AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಒಟಿಟಿಗೆ ನಾಲ್ಕು ಕನ್ನಡ ಸಿನಿಮಾ ಜೊತೆಗೆ ಇನ್ನಷ್ಟು

OTT Release this week: ಕಳೆದೆರಡು ವಾರ ಕನ್ನಡ ಸಿನಿಮಾ ಪ್ರೇಮಿಗಳ ಪಾಲಿಗೆ ಭರ್ಜರಿ ವಾರ. ಕಳೆದ ವಾರ ಜೊತೆಯಾಗಿ ಬಿಡುಗಡೆ ಆದ ‘ಎಕ್ಕ’, ‘ಜೂನಿಯರ್’ ಸಿನಿಮಾಗಳು ಉತ್ತಮ ಪ್ರದರ್ಶನ ಕಂಡವು. ಈ ವಾರ ಬಂದ ‘ಸು ಫ್ರಂ ಸೋ’ ಸಿನಿಮಾ ಅಂತೂ ದಾಖಲೆಗಳನ್ನೇ ಬರೆಯುತ್ತಿದೆ. ಇತ್ತ ಒಟಿಟಿಯಲ್ಲೂ ನಾವೇನು ಕಡಿಮೆ ಎಂಬಂತೆ ಒಂದಕ್ಕಿಂತ ಒಂದು ಉತ್ತಮ ಸಿನಿಮಾಗಳು ಈ ವಾರ ಬಿಡುಗಡೆ ಆಗಿವೆ.

ಮಂಜುನಾಥ ಸಿ.
|

Updated on: Jul 27, 2025 | 8:59 PM

Share
ದಿಗಂತ್, ನಿಧಿ ಸುಬ್ಬಯ್ಯ ಇನ್ನಿತರರು ನಟಿಸಿದ್ದ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾ ಕೆಲ ವಾರಗಳ ಹಿಂದೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಗಮನ ಸೆಳೆದಿತ್ತು. ಇದೀಗ ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ.

1 / 5
ಮಂಚು ಮನೋಜ್ ಮುಖ್ಯ ಪಾತ್ರದಲ್ಲಿ ನಟಿಸಿ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್​ಲಾಲ್ ಇನ್ನೂ ಕೆಲವರು ಅತಿಥಿ ಪಾತ್ರಗಳಲ್ಲಿ ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕಣ್ಣಪ್ಪ’ ಈ ವಾರ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ.

2 / 5
ಸಹದೇವ್ ಕೆಲವಾಡಿ ನಿರ್ದೇಶನ ಮಾಡಿ ಗೋಪಾಲಕೃಷ್ಣ ದೇಶಪಾಂಡೆ ಮತ್ತು ಕೆಲ ಹೊಸಬರು ನಟಿಸಿರುವ ಭಿನ್ನ ಕಥಾವಸ್ತುವುಳ್ಳ ಕನ್ನಡ ಸಿನಿಮಾ ‘ಕೆಂಡ’ ಇದೀಗ ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.

3 / 5
ರವಿಚಂದ್ರನ್, ದಿಗಂತ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಕೋರ್ಟ್ ರೂಂ ಡ್ರಾಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಬಹಳ ಸಮಯವೇ ಆಗಿದೆ. ಇದೀಗ ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.

4 / 5
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ನಿರ್ದೇಶನ ಮಾಡಿ ನಟನೆಯನ್ನೂ ಮಾಡಿರುವ ‘ಎಕ್ಸ್​ ಆಂಡ್ ವೈ’ ಸಿನಿಮಾ ತುಸು ನಿರೀಕ್ಷೆ ಹುಟ್ಟಿಸಿತ್ತು. ಆದರೆ ಚಿತ್ರಮಂದಿರದಲ್ಲಿ ಗೆಲ್ಲಲಿಲ್ಲ. ಇದೀಗ ಈ ಸಿನಿಮಾ ಸನ್ ನೆಕ್ಸ್ಟ್ ಒಟಿಟಿಯಲ್ಲಿ ಬಿಡುಗಡೆ ಆಗಿದೆ.

5 / 5