
ಭಕ್ತರು 10 ದಿನಗಳ ಕಾಲ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಗಣೇಶ ಉತ್ಸವವನ್ನು ವಿನಾಯಕ ನವರಾತ್ರಿ ಎಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ಅನಂತ ಚತುರ್ದಶಿಯ ದಿನದ ವರೆಗೆ ಆಚರಿಸಲಾಗುತ್ತದೆ. ಹತ್ತು ದಿನಗಳ ಕಾಲ ಆಚರಿಸಲಾಗುವ ಈ ಗಣಪತಿ ಹಬ್ಬವು ಈ ವರ್ಷ ಸೆಪ್ಟೆಂಬರ್ 7, 2024 ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 17 ರಂದು ಕೊನೆಗೊಳ್ಳಲಿದೆ. ಗಣಪತಿ ಎಂದರೆ ಎಲ್ಲಾ ರೀತಿಯ ಆಪತ್ತುಗಳನ್ನು ಹೋಗಲಾಡಿಸುವವನು ಎಂದರ್ಥ. ಆದರೆ, ವಾಸ್ತುವನ್ನು ಗಮನದಲ್ಲಿಟ್ಟುಕೊಂಡು, ವಿನಾಯಕನ ದಿನದಂದು ಗಣಪತಿಯನ್ನು ಮನೆಯಲ್ಲಿಟ್ಟರೆ, ಗಣಪತಿಯು ವಿಶೇಷ ಅನುಗ್ರಹವನ್ನು ನೀಡುತ್ತಾನೆ ಎಂಬ ನಂಬಿಕೆಯಿದೆ. ಹಬ್ಬಕ್ಕೆ ವಿಗ್ರಹವನ್ನು ಮನೆಗೆ ತರುವ ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ವಾಸ್ತು ಸಲಹೆಗಳ ಬಗ್ಗೆ ತಿಳಿಯೋಣ.

ಬಣ್ಣದ ಆಯ್ಕೆ: ನೈಸರ್ಗಿಕ ಜೇಡಿಮಣ್ಣು ಉತ್ತಮವಾಗಿದೆ. ಆದರೆ ವಾಸ್ತು ತಜ್ಞರ ಪ್ರಕಾರ ಗಣಪತಿ ಮೂರ್ತಿ ಮನೆಗಳಿಗೆ ಬಿಳಿ ಬಣ್ಣವೇ ಅತ್ಯುತ್ತಮ ಆಯ್ಕೆ. ಬಿಳಿ ಬಣ್ಣವು ಶಾಂತಿ ಮತ್ತು ಶುಚಿತ್ವದ ಸಂಕೇತವಾಗಿದೆ. ನಿಮ್ಮ ಮನೆಗೆ ಸಮೃದ್ಧಿ ಮತ್ತು ಶಾಂತಿಯನ್ನು ತರಲು ಸಹಾಯ ಮಾಡುತ್ತದೆ.

ಭಂಗಿಯನ್ನು ಜಾಗ್ರತೆಯಿಂದ ಗಮನಿಸಿ: ವಾಸ್ತು ಶಾಸ್ತ್ರದ ಪ್ರಕಾರ ಕುಳಿತ ಭಂಗಿಯಲ್ಲಿ ಅಥವಾ ಲಲಿತಾ ಆಸನದಲ್ಲಿ ವಿಗ್ರಹವನ್ನು ಖರೀದಿಸುವುದು ಉತ್ತಮ. ಈ ಭಂಗಿಯು ವಿಶ್ರಾಂತಿ ಮತ್ತು ಶಾಂತಿಯನ್ನು ನೀಡುತ್ತದೆ. ಮನೆಯನ್ನು ಹೆಚ್ಚು ಪ್ರಶಾಂತವಾಗಿಸಲು ಸಹಾಯ ಮಾಡುತ್ತದೆ.

ಗಣೇಶನ ಸೊಂಡಿಲು: ನಿಮ್ಮ ಮನೆಗೆ ವಿನಾಯಕನನ್ನು ತರುವ ಮೊದಲು, ವಿನಾಯಕನ ಸೊಂಡಿಲಿನನ್ನು ಗಮನಿಸಿ. ಸೊಂಡಿಲು/ ದಂತ ಎಡಕ್ಕೆ ಬಾಗಿದೆ (ಎಡಮುರಿ) ಎಂಬುದನ್ನು ಖಚಿತಪಡಿಸಿಕೊಳ್ಳಿ. ಅಂತಹ ವಿನಾಯಕನ ಮೂರ್ತಿಯನ್ನು ಮನೆಗೆ ತನ್ನಿ. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತದೆ.

ಗಣೇಶನನ್ನು ಪೂಜಿಸುವ ದಿಕ್ಕು: ವಾಸ್ತು ಶಾಸ್ತ್ರದ ಪ್ರಕಾರ ಗಣೇಶನ ಮೂರ್ತಿಯನ್ನು ಮನೆಯ ಪಶ್ಚಿಮ, ಉತ್ತರ ಮತ್ತು ಈಶಾನ್ಯ ಮೂಲೆಗಳಲ್ಲಿ ಇಡಬೇಕು. ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಒಬ್ಬನಾದ ಶಿವನು ಮನೆಯ ಉತ್ತರ ದಿಕ್ಕಿನಲ್ಲಿ ನೆಲೆಸಿದ್ದಾನೆ, ಆದ್ದರಿಂದ ಗಣೇಶನ ವಿಗ್ರಹವೂ ಅದೇ ದಿಕ್ಕಿನಲ್ಲಿರಬೇಕು.