India Train Accident: ಭಾರತದಲ್ಲಿ ಸಂಭವಿಸಿದ 10 ಭೀಕರ ರೈಲು ಅಪಘಾತಗಳು

ಒಡಿಶಾದ ಬಾಲಸೋರ್​ ಜಿಲ್ಲೆ ಬಹನಾಗ ಬಳಿ ಸಂಭವಿಸಿದ ರೈಲು ಅಪಘಾತದಲ್ಲಿ ಸದ್ಯದ ಮಾಹಿತಿ ಪ್ರಕಾರ 280 ಪ್ರಯಾಣಿಕರು ಸಾವನ್ನಪ್ಪಿದ್ದು 900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದೇರೀತಿ ಈ ಹಿಂದೆ ಅನೇಕ ಅಪಘಾತಗಳು ಸಂಭವಿಸಿದ್ದು ಅವುಗಳ ಫೋಟೋಸ್​​ ಇಲ್ಲಿವೆ..

ವಿವೇಕ ಬಿರಾದಾರ
|

Updated on:Jun 03, 2023 | 11:18 AM

Here are 10 most fatal train accidents in India in the past

1981 ಬಿಹಾರ ರೈಲು ದುರಂತ ಸುಮಾರು 900 ಜನರನ್ನು ಹೊತ್ತೊಯ್ಯುತ್ತಿದ್ದ ಪ್ಯಾಸೆಂಜರ್ ರೈಲೊಂದು ಹಳಿತಪ್ಪಿ ಬಿಹಾರದ ಸಹರ್ಸಾ ಬಳಿ ಬಾಗ್ಮತಿ ನದಿಗೆ ಬಿದ್ದಿತ್ತು. ಇದರಲ್ಲಿ 500 ಜನ ಪ್ರಯಾಣಿಕರು ಸಾವನ್ನಪ್ಪಿದ್ದರು ಎಂದು ಅಂದಾಜಿಸಲಾಗಿದೆ.

1 / 10
Here are 10 most fatal train accidents in India in the past

1995 ಫಿರೋಜಾಬಾದ್ ರೈಲು ದುರಂತ ದೆಹಲಿಯಿಂದ ಹೊರಟಿದ್ದ ಪುರುಷೋತ್ತಮ್ ಎಕ್ಸ್‌ಪ್ರೆಸ್ ಉತ್ತರ ಪ್ರದೇಶದ ಫಿರೋಜಾಬಾದ್ ಬಳಿ ನಿಂತಿದ್ದ ಕಾಳಿಂದಿ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಕನಿಷ್ಠ 358 ಜನರು ಸಾವನ್ನಪ್ಪಿದ್ದರು.

2 / 10
Here are 10 most fatal train accidents in India in the past

1999 ಗೈಸಲ್ ರೈಲು ದುರಂತ ಗುವಾಹಟಿಯಿಂದ ಸುಮಾರು 310 ಮೈಲಿ ದೂರದಲ್ಲಿರುವ ಅಸ್ಸಾಂನ ಗೈಸಾಲ್ ಬಳಿ 2,500 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಎರಡು ರೈಲುಗಳು ಡಿಕ್ಕಿ ಹೊಡೆದಿದ್ದವು. ಇದರಲ್ಲಿ 290 ಪ್ರಯಾಣಿಕರು ಸಾವನ್ನಪ್ಪಿದ್ದರು. ಅತಿ ವೇಗದಲ್ಲಿ ಒಂದಕ್ಕೊಂದು ಡಿಕ್ಕಿ ಹೊಡೆದಿದ್ದರಿಂದ ರೈಲುಗಳು ಡಿಕ್ಕಿ ಹೊಡೆದು ಸ್ಫೋಟಗೊಂಡವು.

3 / 10
Here are 10 most fatal train accidents in India in the past

1998 ಖನ್ನಾ ರೈಲು ದುರಂತ ಕೋಲ್ಕತ್ತಾಗೆ ತೆರಳುತ್ತಿದ್ದ ಜಮ್ಮು ತಾವಿ-ಸೀಲ್ದಾಹ್ ಎಕ್ಸ್‌ಪ್ರೆಸ್ ಪಂಜಾಬ್‌ನ ರೈಲ್ವೆಯ ಖನ್ನಾ-ಲುಧಿಯಾನ ವಿಭಾಗದಲ್ಲಿ ಖನ್ನಾ ಬಳಿ ಅಮೃತಸರಕ್ಕೆ ಹೋಗುವಾಗ ಹಳಿತಪ್ಪಿ ಫ್ರಾಂಟಿಯರ್ ಗೋಲ್ಡನ್ ಟೆಂಪಲ್ ಮೇಲ್ ರೈಲಿನ ಬೋಗಿಗಳಿಗೆ ಡಿಕ್ಕಿ ಹೊಡೆತ್ತು. 212 ಜನರು ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು.

