ಸಿಎಂ ಬಸವರಾಜ್ ಬೊಮ್ಮಾಯಿ ತವರು ಕ್ಷೇತ್ರದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಕಬ್ಬಡಿ ಪಂದ್ಯಾವಳಿಯ ಝಲಕ್​ ಇಲ್ಲಿದೆ ನೋಡಿ

ಕಿರಣ್ ಹನುಮಂತ್​ ಮಾದಾರ್

Updated on: Mar 26, 2023 | 3:14 PM

ದೇಶಿ ಕ್ರಿಡೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸಿಎಂ ಬಸವರಾಜ್ ಬೊಮ್ಮಾಯಿ ತವರು ಕ್ಷೇತ್ರದಲ್ಲಿ ಮೂರು ದಿನಗಳ ಕಬ್ಬಡಿ ಪಂದ್ಯಾವಳಿಯನ್ನು ಆಯೋಜಿಸಿದ್ದಾರೆ. ಇನ್ನು ಈ ಪಂದ್ಯದಲ್ಲಿ ಭಾಗವಹಿಸಲು ದೇಶದ ಮೂಲೆ ಮೂಲೆಗಳಿಂದ 34 ಕ್ಕೂ ಅಧಿಕ ಕಬ್ಬಡಿ ತಂಡಗಳು ಭಾಗಿ ಆಗಿವೆ. ಅದರ ಝಲಕ್ ಹೇಗಿತ್ತು ಎಂಬುವುದನ್ನು ನೋಡೋಣ ಬನ್ನಿ.

1 / 7
ಬೃಹತ್ತಾದ ಕಬ್ಬಡಿ ಗ್ರೌಂಡ್, ಉತ್ತಮ ಆಟ ಪ್ರದರ್ಶನ ಮಾಡುತ್ತಿರುವ ಆಟಗಾರರು. ಸಿಳ್ಳೆ, ಚಪ್ಪಾಳೆಯ ಮೂಲಕ ಆಟಗಾರರನ್ನು ಪ್ರೋತ್ಸಾಹಿಸುತ್ತಿರುವ ಜನ. ಈ ದೃಶ್ಯ ಕಂಡು ಬಂದಿದ್ದು ನಾಡ ದೊರೆ ಸಿಎಂ ಬೊಮ್ಮಾಯಿ ತವರು ಕ್ಷೇತ್ರದಲ್ಲಿ.

ಬೃಹತ್ತಾದ ಕಬ್ಬಡಿ ಗ್ರೌಂಡ್, ಉತ್ತಮ ಆಟ ಪ್ರದರ್ಶನ ಮಾಡುತ್ತಿರುವ ಆಟಗಾರರು. ಸಿಳ್ಳೆ, ಚಪ್ಪಾಳೆಯ ಮೂಲಕ ಆಟಗಾರರನ್ನು ಪ್ರೋತ್ಸಾಹಿಸುತ್ತಿರುವ ಜನ. ಈ ದೃಶ್ಯ ಕಂಡು ಬಂದಿದ್ದು ನಾಡ ದೊರೆ ಸಿಎಂ ಬೊಮ್ಮಾಯಿ ತವರು ಕ್ಷೇತ್ರದಲ್ಲಿ.

2 / 7

ಹೌದು ಉತ್ತಮ ಕ್ರೀಡಾಪಟುಗಳನ್ನ ಮುನ್ನೆಲೆಗೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರದ ವತಿಯಿಂದ ಸವಣೂರು ತಾಲೂಕಿನಲ್ಲಿ ರಾಷ್ಟ್ರ ಮಟ್ಟದ ಕಬ್ಬಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

3 / 7

ಇನ್ನು ಶುಕ್ರವಾರದಿಂದ ಆರಂಭವಾಗಿರುವ ಪಂದ್ಯಾವಳಿಯಲ್ಲಿ ಕರ್ನಾಟಕ ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳಿಂದ 37 ಕ್ಕೂ ಅಧಿಕ ಕಬ್ಬಡಿ ತಂಡಗಳು ಭಾಗವಹಿಸಿದ್ದು, ಇದರಲ್ಲಿ 15 ಬಾಲಕಿಯರ ತಂಡಗಳಿವೆ.

4 / 7

ಇನ್ನು ಎರಡನೇ ದಿನವಾದ ನಿನ್ನೆ(ಮಾ.24) ಕಬ್ಬಡಿ ಪಂದ್ಯಾವಳಿ ವಿಕ್ಷಿಸಲು ಆಗಮಿಸಿದ್ದ ಸಿಎಂ ಬೊಮ್ಮಾಯಿ ಆಟಗಾರರ ಉತ್ಸಾಹ ಕಂಡು ಸಂತಸಗೊಂಡರು.

5 / 7

ಈ ದೇಶದ ಗ್ರಾಮೀಣ ಕ್ರಿಡೆ ಉಳಿಯಬೇಕು. ನಮ್ಮ ರಾಜ್ಯದ ಯುವಕರು ಒಲಂಪಿಕ್ಸ್​ನಲ್ಲಿ ಹೆಚ್ಚು ಚಿನ್ನದ ಪದಕ ಗೆಲ್ಲಬೇಕೆಂಬ ಸದುದ್ದೇಶದಿಂದ, ನಮ್ಮ ಸರ್ಕಾರ 75 ಜನ ಕ್ರಿಡಾಪಟುಗಳನ್ನು ದತ್ತು ಪಡೆಯುತ್ತಿದೆ.

6 / 7

ಜೊತೆಗೆ ತಲಾ 8 ಲಕ್ಷ ರೂಪಾಯಿ ಖರ್ಚು ಮಾಡಲು ತಿರ್ಮಾನಿಸಿದೆ. ನಮ್ಮ ರಾಜ್ಯದ ಯುವಕರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕು ಎಂಬುವುದು ನಮ್ಮ ಸರ್ಕಾರದ ಆಶಯ ಎಂದು ತಿಳಿಸಿದರು.

7 / 7

ಒಟ್ಟಾರೆಯಾಗಿ ರಾಜ್ಯದಲ್ಲಿ ಚುನಾವಣೆ ಸಮಿಪಿಸುತ್ತಿದ್ದಂತೆ ಯುವಕರನ್ನು ಸೆಳೆಯಲು ಕ್ರಿಡಾ ಕೂಟಗಳನ್ನು ಆಯೋಜಿಸಿ ನೀಡುತ್ತಿರುವ ಆಶ್ವಾಸನೆಗಳು ಆದಷ್ಟು ಬೇಗ ಕಾರ್ಯರೂಪಕ್ಕೆ ತಂದು, ನಮ್ಮ ರಾಜ್ಯದ ಯುವಕರು ಹೆಚ್ಚು ಚಿನ್ನದ ಪದಕ ಗೆಲ್ಲುವಂತಾಗಲಿ ಎಂಬುವುದಷ್ಟೆ ನಮ್ಮ ಆಶಯ.

ಕಿರಣ್ ಹನುಮಂತ್​ ಮಾದಾರ್

ಹುಟ್ಟೂರು- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನಕಟ್ಟ, ಶಿರಸಿಯಲ್ಲಿ ಬಿ.ಎ ಪತ್ರಿಕೋಧ್ಯಮ ಮುಗಿಸಿ, ವಾರ್ತಾ ಇಲಾಖೆಯಲ್ಲಿ ಒಂದು ವರ್ಷದ ತರಭೇತಿ ಪಡೆದು, ಟಿವಿ9 ಡಿಜಿಟಲ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ.

Loading...
Unable to load recommendations.
Follow Us