- Kannada News Photo gallery Forbes Ranked list India’s Richest People 2021 See details here Latest business news in Kannada
India’s Richest People 2021: ಫೋರ್ಬ್ಸ್ ಸಿರಿವಂತರ ಪಟ್ಟಿ 2021; ಭಾರತದ ಶ್ರೀಮಂತ ವ್ಯಕ್ತಿಗಳಿವರು
ಫೋರ್ಬ್ಸ್ ನಿಯತಕಾಲಿಕೆಯು 2021ನೇ ಸಾಲಿನ ಭಾರತದ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆ ಪೈಕಿ ಮುಂಚೂಣಿಯಲ್ಲಿರುವವರ ವಿವರ ಇಲ್ಲಿದೆ.
Updated on:Nov 28, 2022 | 11:50 AM

Forbes Ranked list India’s Richest People 2021 See details here Latest business news in Kannada

Forbes Ranked list India’s Richest People 2021 See details here Latest business news in Kannada

ಹಣಕಾಸು ವ್ಯವಹಾರ ಮತ್ತು ಹೂಡಿಕೆಯ ಮೂಲಕ ಗುರುತಿಸಿಕೊಂಡಿದ್ದ, ಭಾರತದ ವಾರನ್ ಬಫೆಟ್ ಎಂದೇ ಖ್ಯಾತರಾಗಿದ್ದ ರಾಕೇಶ್ ಜುಂಜುನ್ವಾಲಾ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರು 4.3 ಶತಕೋಟಿ ಡಾಲರ್ ಮೌಲ್ಯದ ಸಂಪತ್ತಿನ ಒಡೆಯರಾಗಿದ್ದರು. ಇವರು 2022ರ ಆಗಸ್ಟ್ 14ರಂದು ಮೃತಪಟ್ಟಿದ್ದಾರೆ.

ಏಷ್ಯನ್ ಪೈಂಟ್ಸ್ನ ಕಾರ್ಯನಿರ್ವಾಹಕೇತರ ನಿರ್ದೇಶಕ ಅಭಯ್ ವಕೀಲ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರ ಸಂಪತ್ತಿನ ಮೌಲ್ಯ 4.6 ಶತಕೋಟಿ ಡಾಲರ್. ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಇವರ ಸ್ಥಾನ 622ನೇಯದ್ದು.

ಲುಲು ಗ್ರೂಪ್ ಇಂಟರ್ನ್ಯಾಷನಲ್ನ ಎಂ.ಎ. ಯೂಸಫ್ ಅಲಿ 4.8 ಶತಕೋಟಿ ಡಾಲರ್ ಮೌಲ್ಯದ ಸಂಪತ್ತಿನೊಂದಿಗೆ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 589ನೇ ಸ್ಥಾನ ಪಡೆದಿದ್ದಾರೆ.

ಕ್ಯಾಡಿಲಾ ಹೆಲ್ತ್ಕೇರ್ನ ಮಾಲೀಕ ಪಂಕಜ್ ಪಟೇಲ್ 5 ಶತಕೋಟಿ ಡಾಲರ್ ಮೌಲ್ಯದ ಸಂಪತ್ತು ಹೊಂದಿದ್ದು, ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.

ಈಚರ್ ಮೋಟರ್ಸ್ನ ಒಡೆಯ ವಿಕ್ರಂ ಲಾಲ್ ಮತ್ತು ಕುಟುಂಬದವರು 5 ಶತಕೋಟಿ ಡಾಲರ್ ಮೌಲ್ಯದ ಸಂಪತ್ತಿನೊಂದಿಗೆ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.

ಏಷ್ಯನ್ ಪೈಂಟ್ಸ್ನ ಮಹೇಂದ್ರ ಚೋಕ್ಸಿ ಮತ್ತು ಕುಟುಂಬದವರು 5.1 ಶತಕೋಟಿ ಡಾಲರ್ ಮೌಲ್ಯದ ಸಂಪತ್ತು ಹೊಂದಿದ್ದು, ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

5.3 ಶತಕೋಟಿ ಡಾಲರ್ ಮೌಲ್ಯದ ಸಂಪತ್ತು ಹೊಂದಿರುವ ಕಪಿಲ್ ಮತ್ತು ರಾಹುಲ್ ಭಾಟಿಯಾ ಅವರಿಗೂ ಪಟ್ಟಿಯಲ್ಲಿ ಸ್ಥಾನ ದೊರೆತಿದೆ. ಇವರು ಇಂಟರ್ಗ್ಲೋಬ್ ಏವಿಯೇಷನ್ನ ಮಾಲೀಕರಾಗಿದ್ದಾರೆ. ಇವರ ಕಂಪನಿಯ ಒಡೆತನದ ಇಂಡಿಗೊ ಭಾರತದಲ್ಲಿ ಪ್ರಸಿದ್ಧಿಪಡೆದಿದೆ.

Income Tax Department CBDT rules for Cash keeping at home Check rules regulations fine and other details in Kannada
Published On - 11:49 am, Mon, 28 November 22



















