ನಟ ಗೋಲ್ಡನ್ ಸ್ಟಾರ್ ಕುಟುಂಬ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಗಣೇಶ್ ಮಕ್ಕಳು ಮತ್ತು ಗಣೇಶ್ ಕುಂಬ್ಳೆ ಅವರೊಟ್ಟಿಗೆ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡಿದ್ದು ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇಬ್ಬರು ಮಕ್ಕಳೊಡನೆ ಗಣೇಶ್ ಅನಿಲ್ ಕುಂಬ್ಳೆ ಮನೆಗೆ ಭೇಟಿ ನೀಡಿದ್ದು ಕ್ರಿಕೆಟ್ ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.
ಗಣೇಶ್ ಹಂಚಿಕೊಂಡಿರುವ ಚಿತ್ರಗಳಲ್ಲಿ ಗೋಡೆಯ ಮೇಲೆ ಕಾಣುತ್ತಿರುವ ಕ್ರಿಕೆಟ್ ಚೆಂಡುಗಳನ್ನು ಜೋಡಿಸಿ ಮಾಡಿರುವ ಆಕೃತಿ ಗಮನ ಸೆಳೆಯುತ್ತಿದೆ.
ಅನಿಲ್ ಕುಂಬ್ಳೆ ವಿಕೆಟ್ ಪಡೆದ ಚೆಂಡುಗಳನ್ನು ಸಂಗ್ರಹಿಸಿ ಆ ಕಲಾಕೃತಿ ಮಾಡಲಾಗಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಸಹ ಕ್ರಿಕೆಟ್ನ ದೊಡ್ಡ ಅಭಿಮಾನಿ ಹಾಗೂ ಸ್ವತಃ ಒಳ್ಳೆಯ ಆಟಗಾರರು ಸಹ.
ಇತ್ತೀಚೆಗೆ ಮುಕ್ತಾಯಗೊಂಡ ಸಿಸಿಎಲ್ನಲ್ಲಿ ಗಣೇಶ್ ನೇತೃತ್ವದ ಗಂಗಾ ತಂಡ ಚೆನ್ನಾಗಿ ಚಾಂಪಿಯನ್ ಆಗಿದೆ.