- Kannada News Photo gallery Duniya Vijay Visits Rathnagiri Murugan Temple ahead of Bheema Movie Release
Bheema: ರತ್ನಗಿರಿ ದೇವಾಲಯಕ್ಕೆ ಭೇಟಿಕೊಟ್ಟ ‘ಭೀಮ’ ಚಿತ್ರತಂಡ
Bheema: ದುನಿಯಾ ವಿಜಯ್ ನಟಿಸಿ ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾ ಆಗಸ್ಟ್ 9 ರಂದು ಬಿಡುಗಡೆ ಆಗಲಿದೆ. ಇದರ ನಡುವೆ ದುನಿಯಾ ವಿಜಯ್ ರತ್ನಗಿರಿ ಮುರುಗನ್ ದೇವಾಲಯಕ್ಕೆ ಗೆಳೆಯರೊಟ್ಟಿಗೆ ಭೇಟಿ ನೀಡಿದ್ದಾರೆ.
Updated on: Aug 06, 2024 | 11:54 AM

ದುನಿಯಾ ವಿಜಯ್ ನಟಿಸಿ ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಚಿತ್ರತಂಡ ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದೆ.

ಕೆಲವು ದಿನಗಳ ಹಿಂದಷ್ಟೆ ದುನಿಯಾ ವಿಜಯ್, ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು, ಶ್ರೀಗಳ ಆಶೀರ್ವಾದವನ್ನು ಪಡೆದರು.

ಇದೀಗ ದುನಿಯಾ ವಿಜಯ್ ತಮ್ಮ ಕೆಲವು ಗೆಳೆಯರೊಟ್ಟಿಗೆ ರತ್ನಗಿರಿ ಮುರ್ಗನ್ ದೇವಸ್ಥಾನಕ್ಕೆ ಭೇಟಿ ನೀಡಿ, ಸಿನಿಮಾ ಯಶಸ್ವಿಯಾಗಲೆಂದು ಪ್ರಾರ್ಥನೆ ಮಾಡಿದ್ದಾರೆ.

ರತ್ನಗಿರಿ ಮುರ್ಗನ್ ದೇವಾಲಯಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಸ್ಥಳೀಯರೊಟ್ಟಿಗೆ ದುನಿಯಾ ವಿಜಯ್ ಬೆರೆತಿದ್ದಾರೆ. ಆಟೋ ಡ್ರೈವರ್ಗಳೊಟ್ಟಿಗೆ ವಿಜಿ ಹೆಜ್ಜೆ ಹಾಕಿರುವ ವಿಡಿಯೋ ವೈರಲ್ ಆಗುತ್ತಿದೆ.

ದುನಿಯಾ ವಿಜಯ್ ನಿರ್ದೇಶನ ಮಾಡಿರುವ ಎರಡನೇ ಸಿನಿಮಾ ‘ಭೀಮ’. ಇದಕ್ಕೂ ಮುಂಚೆ ‘ಸಲಗ’ ಸಿನಿಮಾ ನಿರ್ದೇಶನ ಮಾಡಿದ್ದರು ಆ ಸಿನಿಮಾ ಸೂಪರ್ ಹಿಟ್ ಆಗಿತ್ತು.

ದುನಿಯಾ ವಿಜಯ್ ನಿರ್ದೇಶನದ ‘ಭೀಮ’ ಸಿನಿಮಾ ಆಗಸ್ಟ್ 9 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಕತೆ ಬೆಂಗಳೂರಿನ ಅಂಡರ್ವರ್ಲ್ಡ್ ಕುರಿತಾದದ್ದಾಗಿದೆ.




