ಜಗತ್ತಿನಾದ್ಯಂತ ಬಿಯರ್ ಪ್ರಿಯರ ಸಂಖ್ಯೆ ಕಡಿಮೆಯೇನಲ್ಲ. ಚಹಾ ಮತ್ತು ಕಾಫಿಯ ನಂತರ ಬಿಯರ್ ವಿಶ್ವದ ಮೂರನೇ ಅತ್ಯಂತ ಜನಪ್ರಿಯ ಪಾನೀಯವಾಗಿದೆ. ಸುದೀರ್ಘ ಕೆಲಸದ ನಂತರ ಅಥವಾ ವಾರಾಂತ್ಯದಲ್ಲಿ ಆಯಾಸವನ್ನು ನಿವಾರಿಸಲು ಬಿಯರ್ ಉತ್ತಮ ಸ್ನೇಹಿತ ಎಂದು ಹಲವರು ಭಾವಿಸುತ್ತಾರೆ. ದಿನನಿತ್ಯದ ಆಹಾರದಲ್ಲಿ ಒಂದು ಗ್ಲಾಸ್ ಬಿಯರ್ ಸೇವಿಸುವವರೂ ಇದ್ದಾರೆ. ಬಿಯರ್ ಬಹಳಷ್ಟು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಚರ್ಮ ಮತ್ತು ಕೂದಲ ರಕ್ಷಣೆಯಲ್ಲಿಯೂ ಬಿಯರ್ ಬಳಕೆ ಇದೆ. ಆದರೆ ಪ್ರತಿದಿನ ಬಿಯರ್ ಸೇವನೆ ದೇಹಕ್ಕೆ ಒಳ್ಳೆಯದಲ್ಲ.
ನಿಯಮಿತವಾಗಿ ಬಿಯರ್ ಕುಡಿಯುವುದರಿಂದ ವೃದ್ಧಾಪ್ಯವು ಹೆಚ್ಚು ವೇಗವಾಗಿ ಬರುತ್ತದೆ. ಏಕೆಂದರೆ ಬಿಯರ್‌ನಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಹೆಚ್ಚಿಸುವ ಕೆಲವು ಸಂಯುಕ್ತಗಳಿವೆ. ಅಲ್ಲದೆ ವೃದ್ಧಾಪ್ಯದಿಂದ ನಾನಾ ರೋಗಗಳು ಬೇಗ ಬರುತ್ತವೆ.
Published On - 4:50 pm, Tue, 15 March 22