ಶಿವಮೊಗ್ಗ: ಇದೇ ಮಾಸಾಂತ್ಯ (ಫೆಬ್ರವರಿ 27, 1943) ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ 80ನೇ ಹುಟ್ಟುಹಬ್ಬ ಆಚರಣೆ ಇದೆ. ಈ ಹಿನ್ನೆಲೆಯಲ್ಲಿ ಜನ್ಮದಿನಕ್ಕೂ ಮುನ್ನ ಶಿಕಾರಿಪುರ ತಾಲೂಕಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ಹುಟ್ಟು ಹಬ್ಬಕ್ಕೆ ಸೀರೆ ವಿತರಣೆ ಮಾಡಲಾಯಿತು. ಇಂದು ಬುಧವಾರ ಶಿಕಾರಿಪುರ ತಾಲೂಕಿನ ಹಿರೇಜಂಬೂರಿನಲ್ಲಿ 500 ಮನೆಗಳಿಗೆ ಸೀರೆ ಹಂಚಿಕೆ ಮಾಡಲಾಗಿದೆ.