AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ: ಬಾಣಸಿಗರಾದ ವಿದ್ಯಾರ್ಥಿಗಳು, ಬಾಯಲ್ಲಿ ನೀರು ಬರಿಸುವ ತಿಂಡಿ ತಿನ್ನಲು ಮುಗಿಬಿದ್ದ ಗ್ರಾಹಕರು

ಗದಗ ನಗರದ ಎಎಸ್​ಎಸ್ ಕಾಲೇಜ್ ಆವರಣದಲ್ಲಿ ವಿದ್ಯಾರ್ಥಿಗಳಲ್ಲಿ ಉದ್ಯೋಗದ ಕೌಶಲ್ಯಾಭಿವೃದ್ಧಿಗಾಗಿ ಆಹಾರ ಉತ್ಸವ ಆಯೋಜನೆ ಮಾಡಲಾಗಿತ್ತು. ಉದ್ಯಮದಲ್ಲಿ ಯಶಸ್ಸಿಯಾಗಲು ಏನೆಲ್ಲಾ ಮಾಡಬೇಕು? ಯಾವೆಲ್ಲ ಐಡಿಯಾಗಳು ಇವೆ ಅನ್ನೋದನ್ನು ವಿದ್ಯಾರ್ಥಿಗಳು ಅನಾವರಣ ಮಾಡಿದರು.

TV9 Web
| Edited By: |

Updated on:Jan 24, 2023 | 10:14 PM

Share
Gadag ASS College food festival Students prepared variety chaats Gadag news in kannada

ಕಾಲೇಜ್ ಆವರಣದಲ್ಲಿ ವಿದ್ಯಾರ್ಥಿಗಳ ಸಡಗರ, ಕಲರ್ ಕಲರ್ ಉಡುಗೆ ತೊಡುಗೆ ತೊಟ್ಟು ಫುಡ್ ಫೆಸ್ಟಿವಲ್​ಗೆ ಎಂಟ್ರಿಕೊಟ್ಟ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಬನ್ನಿ ಬನ್ನಿ ಸ್ಪೇಷಲ್ ಬಜ್ಜಿ, ಚಾಟ್ಸ್ ಅಂತಾ ಜೋರಾಗಿ ಹೇಳುತ್ತಾ ಗ್ರಾಹಕರನ್ನು ಕರೆಯುತ್ತಿದ್ದರು, ನಮ್ಮಲ್ಲಿ ಕಟ್ಲೇಕ್ ಕೇಕ್ ಸೂಪರ್ ಬನ್ನಿ ಅಂತಾನೂ ಕರೆಯುತ್ತಿದ್ದರು, ಇನ್ನೂ ವಿದ್ಯಾರ್ಥಿಗಳು ಬಾಯಿಯಲ್ಲಿ ನೀರು ಬರುವಂತೆ ಸಿದ್ಧಪಡಿಸಿದ ವೆರೈಟಿ ವೆರೈಟಿ ತಿಂಡಿಗಳ ನೋಡುಗರನ್ನು ಸುಮ್ಮನಿರಿಸುತ್ತಾ? ನೋಡಲು ಬಂದವರನ್ನು ಗ್ರಾಹಕರನ್ನಾಗಿ ಪರಿವರ್ತಿಸಿತು.

1 / 6
Gadag ASS College food festival Students prepared variety chaats Gadag news in kannada

ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಗದಗದ ಎಎಸ್​ಎಸ್​ ಕಾಲೇಜಿನಲ್ಲಿ. ವಿದ್ಯಾರ್ಥಿಗಳು ನಿತ್ಯ ಪಾಠದ ಜೊತೆಗೆ ಬ್ಯುಸಿಯಾಗಿರುತ್ತಿದ್ದರು. ಆದರೆ ಇಂದು ಆಹಾರ ಉತ್ಸವದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ವ್ಯಾಪಾರದಲ್ಲಿ ಬ್ಯುಸಿಯಾದರು. ಇದರ ಜೊತೆಗೆ ಸಖತ್ ಎಂಜಾಯ್ ಕೂಡ ಮಾಡಿದ್ದಾರೆ. ವಿದ್ಯಾರ್ಥಿಗಳು ತಯಾರಿಸಿದ ವೆರೈಟಿ, ವೆರೈಟಿ ಫುಡ್​ಗಳು ನೋಡುಗರ ಹಾಗೂ ಗ್ರಾಹಕರ ಬಾಯಿಯಲ್ಲಿ ನೀರು ಬರುವಂತೆ ಮಾಡುತ್ತಿತ್ತು. ಗ್ರಾಹಕರನ್ನು ತಮ್ಮ ಅಂಗಡಿಯತ್ತ ಸೆಳೆಯಲು ವಿದ್ಯಾರ್ಥಿಗಳು ವಿವಿಧ ಕಸರತ್ತುಗಳನ್ನು ಮಾಡಿದರು.

2 / 6
Gadag ASS College food festival Students prepared variety chaats Gadag news in kannada

ಕಟ್ಲೆಟ್ ಕೇಕ್, ಮುಂಡರಗಿ ಗಿರಮಿಟ್, ಬನ್ಸ್, ಪಾನಿ ಪುರಿ, ಪಾವ್ ಬನ್, ಓರೇ ಕೇಕ್, ಗುಲಾಬ್ ಜಾಮೂನು, ವಿವಿಧ ರೀತಿಯ ಪಾನಿಯಗಳು ವಿದ್ಯಾರ್ಥಿಗಳು ಸ್ಥಳದಲ್ಲೇ ತಯಾರಿಸಿ ಭರ್ಜರಿ ವ್ಯಾಪಾರ ಮಾಡಿದರು. ಗ್ರಾಹಕರನ್ನು ಸೆಳೆಯಲು ನಾನಾ ಕಸರತ್ತುಗಳನ್ನು ಕೂಡ ಮಾಡಿದರು. ಕೆಲವರು ಆಫ್ ಕೊಟ್ರೆ, ಇನ್ನೂ ಕೆಲವರು ಒಬ್ಬ ಗ್ರಾಹಕರ ಜೊತೆ ಇನ್ನೊಬ್ಬರಿಗೆ ಫ್ರೀ ಅನ್ನೋ ಮೂಲಕ ಗ್ರಾಹಕರ ಸೆಳೆಯುವ ತಂತ್ರಗಾರಿಕೆಯನ್ನು ಪ್ರಯೋಗಿಸಿದರು.

3 / 6
Gadag ASS College food festival Students prepared variety chaats Gadag news in kannada

ಕಾಲೇಜ್ ಆವರಣದಲ್ಲಿ ಬಿಕಾಂ ವಿದ್ಯಾರ್ಥಿಗಳಲ್ಲಿ ಉದ್ಯೋಗದ ಕೌಶಲ್ಯಾಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಆಹಾರ ಉತ್ಸವವನ್ನು ಆಯೋಜಿಸಲಾಗಿತ್ತು. ಗ್ರಾಹಕರನ್ನು ಆಕರ್ಷಿಸುವುದು ಹೇಗೆ? ಉದ್ಯಮದಲ್ಲಿ ಯಶಸ್ಸಿಯಾಗಲು ಏನೆಲ್ಲಾ ಮಾಡಬೇಕು? ಯಾವೆಲ್ಲಾ ಐಡಿಯಾಗಳನ್ನು ಅಳವಡಿಸಬೇಕು ಎಂಬುದನ್ನು ವಿದ್ಯಾರ್ಥಿಗಳು ಅನಾವರಣ ಮಾಡಿದರು. ಕಾಲೇಜ್ ಆವರಣದಲ್ಲಿ ಸುಮಾರು 20ಕ್ಕೂ ಅಧಿಕ ಸ್ಟಾಲ್ ಗಳು ಹಾಕಲಾಗಿತ್ತು. ಒಂದೊಂದು ಸ್ಟಾಲ್​ನಲ್ಲಿ ಒಂದೊಂದು ರೀತಿಯ ಫುಡ್​​ ಅನ್ನು ವಿದ್ಯಾರ್ಥಿಗಳು ತಯಾರಿಸಿದ್ದರು.

