ಕರಿಮೆಣಸಿನ ಸೈಡ್ ಎಫೆಕ್ಟ್ಸ್: ಕರಿಮೆಣಸು ದಿವ್ಯ ಔಷಧ ಸರಿ -ಆದರೆ ಕೆಲ ದುಷ್ಪರಿಣಾಮಗಳನ್ನೂ ಹೊಂದಿದೆ, ತಿಳಿದುಕೊಳ್ಳಿ
Black Pepper Side Effects: ಕರಿಮೆಣಸು ಪ್ರತಿಯೊಂದು ಭಾರತೀಯ ಅಡುಗೆಮನೆಯಲ್ಲಿ ಬಳಸುವ ಮಸಾಲೆ ಪದಾರ್ಥವಾಗಿದೆ. ಮೆಣಸಿನಲ್ಲಿ ಅನೇಕ ಔಷಧೀಯ ಗುಣಗಳು ಅಡಗಿವೆ. ಅವುಗಳನ್ನು ಅಡುಗೆಯಲ್ಲಿ ಬಳಸುವುದರಿಂದ ಆಹಾರದ ರುಚಿ ಹೆಚ್ಚುತ್ತದೆ. ಕೆಲವರು ಕಾಳುಮೆಣಸನ್ನು ಆಯುರ್ವೇದ ಔಷಧವಾಗಿಯೂ ಬಳಸುತ್ತಾರೆ. ಕರಿಮೆಣಸಿನ್ನು ಅಡುಗೆಯಲ್ಲಿ ಬಳಸುವುದರಿಂದ ಆಹಾರದ ರುಚಿ ಹೆಚ್ಚುತ್ತದೆ. ಕೆಲವರು ಕಾಳುಮೆಣಸನ್ನು ಆಯುರ್ವೇದ ಔಷಧವಾಗಿಯೂ ಬಳಸುತ್ತಾರೆ. ಸಹಜವಾಗಿ ಮೆಣಸು ಕಷಾಯವನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಶೀತ, ಕೆಮ್ಮು, ಶೀತ ಮತ್ತು ಎಲ್ಲಾ ರೀತಿಯ ವೈರಲ್ ರೋಗಗಳನ್ನು ತಡೆಯುತ್ತದೆ.
Updated on:Jul 11, 2023 | 8:02 AM

ಕೆಲವರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಹೆಚ್ಚು ಹೆಚ್ಚು ಮೆಣಸು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ದುಷ್ಪರಿಣಾಮವನ್ನು ಉಂಟುಮಾಡುತ್ತದೆ.

ಗರ್ಭಾವಸ್ಥೆಯಲ್ಲಿ ಹಾನಿ: ನೀವು ಗರ್ಭಿಣಿಯಾಗಿದ್ದರೆ, ನೀವು ಒಣ/ ಹೆಚ್ಚು ತಾಪ ಬೀರುವ ಯಾವುದನ್ನೂ ತಿನ್ನಬಾರದು. ಕಾಳುಮೆಣಸನ್ನು ಅತಿಯಾಗಿ ತಿನ್ನುವುದರಿಂದ ಹಾಲುಣಿಸುವಲ್ಲಿ ತೊಂದರೆ ಉಂಟಾಗುತ್ತದೆ. ಇದರಿಂದ ಹಾಲು ಕುಡಿಸುವುದರಿಂದ ಮಕ್ಕಳು ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ.

ಹೊಟ್ಟೆ ಹುಣ್ಣು: ಕಾಳುಮೆಣಸನ್ನು ಹೆಚ್ಚು ತಿನ್ನುವವರು ಹೊಟ್ಟೆಯ ಸಮಸ್ಯೆಗೆ ತುತ್ತಾಗುತ್ತಾರೆ. ಇದು ಹೊಟ್ಟೆಯ ಹುಣ್ಣುಗಳನ್ನು ಉಂಟುಮಾಡುತ್ತದೆ. ಈ ಮೆಣಸು ಮಸಾಲೆಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಉತ್ತಮ ಎನ್ನುತ್ತಾರೆ ಆಹಾರ ತಜ್ಞರು. ಅತಿಯಾದರೆ ಅಮೃತವೂ ವಿಷವಾಗುತ್ತದೆ ಅಲ್ಲವೇ!?

ಚರ್ಮದ ಕಾಯಿಲೆ: ಪ್ರತಿಯೊಬ್ಬರೂ ತಮ್ಮ ಚರ್ಮವು ಸುಂದರವಾಗಿ ಮತ್ತು ಹೊಳಪಿನಿಂದ ಕಂಗೊಳಿಸಬೇಕೆಂದು ಬಯಸುತ್ತಾರೆ. ಇದಕ್ಕಾಗಿ ತ್ವಚೆಯಲ್ಲಿ ತೇವಾಂಶ ಉಳಿಯದಂತೆ ನೋಡಿಕೊಳ್ಳಬೇಕು. ಮೆಣಸಿನ ಒಣ/ಬಿಸಿ ಪರಿಣಾಮಬೀರುತ್ತದೆ. ಆದ್ದರಿಂದ, ಇದು ಹೆಚ್ಚು ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ತುರಿಕೆ, ಉರಿ, ದದ್ದುಗಳಂತಹ ತೊಂದರೆಗಳು ಉಂಟಾಗುತ್ತವೆ.

ಉಸಿರಾಟದ ತೊಂದರೆ: ನೀವು ಹೆಚ್ಚು ಕರಿಮೆಣಸನ್ನು ಸೇವಿಸಿದರೆ ಉಸಿರಾಟದ ತೊಂದರೆ ಅನುಭವಿಸಬಹುದು. ಏಕೆಂದರೆ ಇದು ಉಸಿರಾಟದ ತೊಂದರೆಗಳನ್ನು ಉಂಟುಮಾಡುತ್ತದೆ. ಈ ಕಾರಣದಿಂದಾಗಿ, ಆಮ್ಲಜನಕದ ಕೊರತೆ ಎದುರಾಗುತ್ತದೆ. ಹೀಗಾಗಿ ನೆಮ್ಮದಿಯಾಗಿ ಉಸಿರಾಡಲು ಸಾಧ್ಯವಾಗುವುದಿಲ್ಲ.
Published On - 7:59 am, Tue, 11 July 23




