Updated on:Feb 26, 2022 | 6:01 PM
ಜೇನುತುಪ್ಪವು ಅದರ ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಜೇನುತುಪ್ಪವು ಮೂಗಿನ ಸೆಬಾಸಿಯಸ್ ಗ್ರಂಥಿಗಳಲ್ಲಿ ಹೆಚ್ಚುವರಿ ಎಣ್ಣೆಯನ್ನು ಸಂಗ್ರಹವಾಗುವುದನ್ನು ತಡೆಯುತ್ತದ. ಜೇನುತುಪ್ಪವನ್ನು ಮೂಗಿನ ಮೇಲೆ ಕೆಲವು ನಿಮಿಷಗಳ ಕಾಲ ಉಜ್ಜಿಕೊಳ್ಳಿ. ನಂತರ ತೊಳೆಯಿರಿ.
ನಿಂಬೆ ಎಫ್ಫೋಲಿಯೇಟಿಂಗ್ ಅಂಶಗಳನ್ನು ಒಳಗೊಂಡಿದೆ. ನಿಂಬೆ ರಸವು ಚರ್ಮದಿಂದ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಮೀಗಿನ ಮೇಲೆ ನಿಂಬೆ ರಸವನ್ನು ಹಚ್ಚಿ 15 ನಿಮಿಷಗಳ ಕಾಲ ಕಾಯಿರಿ. ನಂತರ ತೊಳೆಯಿರಿ.
ಎಣ್ಣೆಯುಕ್ತ ಮೂಗಿನ ಸಮಸ್ಯೆ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ವಿವಿಧ ಸೌಂದರ್ಯವರ್ಧಕಗಳನ್ನು ಬಳಸಿದರೂ ಅದರಿಂದ ಮುಕ್ತಿ ಸಿಗುವುದಿಲ್ಲ. ಆದರೆ ಈ ವಿಧಾನಗಳಿಂದ ಅದನ್ನು ಕಡಿಮೆ ಮಾಡಬಹುದಾಗಿದೆ.
ಚರ್ಮದ ಆರೋಗ್ಯ ಮತ್ತು ಸೌಂದರ್ಯಕ್ಕಾಗಿ ಸ್ವಲ್ಪ ಪ್ರಮಾಣದ ಎಣ್ಣೆ ಬೇಕಾಗುತ್ತದೆ. ಆದರೆ ಹೆಚ್ಚುವರಿ ಎಣ್ಣೆಯು ಚರ್ಮವನ್ನು ಹಾನಿಗೊಳಿಸುತ್ತದೆ. ಅವುಗಳಲ್ಲಿ ಒಂದು ಎಣ್ಣೆಯುಕ್ತ ಮೂಗು ಕೂಡ ಒಂದು.
Published On - 5:43 pm, Sat, 26 February 22