ಈ ವಾರ ಒಟಿಟಿಗೆ ಬಂದಿವೆ ಹಿಟ್ ಸಿನಿಮಾಗಳು: ಇಲ್ಲಿದೆ ಪಟ್ಟಿ

Updated on: Oct 18, 2025 | 5:04 PM

Movies on OTT this week: ‘ಕಾಂತಾರ: ಚಾಪ್ಟರ್ 1’ ಸಿನಿಮಾ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. ಈ ವಾರ ಪರಭಾಷೆಯ ಕೆಲವು ಸಿನಿಮಾಗಳು ಸಹ ಬಿಡುಗಡೆ ಆಗಿವೆ. ದೀಪಾವಳಿ ಪ್ರಯುಕ್ತ ಚಿತ್ರಮಂದಿರಗಳಲ್ಲಿ ಕೆಲವಾರು ಸಿನಿಮಾಗಳು ಬಿಡುಗಡೆ ಆಗಿವೆ. ಅದರಂತೆ ಒಟಿಟಿಯಲ್ಲಿಯೂ ಸಹ ದೀಪಾವಳಿ ಪ್ರಯುಕ್ತ ಕೆಲವು ಒಳ್ಳೆಯ ಸಿನಿಮಾಗಳು ಬಿಡುಗಡೆ ಆಗಿವೆ. ಈ ವಾರ ಒಟಿಟಿಗೆ ಬಂದಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ...

1 / 7
ವಿನಯ್ ರಾಜ್​​ಕುಮಾರ್ ಮತ್ತು ಅದಿತಿ ಪ್ರಭುದೇವ ನಟಿಸಿರುವ ‘ಅಂದೊಂದಿತ್ತು ಕಾಲ’ ಸಿನಿಮಾ ಕೆಲ ವಾರಗಳ ಹಿಂದೆ ಬಿಡುಗಡೆ ಆಗಿ ಚಿತ್ರಮಂದಿರಗಳಲ್ಲಿ ಗಮನ ಸೆಳೆಯಿತು. ಹೆಸರಿನಂತೆ ಕೆಲ ದಶಕಗಳ ಹಿಂದಿನ ಕತೆಯನ್ನು ಈ ಸಿನಿಮಾ ಒಳಗೊಂಡಿತ್ತು.

2 / 7
ಕನ್ನಡದ ನಿರ್ದೇಶಕ ಎ ಹರ್ಷ ನಿರ್ದೇಶನ ಮಾಡಿರುವ ಮೊದಲ ಹಿಂದಿ ಸಿನಿಮಾ ‘ಭಾಗಿ 4’ ಚಿತ್ರಮಂದಿರಗಳಲ್ಲಿ ಸಾಧಾರಣ ಪ್ರದರ್ಶನ ಕಂಡಿತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಈ ಸಿನಿಮಾ ಈ ವಾರ ಸ್ಟ್ರೀಮಿಂಗ್ ಆರಂಭಿಸಿದೆ.

3 / 7
ಇತ್ತೀಚೆಗೆ ತೆರೆಕಂಡ ಕನ್ನಡ ಸಿನಿಮಾಗಳಲ್ಲಿ ಒಂದು ಒಳ್ಳೆಯ ಸಿನಿಮಾ ಎಂದರೆ ‘ಏಳುಮಲೆ’. ತರುಣ್ ಸುಧೀರ್ ನಿರ್ಮಾಣ ಮಾಡಿ ಪುನೀತ್ ರಂಗಸ್ವಾಮಿ ನಿರ್ದೇಶಿಸಿರುವ ಸಿನಿಮಾನಲ್ಲಿ ರಾಣಾ ನಾಯಕ. ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿಯಾಯ್ತು. ಇದೀಗ ಸಿನಿಮಾ ಜೀ 5 ನಲ್ಲಿ ವೀಕ್ಷಣೆಗೆ ಲಭ್ಯವಿದೆ.

4 / 7
ಕೆಲ ತಿಂಗಳ ಹಿಂದೆ ಬಿಡುಗಡೆ ಆದ ‘ಫೈನಲ್ ಡೆಸ್ಟಿನೇಷನ್: ಬ್ಲಡ್​​ಲೈನ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ‘ಫೈನಲ್ ಡೆಸ್ಟಿನೇಷನ್: ಬ್ಲಡ್​​​ಲೈನ್’ ಸಿನಿಮಾ ಜಿಯೋ ಹಾಟ್​​ಸ್ಟಾರ್ ಒಟಿಟಿಗೆ ಬಂದಿದೆ.

5 / 7
ತೆಲುಗಿನ ‘ಕಿಷ್ಕಿಂಧಾಪುರಿ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿ ಚಿತ್ರಮಂದಿರಗಳಲ್ಲಿ ಹಿಟ್ ಎನಿಸಿಕೊಂಡಿದೆ. ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್, ಅನುಪಮಾ ಪರಮೇಶ್ವರನ್ ಅವರುಗಳು ನಟಿಸಿರುವ ಈ ಸಿನಿಮಾ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ. ಸಿನಿಮಾ ಇದೀಗ ಜೀ5 ನಲ್ಲಿ ವೀಕ್ಷಣೆಗೆ ಲಭ್ಯವಿದೆ.

6 / 7
ಹೊಸದಾಗಿ ಮದುವೆ ಆಗಿರುವ ಸವದೇವನ್ ಎಂಬಾತ ಪತ್ನಿ ಹಾಕಿರುವ ಸುಳ್ಳು ದೌರ್ಜನ್ಯ ಮತ್ತು ವರದಕ್ಷಿಣೆ ಪ್ರಕರಣದಲ್ಲಿ ಸಿಲುಕಿಕೊಳ್ಳುತ್ತಾನೆ. ಅದರಿಂದ ಆತ ಹೇಗೆ ಹೊರಗೆ ಬರುತ್ತಾನೆ ಎಂಬುದು ಸಿನಿಮಾದ ಕತೆ. ಈ ಸಿನಿಮಾ ಈಗ ಜೀ5 ನಲ್ಲಿ ವೀಕ್ಷಣೆಗೆ ಲಭ್ಯವಿದೆ.

7 / 7
ವಿದೇಶದಿಂದ ಆಸ್ಕರ್​​ಗೆ ಕಳಿಸಲ್ಪಟ್ಟಿರುವ ಭಾರತದ ಸಿನಿಮಾ ‘ಸಂತೋಷ್’. ವಿಧವೆ ಯುವತಿಯೊಬ್ಬಾಕೆ ಪತಿಯ ಪೊಲೀಸ್ ಉದ್ಯೋಗವನ್ನು ಪಡೆದುಕೊಂಡು ದಲಿತ ಯುವತಿಯ ಹತ್ಯೆ ಪ್ರಕರಣದ ತನಿಖೆಗೆ ಇಳಿಯುತ್ತಾಳೆ. ಇದೊಂದು ಅದ್ಭುತ ಸಿನಿಮಾ ಆಗಿದ್ದು ಸಿನಿಮಾ ಅನ್ನು ಲಯನ್ಸ್​​ಗೇಟ್​​ ಒಟಿಟಿಯಲ್ಲಿ ವೀಕ್ಷಿಸಬಹುದಾಗಿದೆ.