ಅತ್ಯುತ್ತಮವಾದ ಕಥೆ: ರಾಜಮೌಳಿ ಅವರು ಕಥೆಯ ಆಯ್ಕೆಯಲ್ಲಿ ಅತಿ ಹೆಚ್ಚು ಎಚ್ಚರಿಕೆ ವಹಿಸುತ್ತಾರೆ. ನಿಜಜೀವನಕ್ಕಿಂತಲೂ ದೊಡ್ಡದಾದ ಘಟನೆಯನ್ನು ಇಟ್ಟುಕೊಂಡು ಅವರು ಸಿನಿಮಾ ಮಾಡಲು ಬಯಸುತ್ತಾರೆ. ಮಗಧೀರ, ಬಾಹುಬಲಿ, ಆರ್ಆರ್ಆರ್ ಮುಂತಾದ ಸಿನಿಮಾಗಳಲ್ಲಿ ಈ ಮಾತು ಸಾಬೀತಾಗಿದೆ.
ಆಧುನಿಕ ಗ್ರಾಫಿಕ್ಸ್ ತಂತ್ರಜ್ಞಾನದ ಬಳಕೆ: ದೃಶ್ಯವೈಭವವನ್ನು ಕಟ್ಟಿಕೊಡುವಲ್ಲಿ ರಾಜಮೌಳಿ ಅವರು ಫೇಮಸ್. ಅವರ ಸಿನಿಮಾಗಳಲ್ಲಿ ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನ ಬಳಕೆ ಆಗಿರುತ್ತದೆ. ಆ ಮೂಲಕ ಅವರು ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತಾರೆ. ಈ ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು ಎಂಬ ಆಸೆ ಮೂಡುವಂತೆ ರಾಜಮೌಳಿ ಕೆಲಸ ಮಾಡುತ್ತಾರೆ.
ಪಾತ್ರಕ್ಕೆ ನ್ಯಾಯ ಒದಗಿಸುವ ಕಲಾವಿದರು: ಕಲಾವಿದರ ಆಯ್ಕೆಯಲ್ಲಿ ರಾಜಮೌಳಿ ಎಂದಿಗೂ ಎಡವಿಲ್ಲ. ಪಾತ್ರಕ್ಕೆ ಒಪ್ಪುವಂತಹ ಕಲಾವಿದರನ್ನು ಆಯ್ಕೆ ಮಾಡಿಕೊಂಡು, ಅವರಿಂದ ಅತ್ಯುತ್ತಮವಾಗಿ ನಟನೆ ಮಾಡಿಸುವಲ್ಲಿ ರಾಜಮೌಳಿ ಸಿದ್ಧಹಸ್ತರು. ಅವರ ನಿರ್ದೇಶನದಲ್ಲಿ ಅಭಿನಯಿಸಲು ಎಲ್ಲ ಕಲಾವಿದರೂ ಕೂಡ ಹಂಬಲಿಸುತ್ತಾರೆ.
ಅದ್ದೂರಿ ಬಜೆಟ್, ಸೂಪರ್ ಮೇಕಿಂಗ್: ರಾಜಮೌಳಿ ನಿರ್ದೇಶನದ ಸಿನಿಮಾ ಎಂದರೆ ಅದರ ಬಜೆಟ್ ಅದ್ದೂರಿಯಾಗಿಯೇ ಇರುತ್ತದೆ. ನೂರಾರು ಕೋಟಿ ರೂ. ಬಜೆಟ್ನಲ್ಲಿ ಅವರು ಸಿನಿಮಾ ಮಾಡುತ್ತಾರೆ. ಬೃಹತ್ ಸೆಟ್ಗಳನ್ನು ನಿರ್ಮಿಸುವ ಮೂಲಕ ಇನ್ನೊಂದು ಹೊಸ ಲೋಕವನ್ನೇ ಕಟ್ಟಿಕೊಡುತ್ತಾರೆ.
ಅವಸರಕ್ಕೆ ರಾಜಿ ಆಗಲ್ಲ: ಸಾಕಷ್ಟು ಸಮಯ ತೆಗೆದುಕೊಂಡು ತುಂಬ ತಾಳ್ಮೆಯಿಂದ ಸಿನಿಮಾ ಮಾಡುವುದು ರಾಜಮೌಳಿ ಅವರ ಜಾಯಮಾನ. ಕ್ವಾಲಿಟಿಯ ವಿಚಾರದಲ್ಲಿ ಅವರು ಎಂದಿಗೂ ರಾಜಿ ಆಗುವುದಿಲ್ಲ. ಎಷ್ಟೇ ಒತ್ತಡಗಳು ಇದ್ದರೂ ಅವರು ಅವಸರಕ್ಕೆ ಸಿನಿಮಾ ಮುಗಿಸುವುದಿಲ್ಲ.