4 / 6
Gadag ASS College food festival Students prepared variety chaats Gadag news in kannada

ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿಗಳ ಉದ್ಯೋಗ ಕೌಶಲ್ಯ ಪರೀಕ್ಷೆ ಮಾಡಲು ವಾಣಿಜ್ಯ ವಿಭಾಗದ ಮುಖ್ಯಸ್ಥರು ಈ ಫುಡ್ ಫೆಸ್ಟಿವಲ್ ಆಯೋಜನೆ ಮಾಡಿದ್ದಾರೆ. ಕೆಲ ವಿದ್ಯಾರ್ಥಿಗಳು ಡಿಫರಂಟ್ ಡಿಫರಂಟ್ ಚಾಟ್ಸ್, ಸ್ನಾಕ್ಸ್, ಸಾಫ್ಟ್ ಡ್ರಿಂಕ್ಸ್ ಮಾಡಿ ಗಮನ ಸೆಳೆದರು. ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಹಿರಿಯ ವಿದ್ಯಾರ್ಥಿಗಳು ಮಾಡಿದ ಆಹಾರಗಳನ್ನು ಸವಿದು ಎಂಜಾಯ್ ಮಾಡಿದರು. ಇನ್ನೂ ನಿರ್ಣಾಯಕರು ಪ್ರತಿಯೊಂದು ಸ್ಟಾಲ್​ಗಳಿಗೆ ಹೋಗಿ ಆಹಾರದ ಗುಣಮಟ್ಟ ಪರೀಕ್ಷೆ ಮಾಡಿದರು.

5 / 6
Gadag ASS College food festival Students prepared variety chaats Gadag news in kannada

ಕೊನೆಗೆ ಯಾರೂ ಗುಣಮಟ್ಟದ ಆಹಾರ ತಯಾರಿ ಮಾಡಿದರು, ಯಾರು ಎಷ್ಟು ವ್ಯಾಪಾರ ಮಾಡಿದರು, ಗ್ರಾಹಕರನ್ನು ಸೆಳೆಯಲು ಪ್ರಯೋಗಿಸಿದ ತಂತ್ರಗಾರಿಕೆ ಇತ್ಯಾದಿಗಳನ್ನು ಪರಿಶೀಲನೆ ಮಾಡಿ ಯಶಸ್ವಿ ಉದ್ಯಮಿ ಅಂತ ಘೋಷಣೆ ಮಾಡಲಾಯಿತು. ನಿತ್ಯವೂ ಸಿರಿಯಸ್ ಮೂಡನಲ್ಲಿದ್ದ ವಿದ್ಯಾರ್ಥಿಗಳು ಇಂದು ಜಾಲಿ ಮೂಡನಲ್ಲಿದ್ದರು. ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳು ಫುಡ್ ತಯಾರಿಸಿ ವ್ಯಾಪಾರದಲ್ಲಿ ಎಂಗೇಜ್ ಆದರೆ, ಜೂನಿಯರ್ ವಿದ್ಯಾರ್ಥಿಗಳು ಸಿನಿಯರ್ಸ್​​ ಮಾಡಿದ ಆಹಾರವನ್ನು ಖರೀದಿಸಿ ಸವಿದರು. (ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ)

6 / 6

Published On - 10:14 pm, Tue, 24 January 23

ಚೂಪಾದ ಮುಳ್ಳುಗಳ ರಾಶಿ ಮೇಲೆ ನೃತ್ಯ; ತಮಿಳುನಾಡಿನಲ್ಲೊಂದು ವಿಶಿಷ್ಟ ಪದ್ಧತಿ
ಚೂಪಾದ ಮುಳ್ಳುಗಳ ರಾಶಿ ಮೇಲೆ ನೃತ್ಯ; ತಮಿಳುನಾಡಿನಲ್ಲೊಂದು ವಿಶಿಷ್ಟ ಪದ್ಧತಿ
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?