ಖಾಲಿ ಹೊಟ್ಟೆಯಲ್ಲಿ ಈ ಆಹಾರ ತಿಂದರೆ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡುತ್ತವೆ, ವಿವರಗಳನ್ನು ತಿಳಿಯಿರಿ

|

Updated on: Mar 07, 2024 | 2:18 PM

ಈಗಿನ ಕಾಲಘಟ್ಟದಲ್ಲಿ ನಾನಾ ಆರೋಗ್ಯ ಸಮಸ್ಯೆಗಳು ಕಾಡತೊಡಗಿವೆ. ಉತ್ತಮ ಜೀವನಶೈಲಿ ಮತ್ತು ಸಮಂಜಸ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವುದು ಆರೋಗ್ಯಕರವಾಗಿರಲು ಉತ್ತಮ ಮಾರ್ಗವಾಗಿದೆ. ಪ್ರತಿ ಆಹಾರವನ್ನು ತಿನ್ನಲು ಸರಿಯಾದ ಸಮಯ ಅಂತಿದೆ. ಅಂತಹ ಪರಿಸ್ಥಿತಿಯಲ್ಲಿ, ಖಾಲಿ ಹೊಟ್ಟೆಯಲ್ಲಿ ಕೆಲವು ಆಹಾರ ತಿನ್ನುವುದನ್ನು ವೈದ್ಯ ಲೋಕ ಎಂದಿಗೂ ಅನುಮೋದಿಸುವುದಿಲ್ಲ.

1 / 7

2 / 7
ಈಗಿನ ಕಾಲಘಟ್ಟದಲ್ಲಿ ನಾನಾ ಆರೋಗ್ಯ ಸಮಸ್ಯೆಗಳು ಕಾಡತೊಡಗಿವೆ. ಉತ್ತಮ ಜೀವನಶೈಲಿ ಮತ್ತು ಸಮಂಜಸ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವುದು ಆರೋಗ್ಯಕರವಾಗಿರಲು ಉತ್ತಮ ಮಾರ್ಗವಾಗಿದೆ. ಪ್ರತಿ ಆಹಾರವನ್ನು ತಿನ್ನಲು ಸರಿಯಾದ ಸಮಯ ಅಂತಿದೆ. ಅಂತಹ ಪರಿಸ್ಥಿತಿಯಲ್ಲಿ, ಖಾಲಿ ಹೊಟ್ಟೆಯಲ್ಲಿ ಕೆಲವು ಆಹಾರ ತಿನ್ನುವುದನ್ನು ವೈದ್ಯ ಲೋಕ ಎಂದಿಗೂ ಅನುಮೋದಿಸುವುದಿಲ್ಲ. ಏಕೆಂದರೆ ಪೂರ್ಣ ಶಕ್ತಿಯಿಂದ ಕೆಲಸ ಮಾಡಲು ದೇಹಕ್ಕೆ ಸದಾ ಆಹಾರದ ಆಸರೆ ಬೇಕು.. ಇದಕ್ಕಾಗಿ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸುವುದು ಉತ್ತಮ.. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬಾರದ ಆಹಾರ ಪದಾರ್ಥಗಳು ಯಾವುವು ಎಂದು ಈಗ ತಿಳಿಯಿರಿ..

3 / 7
ಎಣ್ಣೆಯುಕ್ತ ಪದಾರ್ಥಗಳು: ಮುಂಜಾನೆಯೇ ಪೂರಿ ಅಥವಾ ಎಣ್ಣೆಯುಕ್ತ ತಿಂಡಿ ತಿನ್ನುವುದರಿಂದ ದಿನವಿಡೀ ಹೊಟ್ಟೆ ಉಬ್ಬರಿಸಿರುವ ಅನುಭವವಾಗುತ್ತದೆ. ಇದರಲ್ಲಿ ಎಣ್ಣೆ ಮತ್ತು ಕೊಬ್ಬಿನ ಅಂಶ ಹೆಚ್ಚಿರುವುದರಿಂದ ಹೊಟ್ಟೆ ಭಾರವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅವುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅಜೀರ್ಣವನ್ನು ಉಂಟುಮಾಡಬಹುದು, ಇದರಿಂದ ನೀವು ಆಲಸ್ಯವನ್ನು ಅನುಭವಿಸಬಹುದು.

4 / 7
ಹಸಿ ತರಕಾರಿ ಸಲಾಡ್: ಹಸಿ ತರಕಾರಿಯಿಂದ ಮಾಡಿದ ಸಲಾಡ್ ಅನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇದು ಸಾಮಾನ್ಯವಾಗಿ ಹೊಟ್ಟೆ ನೋವನ್ನು ಉಂಟುಮಾಡುತ್ತದೆ.

5 / 7
ಮಸಾಲೆಯುಕ್ತ ಆಹಾರ: ಬೆಳಗಿನ ಊಟದಲ್ಲಿ ಹೆಚ್ಚು ಮೆಣಸಿನಕಾಯಿ ಮತ್ತು ಮಸಾಲೆಗಳನ್ನು ಸೇವಿಸುವುದರಿಂದ ಹೊಟ್ಟೆಯ ಒಳಪದರದಲ್ಲಿ ಕಿರಿಕಿರಿ ಮತ್ತು ಉರಿಯೂತ ಉಂಟಾಗುತ್ತದೆ. ಅಲ್ಲದೆ, ಖಾಲಿ ಹೊಟ್ಟೆಯಲ್ಲಿ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಅಜೀರ್ಣ ಅಥವಾ ಎದೆಯುರಿ ಉಂಟಾಗುತ್ತದೆ.

6 / 7
ಬಾಳೆಹಣ್ಣು: ಬಾಳೆಹಣ್ಣು ಒಂದು ಪೌಷ್ಟಿಕ ಹಣ್ಣು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದಾಗ್ಯೂ, ಖಾಲಿ ಹೊಟ್ಟೆಯಲ್ಲಿ ತಿನ್ನುವ ತಪ್ಪನ್ನು ಮಾಡಬೇಡಿ. ಇದು ಕಾರ್ಬೋಹೈಡ್ರೇಟ್‌ಗಳು ಮತ್ತು ನೈಸರ್ಗಿಕ ಸಕ್ಕರೆಯ ಮೂಲವಾಗಿದೆ.

7 / 7
ಹುಳಿ ಹಣ್ಣುಗಳು: ಖಾಲಿ ಹೊಟ್ಟೆಯಲ್ಲಿ ಹುಳಿ ಹಣ್ಣುಗಳು ಅಥವಾ ರಸವನ್ನು ಸೇವಿಸುವುದು ಸಹ ಆರೋಗ್ಯಕರವಲ್ಲ. ಇದರೊಂದಿಗೆ ದಿನವನ್ನು ಪ್ರಾರಂಭಿಸುವುದರಿಂದ ಆಸಿಡ್ ರಿಫ್ಲಕ್ಸ್, ಅಸ್ವಸ್ಥತೆ ಮತ್ತು ಎದೆಯುರಿ ಉಂಟಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಇದು ಹುಣ್ಣುಗಳಿಗೆ ಕಾರಣವಾಗಬಹುದು.