‘ಕನ್ನಡತಿ’ ಧಾರಾವಾಹಿಯಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದರು ರಮೋಲಾ. ಸಾನಿಯಾ ಹೆಸರಿನ ಪಾತ್ರವನ್ನು ಅವರು ಅದ್ಭುತವಾಗಿ ನಿರ್ವಹಿಸುತ್ತಿದ್ದರು.
ರತ್ನಾಮಾಲಾ ಅವರ ಕುಟುಂಬದ ಸೊಸೆಯಾಗಿ, ಮಾಲಾ ಶಿಕ್ಷಣ ಸಂಸ್ಥೆಯ ಎಂ.ಡಿ. ಆಗಿ ಅವರು ಕಾಣಿಸಿಕೊಂಡಿದ್ದರು. ಈ ಕ್ಯಾರೆಕ್ಟರ್ ದಿನಕಳೆದಂತೆ ಮಹತ್ವ ಪಡೆದುಕೊಳ್ಳುತ್ತಾ ಸಾಗಿತ್ತು. ಈಗ ರಮೋಲಾ ಧಾರಾವಾಹಿ ತಂಡ ತೊರೆದಿದ್ದಾರೆ.
ಈಗ ಈ ಸ್ಥಾನವನ್ನು ‘ಹೂ ಮಳೆ’ ಖ್ಯಾತಿಯ ಆರೋಹಿ ನೈನಾ ತುಂಬಿದ್ದಾರೆ.
ರಮೋಲಾ ‘ಕನ್ನಡತಿ’ಯಿಂದ ಹೊರ ನಡೆದಿರುವ ವಿಚಾರ ಅಭಿಮಾನಿಗಳಿಗೆ ಸಾಕಷ್ಟು ಬೇಸರ ತರಿಸಿದೆ. ಅವರ ನಟನೆ ಅನೇಕರಿಗೆ ಇಷ್ಟವಾಗಿತ್ತು. ಅವರು ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸುತ್ತಿದ್ದರು.
ಬೇರೆ ಭಾಷೆಯಿಂದ ಆಫರ್ ಬಂದ ಕಾರಣ ಸಾನಿಯಾ ಈ ಧಾರಾವಾಹಿ ತೊರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಪಾತ್ರವನ್ನು ಆರೋಹಿ ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.