ಶಿಕ್ಷಣ ಎಂಬುದು ಪಾಠಕ್ಕೆ ಮಾತ್ರವಲ್ಲ, ಜೀವನಕ್ಕೂ ಮುಖ್ಯ: ಸುಧಾಮೂರ್ತಿ
ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯಲ್ಲಿ ಆರಂಭಿಸಲಾಗಿರುವ ವಿನೂತನ ಪ್ರಯೋಗಾಲಯ ಶಿಕ್ಷಣದ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ರಾಜ್ಯದ ಎಲ್ಲ ಶಾಲೆಗಳಲ್ಲಿ ಇಂತಹ ಪ್ರಯೋಗಾಲಯಗಳು ಆರಂಭವಾಗಬೇಕು ಎಂದು ಸುಧಾಮೂರ್ತಿ ಹೇಳಿದ್ದಾರೆ.
Updated on:Nov 02, 2022 | 7:17 PM

Sudha Murthy

Sudha Murthy

ಪ್ರತಿ ಮಗುವು ವಿಭಿನ್ನ ವಿಚಾರದಲ್ಲಿ ಆಸಕ್ತಿ ಹಾಗೂ ಕೌಶಲ್ಯ ಹೊಂದಿರುತ್ತದೆ. ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಕಲೆ, ಕೌಶಲ್ಯವನ್ನು ಗುರುತಿಸಿ ಗೌರವಿಸಬೇಕು. ಕೇವಲ ಅವರ ಅಂಕಗಳ ಬಗ್ಗೆ ಮಾತ್ರ ಗಮನ ಹರಿಸಬಾರದು. ಆ ಮೂಲಕ ಮಕ್ಕಳನ್ನು ಅವರ ಆಸಕ್ತಿ ವಿಚಾರದಲ್ಲಿ ಮೇಲೆತ್ತಬೇಕು.

ಮಕ್ಕಳಿಗೆ ತಂದೆ ತಾಯಿ, ಶಿಕ್ಷಕರು, ಸಹಪಾಠಿ, ಸಹೋದ್ಯೋಗಿಗಳ ಜತೆಗೆ ಉತ್ತಮ ಸಂಬಂಧ ಹೊಂದುವುದನ್ನು ಕಲಿಸುವುದು ಬಹಳ ಮುಖ್ಯ. ಆಗ ಅವರು ತಮ್ಮ ಸಮಸ್ಯೆಗಳ ಬಗ್ಗೆ ಮನೆಯವರು, ಸ್ನೇಹಿತರು, ಆಪ್ತರ ಜತೆ ಚರ್ಚೆ ಮಾಡಬಹುದು. ಹೀಗಾಗಿ ಉತ್ತಮ ಸಂಬಂಧ ಹೊಂದುವುದು ಬಹಳ ಮುಖ್ಯ.

ಇದು ಗೂಗಲ್ ಕಾಲ, ಇಲ್ಲಿ ಮಕ್ಕಳು ಎಲವನ್ನು ವಿಚಾರಗಳನ್ನು ಗೂಗಲ್ನಿಂದ ಕಲಿಯುತ್ತಾರೆ. ಈಗಿನ ಮಕ್ಕಳು ಬಹಳ ಬುದ್ಧಿವಂತರಿದ್ದು, ಪಾಠ ಮಾಡುವ ಮುನ್ನ ಬೋಧಕರು ಉತ್ತಮ ತಯಾರಿ ಮಾಡಿಕೊಳ್ಳಬೇಕು.

ನನ್ನ ಹಲವು ವಿದ್ಯಾರ್ಥಿಗಳು ಶಾಲೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ್ದರೂ ಅವರು ಜೀವನದಲ್ಲಿ ಯಶಸ್ಸು ಸಾಧಿಸದಿರುವ ಸಾಕಷ್ಟು ಉದಾಹರಣೆಗಳಿವೆ. ಮಕ್ಕಳ ತಪ್ಪುಗಳನ್ನು ಮೊದಲು ಮನೆಯಲ್ಲಿ ಅದರಲ್ಲೂ ತಾಯಿ ಸರಿಪಡಿಸಬೇಕು.

ನಮ್ಮಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಮನೆಯಿಂದ ಕೆಲವೊಂದು ಒತ್ತಡ ಹೆಚ್ಚುತ್ತಿದೆ. ಅದು ಅಂಕ ವಿಷಯದಲ್ಲಿಯಾಗಿದ್ದು ನಮ್ಮ ಮಕ್ಕಳನ್ನು ಅಂಕಕ್ಕೆ ಮಾತ್ರ ಸೀಮಿತಗೊಳಿಸುತ್ತೇವೆ. ಇದೊಂದು ಮಕ್ಕಳಿಗೆ ತುಂಬಾ ಪರಿಣಾಮವನ್ನು ಉಂಟು ಮಾಡುತ್ತದೆ. ಪಠ್ಯಕ್ರಮ ಜೀವನದ ಭಾಗವೇ ಹೊರತು, ಅದೇ ಇಡೀ ಜೀವನವಲ್ಲ.

ಅನೇಕ ಕಾರ್ಯಕ್ರಮಗಳಿಗೆ ನನಗೆ ಆಹ್ವಾನ ಬರುತ್ತದೆ, ಆದರೆ ನಾನು ನನಗೆ ವಿಭಿನ್ನ ಎನಿಸುವ ಕಾರ್ಯಕ್ರಮಗಳನ್ನು ಮಾತ್ರ ಹೋಗುತ್ತೇನೆ. ಐಶ್ವರ್ಯ ನನ್ನ ಬಳಿ ಬಂದು ಈ ಪ್ರಯೋಗಾಲಯದ ಬಗ್ಗೆ ತಿಳಿಸಿದಾಗ ನನಗೆ ಬಹಳ ಇಷ್ಟವಾಯಿತು.
Published On - 7:17 pm, Wed, 2 November 22



















