
ನಟಿ ಹನ್ಸಿಕಾ ಮೋಟ್ವಾನಿ ಅವರು 2022ರಲ್ಲಿ ಮದುವೆ ಆಗಿದ್ದರು. ಹನ್ಸಿಕಾ ಅವರು ಈಗ ಪತಿ ಸೋಹೇಲ್ ಕತೂರಿಯಾ ಜತೆ ಈಜಿಪ್ಟ್ ಪ್ರವಾಸ ಮಾಡಿದ್ದಾರೆ. ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

ಹನ್ಸಿಕಾ ಹಾಗೂ ಸೋಹೇಲ್ ಬೆಸ್ಟ್ ಫ್ರೆಂಡ್ಸ್ ಆಗಿದ್ದರು. ಇವರು ಅನೇಕ ಕಡೆಗಳಲ್ಲಿ ಒಟ್ಟಾಗಿ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಈಗ ಮದುವೆ ಆಗಿ ಹಾಯಾಗಿ ಸುತ್ತಾಡುತ್ತಿದ್ದಾರೆ.

ಈಜಿಪ್ಟ್ನ ಪಿರಮಿಡ್ಗಳಿಗೆ ಭೇಟಿ ನೀಡಿದ ಫೋಟೋ ಅನ್ನು ಹನ್ಸಿಕಾ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ಫ್ಯಾನ್ಸ್ ಇಷ್ಟಪಡುತ್ತಿದ್ದಾರೆ.

ಹನ್ಸಿಕಾಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಇನ್ಸ್ಟಾಗ್ರಾಮ್ನಲ್ಲಿ 56 ಲಕ್ಷ ಮಂದಿ ಅವರನ್ನು ಹಿಂಬಾಲಿಸುತ್ತಾರೆ.

ಹನ್ಸಿಕಾಗೆ ಅವರು ಪುನೀತ್ ರಾಜ್ಕುಮಾರ್ ನಟನೆಯ ‘ಬಿಂದಾಸ್’ ಚಿತ್ರದಲ್ಲಿ ನಟಿಸಿದ್ದರು. ಈ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯಗೊಂಡಿದ್ದರು.