Valentine’s Week 2022: ವ್ಯಾಲೆಂಟೈನ್ಸ್ ವೀಕ್ ಆಚರಣೆಗೆ ಈ ಏಳು ಸ್ಪೆಷಲ್ ಸ್ವೀಟ್ ತಯಾರಿಸಿ
TV9 Web | Updated By: Pavitra Bhat Jigalemane
Updated on:
Feb 05, 2022 | 12:45 PM
ಇನ್ನೇನು ವ್ಯಾಲಂಟೈನ್ಸ್ ವೀಕ್ ಹತ್ತಿರವಾಗುತ್ತಿದೆ. ಫೆ.7ರಿಂದ ಆರಂಭವಾಗುವ ವಿಶೇಷ ವಾರಕ್ಕೆಒಂದಷ್ಟು ಹೊಸ ಐಡಿಯಾಗಳನ್ನು ಮಾಡಿಕೊಳ್ಳಲೇಬೇಕು. ವಾರದ ಏಳು ದಿನವೂ ಸ್ಪೆಷಲ್ ಆಗಿರುವುದರಿಂದ ನಿಮ್ಮ ಸೆಲೆಬ್ರೇಶನ್ಗೆ ಯಾವ ರೀತಿಯ ಆಹಾರವಿರಬೇಕು ಎನ್ನುವ ಟಿಪ್ಸ್ ಇಲ್ಲಿದೆ ನೋಡಿ.
1 / 7
ವ್ಯಾಲೆಂಟೈನ್ಸ್ ವೀಕ್ ಹತ್ತಿರವಾಗುತ್ತಿದೆ. ಹೀಗಾಗಿ ನೀವು ಪ್ರತಿಯೊಂದು ದಿನವೂ ಒಂದೊಂದು ಬಗೆಯ ಕೇಕ್ ಅಥವಾ ಸ್ವೀಟ್ ತಯಾರಿಸಿ ಸೆಲೆಬ್ರೇಟ್ ಮಾಡಬಹುದು. ಅದಕ್ಕೆ ಮೊದಲ ದಿನ ಎಗ್ ಲೆಸ್ ವೆನಿಲ್ಲಾ ಕೇಕ್ ತಯಾರಿಸಬಹುದು.
2 / 7
ಪ್ರೇಮಿಗಳ ವಾರದಲ್ಲಿ ನೀವು ಕ್ಯಾರಮೆಲ್ ಕೇಕ್ ತಯಾರಿಸಿ ಸವಿಯಬಹುದು. ಮೊಟ್ಟೆ ಹಾಕಿ ಮಾಡುವ ಈ ಕೇಕ್ಅನ್ನು ನೀವು ಪ್ರೆಶರ್ ಕುಕ್ಕರ್ನಲ್ಲಿಯೂ ತಯಾರಿಸಬಹುದಾಗಿದೆ.
3 / 7
ನಿಮ್ಮ ಪ್ರೇಮಿಗೆ ಕೇವಲ ಚಾಕೋಲೇಟ್ ಕೊಟ್ಟು ವಿಶ್ ಮಾಡುವುದಕ್ಕಿಂತ ಚಾಕೋಲೇಟ್ ಕೇಕ್ ತಯಾರಿಸಿಕೊಡಿ. ಇದು ನಿಮ್ಮ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.
4 / 7
ನಿಮ್ಮ ವ್ಯಾಲಂಟೈನ್ಗೆ ಸರಳವಾಗಿಯೂ ಸರ್ಪೈಸ್ ನೀಡಬೇಕೆಂದರೆ ತೆಂಗಿನ ಕಾಯಿ ಬರ್ಫಿ ಮಾಡಿಕೊಡಿ. ಸಕ್ಕರೆ, ತುಪ್ಪ, ಕಾಯಿತುರಿಯನ್ನು ಬಳಸಿ ಸುಲಭವಾಗಿ ತೆಂಗಿನಕಾಯಿ ಬರ್ಫಿಯನ್ನು ತಯಾರಿಸಬಹುದು.
5 / 7
ಹಾಲಿನಲ್ಲಿ ಬ್ರೆಡ್ ತುಂಡುಗಳು ಅದ್ದಿ,ನಂತರ ನಂತರ ಬೇಯಿಸಿ, ಅದಕ್ಕೆ ಸಕ್ಕರೆ, ಕೇಸರಿ, ಬಾದಾಮಿಯನ್ನು ಹಾಕಿದರೆ ರುಚಿಯಾದ ಡಬಲ್ ಮೀಟಾ ಸವಿಯಲು ಸಿದ್ಧವಾಗುತ್ತದೆ. ನಿಮ್ಮ ವ್ಯಾಲಂಟೈನ್ ವೀಕ್ನಲ್ಲಿ ಈ ಸ್ವೀಟ್ಅನ್ನು ಒಮ್ಮೆ ತಯಾರಿಸಿ.
6 / 7
ಬಿಸಿಹಾಲಿಗೆ ಕೇಸರಿಯನ್ನು ಹಾಕಿ ನಂತರ ಬಾದಾಮಿ, ಪಿಸ್ತಾ, ಡ್ರೈಫ್ರುಟ್ಸ್ಗಳನ್ನು ಹಾಕಿ ಕೆಲನಿಮಿಷಗಳ ಕಾಲ ಕುದಿಸಿದರೆ ಸಿಹಿಯಾದ ಬಾದಾಮಿ, ಪಿಸ್ತಾ ಶ್ರೀಖಂಡ ರೆಡಿಯಾಗುತ್ತದೆ.
7 / 7
ಚಾಕೋಲೇಟ್, ಸ್ಟ್ರಾಬೆರಿ ಕೇಕ್ ಇಲ್ಲದೆ ವ್ಯಾಲೆಂಟೈನ್ಸ್ ವೀಕ್ ಪೂರ್ತಿಯಾಗದು. ಪ್ರಿತಿಯನ್ನು ವ್ಯಕ್ತಪಡಿಸಲು ರುಚಿಯಾದ ಚಾಕೊಲೇಟ್ ಕೇಕ್ ತಯಾರಿಸಿ, ನಿಮ್ಮ ವ್ಯಾಲೆಂಟೈನ್ ವಾರವನ್ನು ಇನ್ನಷ್ಟು ಮೆಮೋರೇಬಲ್ ಆಗುವಂತೆ ನೋಡಿಕೊಳ್ಳಿ.
Published On - 11:26 am, Sat, 5 February 22