ವಿವಿಯ ವಿದ್ಯಾರ್ಥಿಗಳ ಅಧ್ಯಯನ, ಅಭ್ಯಾಸಕ್ಕಾಗಿ,ರೈತರಿಗೆ ಪ್ರಾತ್ಯಕ್ಷಿಕೆ ಮಾಹಿತಿ ನೀಡುವುದರ ಸಮ್ಮುಖದಲ್ಲಿ ಇವುಗಳನ್ನು ಬೆಳೆಸಲಾಗಿದೆ. ವಿವಿ ಆವರಣದಲ್ಲಿ ಪುಷ್ಪ ಕೃಷಿ ವಿಭಾಗದಿಂದ ಚೆಂಡು ಹೂ, ಗ್ಲಾಡಿಯೋಲಾ, ಕೆಲಾರ್ಡಿಯಾ, ರುದ್ರಾಕ್ಷಿ ಹೂ, ಸ್ಪೈಡರ್ ಲಿಲಿ, ಕನಕಾಂಬರ, ಸುಗಂಧರಾಜ, ಪೆಟೊನಿಯಾ, ಸಾಲ್ವಿಯಾ, ಸಲೊಸಿಯಾ, ಡಯಾಂತಸ್, ಜಿನಿಯಾ, ಆರ್ನಾಮೆಂಟ್ ಸನ್ ಪ್ಲವರ್, ಗೌರಿ ಹೂ ಜೊತೆಗೆ ಉದ್ಯಾನವನ, ಅಲಂಕಾರಿಕ ಹೂ ಸೇರಿದಂತೆ ಐವತ್ತು ಬಗೆಯ ಹೂಗಳನ್ನು ಬೆಳೆಸಲಾಗಿದೆ.
50 ಬಗೆಯ ಹೂವಿನ ಪ್ರಭೇದದ ಹೂಗಳು ನೋಡುಗರನ್ನು ಆಕರ್ಷಣೆ ಮಾಡುತ್ತವೆ. ಈ ಹೂಗಳು ಕೇವಲ ವಿವಿ ಅಂದಕ್ಕೆ ಮಾತ್ರ ಸೀಮಿತವಲ್ಲ.ಇವುಗಳನ್ನು ಹೇಗೆ ಬೆಳೆಸಬೇಕು, ಯಾವ ಮಣ್ಣಲ್ಲಿ ಯಾವ ಹೂ ಬೆಳೆಯಬೇಕು, ಯಾವ ರೀತಿ ಹೂ ಕೃಷಿ ಮಾಡಬೇಕು ಎಂದೆಲ್ಲ ತೋಟಗಾರಿಕೆ ವಿವಿಯಲ್ಲಿ ರೈತರಿಗೆ ಆಗಲಿ ಬೇರೆ ಯಾರಿಗೆ ಆಗಲಿ ಮಾಹಿತಿ ನೀಡಲಾಗುತ್ತದೆ. ಇದರ ಸದುಪಯೋಗವನ್ನು ರೈತರು ಪಡೆಯಬಹುದಾಗಿದೆ ಅಂತಾರೆ ವಿವಿ ಸಿಬ್ಬಂದಿ.