ಶಿವರಾಜ್ಕುಮಾರ್ ಅವರು ಈಗ ತೆಲುಗಿನಲ್ಲಿ ಮುಖ್ಯ ಭೂಮಿಕೆ ನಿರ್ವಹಿಸಲು ರೆಡಿ ಆಗಿದ್ದಾರೆ. ಆಂಧ್ರ ಪ್ರದೇಶದಲ್ಲಿ ಗುಮ್ಮಡಿ ನರಸಯ್ಯ ಅವರ ಪಾತ್ರದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಇಂದು (ಡಿಸೆಂಬರ್ 6) ನಡೆದಿದೆ.

ಗುಮ್ಮಡಿ ನರಸಯ್ಯ ಪಾತ್ರದಲ್ಲಿ ಶಿವಣ್ಣ ನಟಿಸುತ್ತಿರುವುದು ಅಭಿಮಾನಿಗಳಿಗೆ ಖಷಿ ನೀಡಿದೆ. ನರಸಯ್ಯ ಹುಟ್ಟೂರಾದ ಆಂಧ್ರದ ಪಲ್ವಂಚಾದಲ್ಲಿ ಮುಹೂರ್ತ ಸಮಾರಂಭ ನಡೆದಿದೆ. ಶಿವಣ್ಣ ದಂಪತಿಯನ್ನು ಸ್ವಾಗತಿಸಲು ಇಡೀ ಊರಿಗೆ ಊರೇ ಅಲ್ಲಿ ಜಮಾಯಿಸಿತ್ತು ಎಂಬುದು ವಿಶೇಷ. ಇದು ಮುಹೂರ್ತದ ಫೋಟೋ.

ಶಿವರಾಜ್ಕುಮಾರ್ ಅವರ ಸಿನಿಮಾಗೆ ಪತ್ನಿ ಗೀತಾ ಶಿವರಾಜ್ ಕುಮಾರ್ ಕ್ಲ್ಯಾಪ್ ಮಾಡಿ ಚಾಲನೆ ನೀಡಿದರು. ಈ ಸಿನಿಮಾದ ಶೂಟ್ ಶೀಘ್ರವೇ ಆರಂಭ ಆಗಲಿದೆ. ಅವರು ಮುಖ್ಯಭೂಮಿಕೆ ನಿರ್ವಹಿಸುತ್ತಿರುವ ಮೊದಲ ತೆಲುಗು ಸಿನಿಮಾ ಇದಾಗಿದೆ.

ಶಿವರಾಜ್ಕುಮಾರ್ ಅವರ ಸಿನಿಮಾಗೆ ಪತ್ನಿ ಗೀತಾ ಶಿವರಾಜ್ ಕುಮಾರ್ ಕ್ಲ್ಯಾಪ್ ಮಾಡಿ ಚಾಲನೆ ನೀಡಿದರು. ಈ ಸಿನಿಮಾದ ಶೂಟ್ ಶೀಘ್ರವೇ ಆರಂಭ ಆಗಲಿದೆ. ಅವರು ಮುಖ್ಯಭೂಮಿಕೆ ನಿರ್ವಹಿಸುತ್ತಿರುವ ಮೊದಲ ತೆಲುಗು ಸಿನಿಮಾ ಇದಾಗಿದೆ.

ಗುಮ್ಮಡಿ ನರಸಯ್ಯ ಬಯೋಪಿಕ್ ಸಿನಿಮಾವನ್ನು ಪ್ರಶಾಂತ್ ಹಿರ್ವಾಲೆ ನಿರ್ದೇಶನ ಮಾಡುತ್ತಿದ್ದಾರೆ. ಪ್ರವಲ್ಲಿಕಾ ಆರ್ಟ್ಸ್ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದೆ. ಈ ಚಿತ್ರದ ಪೋಸ್ಟರ್ ಇತ್ತೀಚೆಗೆ ರಿಲೀಸ್ ಆಗಿ ಮನ ಸೆಳೆದಿತ್ತು.
Published On - 12:57 pm, Sat, 6 December 25