ಬಾಲಿವುಡ್ನ ಖ್ಯಾತ ನಟ ಅನಿಲ್ ಕಪೂರ್ ಇಂದು ತಮ್ಮ 65ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. (ಅನಿಲ್ ಪುತ್ರಿ ರಿಯಾ ಕಪೂರ್ ವಿವಾಹದ ಸಂದರ್ಭದ ಚಿತ್ರ)
ಅನಿಲ್ ಕಪೂರ್ ಒಬ್ಬ ಫ್ಯಾಮಿಲಿ ಮ್ಯಾನ್. 1984ರಲ್ಲಿ ಸುನಿತಾ ಭವ್ನಾನಿ ಅವರೊಂದಿಗೆ ಅನಿಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ( ಚಿತ್ರದಲ್ಲಿ ಅನಿಲ್ ಹಾಗೂ ಸುನಿತಾ)
ಅನಿಲ್- ಸುನಿತಾ ದಂಪತಿಗೆ ಮೂವರು ಮಕ್ಕಳಿದ್ದಾರೆ. ಸೋನಮ್ ಕಪೂರ್ ಈಗಾಗಲೇ ಬಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. (ಚಿತ್ರದಲ್ಲಿರುವುದು ಅನಿಲ್ ಹಾಗೂ ಸೋನಮ್ ಕಪೂರ್)
ಅನಿಲ್- ಸುನಿತಾರ ಮತ್ತೋರ್ವ ಪುತ್ರಿ ರಿಯಾ ಕಪೂರ್ ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. (ಚಿತ್ರದಲ್ಲಿರುವುದು ಸೋನಮ್ ಹಾಗೂ ರಿಯಾರೊಂದಿಗೆ ಅನಿಲ್ ಕಪೂರ್)
ಅನಿಲ್- ಸುನಿತಾ ದಂಪತಿಗೆ ಹರ್ಷವರ್ಧನ್ ಕಪೂರ್ ಎಂಬ ಪುತ್ರ ಇದ್ದು, ಅವರೂ ಕೂಡ ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. (ಚಿತ್ರ: ಸೋನಮ್- ರಿಯಾರೊಂದಿಗೆ ಅನಿಲ್ ಕಪೂರ್)
ಅನಿಲ್ ಕಪೂರ್ ಚಿತ್ರಗಳ ವಿಷಯಕ್ಕೆ ಬರುವುದಾದರೆ ಸುಮಾರು 40ಕ್ಕೂ ಅಧಿಕ ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. (ಚಿತ್ರ: ಪತ್ನಿ ಸುನಿತಾ ಹಾಗೂ ಪುತ್ರಿ ಸೋನಮ್ ಜೊತೆ ಅನಿಲ್ ಕಪೂರ್)
2005ರಿಂದ ನಿರ್ಮಾಪಕರಾಗಿ ಅನಿಲ್ ಗುರುತಿಸಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಹಾಗೂ ಆರು ಫಿಲ್ಮ್ಫೇರ್ ಪ್ರಶಸ್ತಿಗಳೂ ಅನಿಲ್ಗೆ ಲಭಿಸಿವೆ. (ಚಿತ್ರದಲ್ಲಿ ಕುಟುಂಬದೊಂದಿಗೆ ಅನಿಲ್ ಕಪೂರ್)
ಕನ್ನಡದಲ್ಲೂ ನಟಿಸಿರುವ ಅನಿಲ್ ಕಪೂರ್ ಪಲ್ಲವಿ- ಅನುಪಲ್ಲವಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. (ಚಿತ್ರದಲ್ಲಿ ಕುಟುಂಬದೊಂದಿಗೆ ಅನಿಲ್ ಕಪೂರ್)