀಮ’ವನ್ನು ಅನೌನ್ಸ್ ಮಾಡಿದ್ದರು.
Published On - 9:59 am, Thu, 10 March 22




