ಫಿಲಂಫೇರ್ ದಕ್ಷಿಣ 2024: ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಾರೆಯರ ಮೆರುಗು
Filmfare south awards 2024: ಫಿಲಂಫೇರ್ ದಕ್ಷಿಣ ಪ್ರಶಸ್ತಿ 2024 ನಿನ್ನೆಯಷ್ಟೆ ಹೈದರಾಬ್ನಲ್ಲಿ ಅದ್ಧೂರಿಯಾಗಿ ನಡೆದಿದೆ. ಕಾರ್ಯಕ್ರಮದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಹಲವು ದಿಗ್ಗಜರು ಭಾಗಿಯಾಗಿದ್ದರು. ಕಾರ್ಯಕ್ರಮದ ಕೆಲ ಸುಂದರ ಚಿತ್ರಗಳು ಇಲ್ಲಿವೆ.
1 / 7
69ನೇ ಫಿಲಂಫೇರ್ ದಕ್ಷಿಣ 2024 ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ 3 ರಂದು ಹೈದರಾಬಾದ್ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಅತ್ಯುತ್ತಮ ಸಿನಿಮಾಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯ್ತು.
2 / 7
ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗಗಳ ದೊಡ್ಡ ಸ್ಟಾರ್ ನಟರು, ನಟಿಯರು ಹೊಸ ನಟ-ನಟಿಯರು, ತಂತ್ರಜ್ಞರು, ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
3 / 7
ಪರಭಾಷೆ ನಟರಾದ ಮಮ್ಮುಟಿ, ತಮಿಳಿನ ಚಿಯಾನ್ ವಿಕ್ರಂ, ಕೀರ್ತಿ ಸುರೇಶ್, ನಟ ಸಿದ್ಧಾರ್ಥ್, ಬ್ರಹ್ಮಾನಂದಂ, ಅಲ್ಲು ಸಿರೀಶ್, ಆನಂದ್ ದೇವರಕೊಂಡ, ನವೀನ್ ಪೋಲಿಶೆಟ್ಟಿ, ವೆಟ್ರಿಮಾರನ್ ಇನ್ನೂ ಹಲವರು ಭಾಗಿಯಾಗಿದ್ದರು.
4 / 7
ಕನ್ನಡದ ‘ಸಪ್ತ ಸಾಗರದಾಚೆ ಎಲ್ಲೋ’, ‘ಟಗರು ಪಲ್ಯ’, ‘ಪಿಂಕಿ ಎಲ್ಲಿ’, ‘ಡೇರ್ಡೆವಿಲ್ ಮುಸ್ತಫ’ ಸೇರಿದಂತೆ ಹಲವು ಸಿನಿಮಾಗಳು ಪ್ರಶಸ್ತಿಗೆ ಭಾಜನವಾದವು. ನಟ-ನಟಿಯರು ಪ್ರಶಸ್ತಿ ಸ್ವೀಕರಿಸಿದರು.
5 / 7
ಕನ್ನಡದ ಕೆಲವು ಹೊಸ ಪ್ರತಿಭೆಗಳು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಶಸ್ತಿ ಪಡೆದು ಸಂಭ್ರಮಿಸಿದರು. ಅತ್ಯುತ್ತಮ ನಟ ಪ್ರಶಸ್ತಿ ಪಡೆದ ರಕ್ಷಿತ್ ಶೆಟ್ಟಿ ಕನ್ನಡದಲ್ಲಿಯೇ ಮಾತನಾಡಿದರು.
6 / 7
ಇದು 69ನೇ ಫಿಲಂಫೇರ್ ಆಗಿದ್ದು, ಕೆಲವು ದಿನಗಳ ಹಿಂದೆ ಹಿಂದಿ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಈಗ ದಕ್ಷಿಣ ಭಾರತದ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಯ್ತು.
7 / 7
‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾ ತುಸು ಹೆಚ್ಚು ಪ್ರಶಸ್ತಿ ಪಡೆಯಿತು. ರಕ್ಷಿತ್, ಹೇಮಂತ್, ರುಕ್ಮಿಣಿ ವಸಂತ್ ಭಾಗಿಯಾಗಿದ್ದರು. ‘ಟಗರು ಪಲ್ಯ’ ಸಿನಿಮಾಕ್ಕೂ ಕೆಲವು ಪ್ರಶಸ್ತಿಗಳು ದೊರೆತವು.