AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಣ್ಣ ಬಣ್ಣದ ಗಾಳಿಪಟಗಳನ್ನು ಹಾರಿಸುವ ಮೂಲಕ ಸಂಕ್ರಾಂತಿ ಹಬ್ಬವನ್ನ ಆಚರಿಸಿದ ಕಲಬುರಗಿಯ ಜನ ಇಲ್ಲಿದೆ ನೋಡಿ ಇದರ ಝಲಕ್​

ಜಿಲ್ಲೆಯ ಜನ ಸಂಕ್ರಾಂತಿ ಹಬ್ಬವನ್ನ ಗಾಳಿಪಟ ಉತ್ಸವ ನಡೆಸುವ ಮೂಲಕ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ.

TV9 Web
| Edited By: |

Updated on:Jan 16, 2023 | 8:56 AM

Share
ಕಲಬುರಗಿ ನಗರದ ಹೊರವಲಯದ ಜಮಶೆಟ್ಟಿ ಲೇಔಟ್ ಬಳಿ ಹಮ್ಮಿಕೊಂಡಿದ್ದ ಗಾಳಿಪಟ ಉತ್ಸವದಲ್ಲಿ ಮಕ್ಕಳು, ಯುವಕರು, ಹಿರಿಯರು ಎಲ್ಲರೂ ಸೇರಿ ಉತ್ಸವದಲ್ಲಿ ಭಾಗವಹಿಸುವ ಮೂಲಕ ಸಂಕ್ರಾಂತಿ ಹಬ್ಬಕ್ಕೆ ಕಳೆ ತಂದಿದ್ದಂತು ಸುಳ್ಳಲ್ಲ.

1 / 6
ಇಂದು(ಜ.15) ಎಲ್ಲಡೆ ಸಂಕ್ರಾತಿ ಹಬ್ಬದ ಸಂಭ್ರಮ ಮನೆಮಾಡಿತ್ತು. ನಿನ್ನೆ ಮತ್ತು ಇಂದು ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದ ಬಿಸಿಲನಾಡು ಕಲಬುರಗಿ ಜನರು ಮಧ್ಯಾಹ್ನದ ನಂತರ ಗಾಳಿಪಟಗಳನ್ನು ಹಾರಿಸಿ ಸಂಭ್ರಮಸಿದರು.

2 / 6
ಸಕ್ರಾಂತಿ ಹಬ್ಬದಂದು ಗಾಳಿಪಟಗಳನ್ನು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಹಾರಿಸುತ್ತಾರೆ. ಆದರೆ ಇತ್ತೀಚೆಗೆ ಈ ಸಂಪ್ರದಾಯ ಕಡಿಮೆಯಾಗುತ್ತಿದೆ. ಹೀಗಾಗಿ ಸುರಭಿ ಕಲಾವೃಂದವರು ನಗರದಲ್ಲಿ ಗಾಳಿಪಟ ಉತ್ಸವನ್ನು ಹಮ್ಮಿಕೊಂಡು ಉಚಿತವಾಗಿ ಗಾಳಿ ಪಟ, ದಾರವನ್ನು ನೀಡಿದ್ದರು.

3 / 6
ಸಂಕ್ರಾತಿ ಸಮಯದಲ್ಲಿ, ಬೀಸಲು ತಣ್ಣನೆಯ ಸುಳಿಗಾಳಿಗೆ ಗಾಳಿಪಟಗಳನ್ನು ಆಕಾಶದೆತ್ತರಕ್ಕೆ ಹೋಗಿ ಹಾರಾಡುತ್ತವೆ. ಹೀಗಾಗಿ ಸಂಕ್ರಾಂತಿ ಹಬ್ಬದ ಸಮಯದಲ್ಲಿ, ಕಲಬುರಗಿ, ಬೀದರ್ ಸೇರಿದಂತೆ ಅನೇಕ ಕಡೆ ಗಾಳಿಪಟಗಳನ್ನು ಹಾರಿಸುತ್ತಾರೆ. ಇಂದು ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಸೇರಿ ಅನೇಕರು ಗಾಳಿಪಟ ಉತ್ಸವದಲ್ಲಿ ಭಾಗಿಯಾಗಿ ಗಾಳಿಪಟವನ್ನ ಹಾರಿಸಿದರು.

4 / 6
ಇಂತಹದೊಂದು ಉತ್ಸವದಲ್ಲಿ ಕಲಬುರಗಿ ನಗರದ ನೂರಾರು ಜನರು ಬಾಗಿಯಾಗಿ, ಸಂಭ್ರಮದಿಂದ ಬಣ್ಣ ಬಣ್ಣದ ಗಾಳಿಪಟಕ್ಕೆ ಮಾಂಜಾ ಕಟ್ಟಿ, ಆಕಾಶದೆತ್ತರಕ್ಕೆ ಹಾರಿಸಿ ಸಂಭ್ರಮಿಸಿದರು. ಪ್ರತಿನಿತ್ಯ ಶಾಲೆ, ಕಾಲೇಜು, ಓದು, ಬರಹ ಅಂತ ಬಿಜಿಯಾಗಿದ್ದ ಮಕ್ಕಳು, ಇಂದು ದೈನಂದಿನ ಜಂಜಡಗಳನ್ನು ಮರೆತು, ಹೆತ್ತುವರ ಜೊತೆ, ಸ್ನೇಹಿತರ ಜೊತೆ ಆಗಮಿಸಿ ಗಾಳಿಪಟಗಳನ್ನು ಹಾರಿಸಿದ್ರು.

5 / 6
ಕಲಬುರಗಿ ನಗರದಲ್ಲಿ ನಡೆದ ಗಾಳಿಪಟ ಉತ್ಸವ ಎಲ್ಲರ ಸಂತಸವನ್ನು ಹೆಚ್ಚಿಸಿತ್ತು. ಮರೆಯಾಗುತ್ತಿರುವ ಗಾಳಿಪಟ ಹಾರಿಸುವ ಸಂಪ್ರದಾಯವನ್ನು ಮತ್ತೆ ನೆನಪಿಸುವ ಕೆಲಸವನ್ನು ಸುರಭಿ ಕಲಾವೃಂದ ಮಾಡಿದ್ದು ವಿಶೇಷ.  ಈ ರೀತಿಯ ಗಾಳಿಪಟ ಉತ್ಸವಗಳು ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದು ಸುಳ್ಳಲ್ಲ.

6 / 6

Published On - 8:54 am, Mon, 16 January 23

ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್

ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!

ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ

ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್

ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ

ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ

ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?

ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು