
ಕಾರ್ತಿಕ್ ಮಹೇಶ್ ಅವರು ಈಗ ಕನ್ನಡ ಚಿತ್ರರಂಗದ ಬ್ಯುಸಿ ನಟ. ಅವರ ಮನೆಯಲ್ಲಿ ತಾಯಿ ಜೊತೆಗೂಡಿ ಗಣಪತಿಯನ್ನು ಇಡಲಾಗಿದೆ. ಈ ಗಣಪನಿಗೆ ಅವರು ಪೂಜೆ ಮಾಡಿದ್ದಾರೆ. ಈ ಸಂದರ್ಭದ ಫೋಟೋಗಳು ವೈರಲ್ ಆಗಿವೆ.

ಶಾನ್ವಿ ಶ್ರೀವಾಸ್ತವ ಅವರು ಹಬ್ಬದ ಸಮಯದಲ್ಲಿ ಹೊಸ ಸೀರೆ ಧರಿಸಿ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಹಬ್ಬದ ಶುಭಾಶಯ ಕೋರಿದ್ದಾರೆ. ಅವರ ಫ್ಯಾನ್ಸ್ ಈ ಫೋಟೋಗಳನ್ನು ನೋಡಿ ಖುಷಿಪಟ್ಟಿದ್ದಾರೆ. ಫ್ಯಾನ್ಸ್ ಕಡೆಯಿಂದ ಫೋಟೋಗೆ ಲೈಕ್ಸ್ ಸಿಕ್ಕಿವೆ.

ನಟಿ ಗೌತಮಿ ಜಾಧವ್ ಅವರು ‘ಸತ್ಯ’ ಹಾಗೂ ‘ಬಿಗ್ ಬಾಸ್’ ಮೂಲಕ ಗುರುತಿಸಿಕೊಂಡವರು. ಹಬ್ಬದ ದಿನ ಅವರು ಗಿಡವನ್ನು ಹಿಡಿದು ಪೋಸ್ ಕೊಟ್ಟ ಪೋಸ್ಟ್ ಹಾಕಿದ್ದಾರೆ. ಈ ಮೂಲಕ ಭಿನ್ನವಾಗಿ ಅವರು ಹಬ್ಬ ಆಚರಿಸಿದ್ದಾರೆ ಎನ್ನಬಹುದು.

ಗೌರಿ ಗಣೇಶ ಪೂಜೆಯಲ್ಲಿ ನಟಿ ತಾರ ಭಾಗಿ ಆದರು ಮತ್ತು ಮುತ್ತೈದೆ ಇಂದ ಭಾಗಿನ ಸ್ವೀಕರಿಸಿದರು. ತಾರಾ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ವಿವಿಧ ಪಾತ್ರಗಳ ಮೂಲಕ ಅವರು ಮೆಚ್ಚುಗೆ ಪಡೆದಿದ್ದಾರೆ.

ನಟಿ ಕಾರುಣ್ಯಾ ರಾಮ್ ಅವರು ಇತ್ತೀಚೆಗೆ ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಹಾಗಂತ ಅವರು ಸೋಶಿಯಲ್ ಮೀಡಿಯಾದಲ್ಲಿ ನಿರಂತರವಾಗಿ ಪೋಸ್ಟ್ಗಳನ್ನು ಮಾಡುತ್ತಾ ಇರುತ್ತಾರೆ. ಅವರು ಗಣೇಶ ಚತುರ್ಥಿಯನ್ನು ಖುಷಿಯಿಂದ ಆಚರಿಸಿದ್ದಾರೆ.

ನಟಿ ಮಯೂರಿ ಅವರು ಕನ್ನಡ ಚಿತ್ರರಂಗದಲ್ಲಿ ಹಾಗೂ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರ ಮನೆಯಲ್ಲಿ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಈ ಫೋಟೋಗಳನ್ನು ಅವರು ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ದರ್ಶನ್ ಇಲ್ಲದೆ ವಿಜಯಲಕ್ಷ್ಮಿ ಅವರು ಗಣೇಶ ಚತುರ್ಥಿ ಆಚರಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿನಲ್ಲಿ ಇದ್ದಾರೆ.