ಅಡುಗೆ ಪದಾರ್ಥವಾಗಿ ತೆಂಗಿನಕಾಯಿಯನ್ನು ಚಟ್ನಿ, ಸಾಂಬಾರ್ ಮುಂತಾದ ನಾನಾ ಆಹಾರಗಳಲ್ಲಿ ಪ್ರತಿದಿನ ಬಳಸಲಾಗುತ್ತದೆ. ಆದರೆ ಅದನ್ನು ಹಸಿಯಾಗಿಯೇ ತಿನ್ನುವುದರಿಂದ ಪ್ರಯೋಜನಗಳು ಹಲವಾರು ಇವೆ. ತೆಂಗಿನಕಾಯಿಯಲ್ಲಿ ವಿಟಮಿನ್ ಇ, ವಿಟಮಿನ್ ಬಿ, ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ, ರಂಜಕ ಮತ್ತು ಖನಿಜಗಳು... ಹೀಗೆ ನೀವು ಹೇಳಿದಷ್ಟೂ ಹೇರಳವಾದ ಆರೋಗ್ಯಕಾರಿ ಅಂಶಗಳು ಸಮೃದ್ಧವಾಗಿವೆ. ಇದು ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯ ಪೋಷಣೆಯಲ್ಲಿಯೂ ಕೆಲಸ ಮಾಡುತ್ತದೆ.