ಹೌದು ರಾಜ್ಯದ ಮಲೆನಾಡು, ಕರಾವಳಿ, ಕಿತ್ತೂರು ಕರ್ನಾಟಕ ಭಾಗದ ಅನೇಕ ಜಿಲ್ಲೆಗಳಲ್ಲಿ ವರುಣದೇವ ಕಳೆದ ಕೆಲ ದಿನಗಳಿಂದ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ನಿರಂತರ ಮಳೆಯಿಂದ ಅನೇಕ ಅನಾಹುತಗಳು ನಡೆಯುತ್ತಿವೆ. ಯಾವಾಗ ಮಳೆ ನಿಲ್ಲುತ್ತೋ ಅಂತ ಅನೇಕ ಜಿಲ್ಲೆಯ ಜನರು ಕಾಯುತ್ತಿದ್ದಾರೆ. ಆದರೆ ನಮ್ಮದೇ ರಾಜ್ಯದ ಕೊಪ್ಪಳ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮಳೆಯ ಕೊರತೆ ಕಾಡುತ್ತಿದ್ದು, ರೈತರು ಉತ್ತಮ ಮಳೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.