ಶ್ರೀರಾಮನು ಅಯೋಧ್ಯೆಗೆ ಹಿಂದಿರುಗಿದ ದಿನವೆಂದು ದೀಪಾವಳಿಯನ್ನು ಆಚರಿಸಲಾಗುತ್ತದೆಯಾದರೂ, ಈ ಮಂಗಳಕರ ದಿನದಂದು ಪ್ರತಿ ಮನೆಯಲ್ಲೂ ಲಕ್ಷ್ಮಿ ದೇವತೆ ಮತ್ತು ಭಗವಾನ್ ಗಣೇಶನನ್ನು ಸ್ವಾಗತಿಸಲಾಗುತ್ತದೆ. ಲಕ್ಷ್ಮಿ ದೇವಿಯು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾಗಿದ್ದು, ಗಣೇಶನನ್ನು ಬುದ್ಧಿವಂತಿಕೆಯ ದೇವರು ಎಂದು ಪರಿಗಣಿಸಲಾಗುತ್ತದೆ.
ಬುದ್ಧಿವಂತಿಕೆಯ ಜೊತೆಗೆ ಸಂಪತ್ತನ್ನು ಸ್ವಾಗತಿಸಲು ಜನರು ಈ ಎರಡು ದೇವತೆಗಳನ್ನು ಪೂಜಿಸುತ್ತಾರೆ. ಮಹಾಲಕ್ಷ್ಮಿ ದೇವಿಯ ರೂಪಗಳನ್ನು ಪೂಜಿಸುವುದು ದೀಪಾವಳಿಯ ಅತ್ಯಂತ ಮಹತ್ವದ ನಿರ್ಣಾಯಕ ಭಾಗವಾಗಿದೆ. ದೀಪಾವಳಿಯ ರಾತ್ರಿ ಲಕ್ಷ್ಮಿ ದೇವಿಯು ಪ್ರತಿ ಮನೆಗೆ ಭೇಟಿ ನೀಡುತ್ತಾಳೆ ಮತ್ತು ಎಲ್ಲರಿಗೂ ಹೆಚ್ಚಿನ ಸಂಪತ್ತನ್ನು ನೀಡುತ್ತಾಳೆ ಎಂದು ಹೇಳಲಾಗುತ್ತದೆ.
ಹಾಗಾದರೆ ಲಕ್ಷ್ಮಿ ಮತ್ತು ಗಣೇಶನನ್ನು ಒಟ್ಟಿಗೆ ಏಕೆ ಪೂಜಿಸುತ್ತಾರೆ? ದೀಪಾವಳಿಯಂದು ಲಕ್ಷ್ಮಿ ಮತ್ತು ಗಣೇಶನನ್ನು ಪೂಜಿಸುವ ಹಿಂದೆ ಒಂದು ಕುತೂಹಲಕಾರಿ ಕಥೆಯಿದೆ. ಧರ್ಮಗ್ರಂಥಗಳ ಪ್ರಕಾರ ಒಮ್ಮೆ ಲಕ್ಷ್ಮಿ ದೇವಿಯು ತನ್ನ ಶಕ್ತಿಗಳು ಮತ್ತು ಸಂಪತ್ತಿನ ಬಗ್ಗೆ ಬಹಳ ಸೊಕ್ಕಿನಿಂದ ಬೆಳೆದಳು. ಎಲ್ಲರಿಗೂ ಧನ ಮತ್ತು ಸಂಪತ್ತನ್ನು ದಯಪಾಲಿಸುವ ಅಧಿದೇವತೆ ಲಕ್ಷ್ಮಿ. ದೇವಿಯು ತನ್ನ ಪತಿ ಭಗವಂತ ವಿಷ್ಣುವಿನೊಂದಿಗೆ ಸಂಭಾಷಣೆ ನಡೆಸುತ್ತಿರುವಾಗ ತನ್ನನ್ನು ತಾನೇ ಹೊಗಳಿಕೊಳ್ಳುತ್ತಲೇ ಇದ್ದಳು. ಭಗವಂತ ವಿಷ್ಣುವು ಅವಳ ಅಹಂಕಾರವನ್ನು ತೊಡೆದುಹಾಕಲು ನಿರ್ಧರಿಸಿದನು.