4 / 10
Here are 10 most fatal train accidents in India in the past

2002 ಹೌರಾ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ಭಾರತದ ಅತ್ಯಂತ ವೇಗದ ರೈಲು ಎಂದು ಪರಿಗಣಿಸಲ್ಪಟ್ಟ ಹೌರಾ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ಗಯಾ ರೈಲು ರಫಿಗಂಜ್ ನಿಲ್ದಾಣದ ಬಳಿ ರಾತ್ರಿ 10.40 ಕ್ಕೆ ಹಳಿತಪ್ಪಿದ ಪರಿಣಾಮ 140 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.

5 / 10
Here are 10 most fatal train accidents in India in the past

2005 ವಲಿಗೊಂಡ ರೈಲು ದುರಂತ 29 ಅಕ್ಟೋಬರ್ 2005 ರಂದು ಹಠಾತ್ ಪ್ರವಾಹದಿಂದ ಸಣ್ಣ ರೈಲು ಸೇತುವೆಯನ್ನು ಕೊಚ್ಚಿಕೊಂಡು ಹೋಯಿತು. ಇದರ ಮೇಲೆ ಪ್ರಯಾಣಿಸುತ್ತಿದ್ದ "ಡೆಲ್ಟಾ ಫಾಸ್ಟ್ ಪ್ಯಾಸೆಂಜರ್" ರೈಲು ಮಾರ್ಗದ ಹಾನಿಗೊಳಗಾದ ಪರಿಣಾಮ ರೈಲು ಹಳಿತಪ್ಪಿ, ಕನಿಷ್ಠ 114 ಜನರು ಸಾವನ್ನಪ್ಪಿದರು ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

6 / 10
Here are 10 most fatal train accidents in India in the past

2010 ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ದುರಂತ ಮುಂಬೈಗೆ ಹೋಗುವ ಹೌರಾ ಕುರ್ಲಾ ಲೋಕಮಾನ್ಯ ತಿಲಕ್ ಜ್ಞಾನೇಶ್ವರಿ ಸೂಪರ್ ಡೀಲಕ್ಸ್ ಎಕ್ಸ್‌ಪ್ರೆಸ್ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಖೇಮಶುಲಿ ಮತ್ತು ಸರ್ದಿಹಾ ನಡುವೆ ಮುಂಜಾನೆ 1.30 ಕ್ಕೆ ಸಂಭವಿಸಿದ ಸ್ಫೋಟದಿಂದ ಹಳಿತಪ್ಪಿ, ನಂತರ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಕನಿಷ್ಠ 170 ಮಂದಿ ಪ್ರಾಣ ಕಳೆದುಕೊಂಡಿದ್ದರು ಎಂದು ವರದಿಯಾಗಿದೆ.

7 / 10
Here are 10 most fatal train accidents in India in the past

2010 ಸೈಂಥಿಯಾ ರೈಲು ಅಪಘಾತ ಜುಲೈ 19, 2010 ರಂದು, ಪಶ್ಚಿಮ ಬಂಗಾಳದ ಸೈಂಥಿಯಾದಲ್ಲಿ ಉತ್ತರ ಬಂಗಾ ಎಕ್ಸ್‌ಪ್ರೆಸ್ ಮತ್ತು ವನಂಚಲ್ ಎಕ್ಸ್‌ಪ್ರೆಸ್ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಸುಮಾರು 63 ಜನರು ಸಾವನ್ನಪ್ಪಿದರು ಮತ್ತು 165 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

8 / 10
Here are 10 most fatal train accidents in India in the past

2012 ಹಂಪಿ ಎಕ್ಸ್‌ಪ್ರೆಸ್ ಅಪಘಾತ 22 ಮೇ 2012 ರಂದು ಹುಬ್ಬಳ್ಳಿ-ಬೆಂಗಳೂರು ಹಂಪಿ ಎಕ್ಸ್‌ಪ್ರೆಸ್ ಆಂಧ್ರಪ್ರದೇಶದ ಬಳಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ರೈಲಿನ ನಾಲ್ಕು ಬೋಗಿಗಳು ಹಳಿತಪ್ಪಿದ್ದವು, ಮತ್ತು ಅವುಗಳಲ್ಲಿ ಒಂದು ಬೋಗಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 25 ಜನ ಪ್ರಯಾಣಿಕರು ಸಾವನ್ನಪ್ಪಿದ್ದರು ಮತ್ತು ಸುಮಾರು 43 ಮಂದಿ ಗಾಯಗೊಂಡ್ಡಿದ್ದರು.

9 / 10
Here are 10 most fatal train accidents in India in the past

2016 ಇಂದೋರ್ ಪಾಟ್ನಾ ದುರಂತ ಇಂದೋರ್-ಪಾಟ್ನಾ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 19321), 20 ನವೆಂಬರ್, 2016 ರಂದು ಭಾರತದ ಕಾನ್ಪುರದ ಪುಖ್ರಾಯನ್ ಬಳಿ ಹಳಿತಪ್ಪಿ ಕನಿಷ್ಠ 150 ಜನರು ಸಾವನ್ನಪ್ಪಿದರು ಮತ್ತು 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

10 / 10

Published On - 11:17 am, Sat, 3 June 23

Follow us
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