
‘ಬಿಗ್ ಬಾಸ್ ಕನ್ನಡ ಸೀಸನ್ 9’ ಇನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಒಟಿಟಿ ಸೀಸನ್ ಪೂರ್ಣಗೊಂಡು ಈಗ ಟಿವಿ ಸೀಸನ್ ಕೂಡ ಮುಗಿಯುವ ಹಂತಕ್ಕೆ ಬಂದು ನಿಂತಿದೆ.

ಅನುಪಮಾ ಗೌಡ ಅವರು ಭಾನುವಾರ (ಡಿಸೆಂಬರ್ 18) ಬಿಗ್ ಬಾಸ್ನಿಂದ ಎಲಿಮಿನೇಟ್ ಆಗಿದ್ದಾರೆ. ಅನುಪಮಾ ಫಿನಾಲೆ ತಲುಪಬಹುದು ಎಂದು ಎಲ್ಲರೂ ಊಹಿಸಿದ್ದರು. ಆದರೆ, ಆ ಊಹೆ ತಪ್ಪಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧೆ ಹೆಚ್ಚಾಗುತ್ತಿದೆ. ಪ್ರಬಲ ಸ್ಪರ್ಧಿಗಳ ಮಧ್ಯೆ ಅನುಪಮಾ ಸೆಣೆಸಬೇಕಿತ್ತು. ಇದು ಅನುಪಮಾ ಎಲಿಮಿನೇಟ್ ಆಗಲು ಪ್ರಮುಖ ಕಾರಣ.

ಅನುಪಮಾ ಅವರು ಈ ಮೊದಲು ಬಿಗ್ ಬಾಸ್ಗೆ ಬಂದಿದ್ದರು. ಹೀಗಾಗಿ, ಜನರು ಅವರಿಂದ ಇನ್ನೂ ಹೆಚ್ಚಿನ ಪರ್ಫಾರ್ಮೆನ್ಸ್ ನಿರೀಕ್ಷೆ ಮಾಡುತ್ತಿದ್ದರು.

ಆದರೆ, ಆ ನಿರೀಕ್ಷೆ ತಲುಪಲು ಅನುಪಮಾ ಬಳಿ ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಕಡಿಮೆ ವೋಟ್ ಪಡೆದು ಅವರು ಮನೆಯಿಂದ ಹೊರ ನಡೆದಿದ್ದಾರೆ.
Published On - 8:40 am, Mon, 19 December 22