ದುಃಖಿತಳಾದ ಲಕ್ಷ್ಮಿ ದೇವಿಯು ಈ ವಿಷಯದಲ್ಲಿ ಸಹಾಯ ಮತ್ತು ಸಲಹೆಯನ್ನು ಪಡೆಯಲು ಪಾರ್ವತಿ ದೇವಿಯ ಬಳಿಗೆ ಹೋದಳು. ಪಾರ್ವತಿ ದೇವಿಗೆ ಆರು ಮುಖದ ಕಾರ್ತಿಕೇಯ ಮತ್ತು ಗಣೇಶ ಎಂಬ ಇಬ್ಬರು ಗಂಡು ಮಕ್ಕಳಿದ್ದ ಕಾರಣ, ಮಾತೃತ್ವದ ಸಂತೋಷವನ್ನು ಅನುಭವಿಸಲು ತನ್ನ ಒಬ್ಬ ಮಗನನ್ನು ದತ್ತು ನೀಡುವಂತೆ ದೇವಿಯನ್ನು ವಿನಂತಿಸಿದಳು.
ತನ್ನ ಮಗ ಗಣೇಶನನ್ನು ಲಕ್ಷ್ಮಿಯು ದತ್ತು ತೆಗೆದುಕೊಳ್ಳಲು ಪಾರ್ವತಿಗೆ ಇಷ್ಟವಿರಲಿಲ್ಲ. ಏಕೆಂದರೆ ಲಕ್ಷ್ಮಿಯು ಒಂದೇ ಸ್ಥಳದಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ತಿಳಿದಿತ್ತು. ಹಾಗಾಗಿ ಮಗನನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಆತಂಕ ಚಿಂತೆ ಕಾಡತೊಡಗುತ್ತದೆ ಪಾರ್ವತಿ ದೇವಿಗೆ. ಆಗ ಲಕ್ಷ್ಮಿಯು ಗಣೇಶನನನ್ನು ಸಾಧ್ಯವಿರುವ ಎಲ್ಲ ರೀತಿಯಲ್ಲಿ ನೋಡಿಕೊಳ್ಳುವುದಾಗಿ ಪಾರ್ವತಿಗೆ ಭರವಸೆ ನೀಡಿದಳು ಮತ್ತು ಅವನಿಗೆ ಎಲ್ಲಾ ಸಂತೋಷವನ್ನು ದಯಪಾಲಿಸಿಸುವುದಾಗಿ ಹೇಳಿದಳು.
ಲಕ್ಷ್ಮಿಯ ನೋವನ್ನು ಅರ್ಥಮಾಡಿಕೊಂಡ ಪಾರ್ವತಿ ದೇವಿಯು ಗಣೇಶನನ್ನು ಲಕ್ಷ್ಮಿಯ ದತ್ತು ಮಗನಾಗಿ ಸ್ವೀಕರಿಸಲು ಅವಕಾಶ ಮಾಡಿಕೊಟ್ಟಳು. ಲಕ್ಷ್ಮಿ ದೇವಿಯು ಅತ್ಯಂತ ಸಂತೋಷ ಭರಿತಳಾದಳು ಮತ್ತು ಗಣೇಶನನ್ನು ತನ್ನ ಎಲ್ಲಾ ಸಾಧನೆಗಳು ಮತ್ತು ಸಮೃದ್ಧಿಯೊಂದಿಗೆ ದಯಪಾಲಿಸುವುದಾಗಿ ಹೇಳಿದಳು. ಐಶ್ವರ್ಯಕ್ಕಾಗಿ ಲಕ್ಷ್ಮಿಯನ್ನು ಪೂಜಿಸುವವರು ಮೊದಲು ಗಣೇಶನನ್ನು ಪೂಜಿಸಿ, ನಂತರವಷ್ಟೇ ಆಕೆಯ ಆಶೀರ್ವಾದವನ್ನು ಪಡೆಯಬೇಕು. ಗಣೇಶನಿಲ್ಲದೆ ಲಕ್ಷ್ಮಿಯನ್ನು ಪೂಜಿಸುವವರಿಗೆ ದೇವಿಯ ಅನುಗ್ರಹವಿರುವುದಿಲ್ಲ. ಆದ್ದರಿಂದ ಗಣೇಶನ ಜೊತೆಗೆ ಲಕ್ಷ್ಮಿ ದೇವಿಯನ್ನು ಯಾವಾಗಲೂ ಪೂಜಿಸಲಾಗುತ್ತದೆ.

Published On - 6:06 am, Mon, 2 September 24