- Kannada News Photo gallery Here's a photo of the majestic Sirimane Falls the cascading waterfalls that mesmerized the onlookers
ಮಲೆನಾಡಲ್ಲಿ ಸುರಿಯುತ್ತಿರುವ ಮಳೆಗೆ ಮೈದುಂಬಿ ಹರಿಯುತ್ತಿರುವ ಸಿರಿಮನೆ ಫಾಲ್ಸ್ ; ಇಲ್ಲಿವೆ ಫೋಟೋಸ್
ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಲೆನಾಡಿನ ಜಲಪಾತಗಳು ಮರುಜೀವ ಪಡೆದುಕೊಂಡಿದೆ. ಅದರಂತೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸಿರಿಮನೆ ಜಲಪಾತ ಪ್ರವಾಸಿಗರನ್ನ ಸೆಳೆಯುತ್ತಿದೆ. ಅದರ ಝಲಕ್ ಇಲ್ಲಿದೆ ನೋಡಿ.
Updated on:Jul 09, 2023 | 9:12 AM

ಮಲೆನಾಡಲ್ಲಿ ಸುರಿದ ಧಾರಾಕಾರ ಮಳೆಯಿಂದ ಜಲಪಾತಗಳಿಗೆ ಜೀವಕಳೆ ಬಂದಿದೆ. ಹಚ್ಚ ಹಸಿರಿನ ನಡುವೆ ಧುಮುಕುತ್ತಿರುವ ಜಲಪಾತ, ನೋಡುಗರನ್ನೊಮ್ಮೆ ಮಂತ್ರಮುಗ್ಧರನ್ನಾಗಿಸುತ್ತದೆ.

ಅದರಂತೆ ಚಿಕ್ಕಮಗಳೂರಿನ ಸಿರಿಮನೆ ಫಾಲ್ಸ್ ಧಾರಕಾರ ಮಳೆಗೆ ದಟ್ಟಡವಿಯ ನಡುವೆ ಹರಿದು ಬರುತ್ತಿದ್ದು, ನೋಡಲು ಎರಡು ಕಣ್ಣುಗಳು ಸಾಲದಂತಿದೆ.

ಹೌದು ಮಳೆಗಾಲ ಬಂತೆಂದರೆ ಜಲಪಾತಗಳು ಮೈದುಂಬಿ ಹಾಲ್ನೊರೆಯಂತೆ ಹರಿಯುತ್ತದೆ. ಇದನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಪ್ರವಾಸಿಗರು ತಮ್ಮ ರಜೆಗಳನ್ನ ಇದಕ್ಕೆಂದೇ ಮೀಸಲಿಡುತ್ತಾರೆ.

ಮಲೆನಾಡಿನಲ್ಲಿ ಸುರಿದ ಮಳೆಯಿಂದ ಜಲಪಾತಗಳು ದೃಶ್ಯ ಕಾವ್ಯ ಸೃಷ್ಟಿಸಿದ್ದು, ಸಿರಿಮನೆ ಫಾಲ್ಸ್ ನೋಡಲು ಪ್ರವಾಸಿಗರ ದಂಡು ಹರಿದು ಬರುತ್ತಿದೆ.

ಕಲ್ಲು ಬಂಡೆಯ ಮೇಲೆ ಹಾಲ್ನೊರೆಯಂತೆ ದುಮ್ಮಿಕ್ಕುತ್ತಿರುವ ಜಲಪಾತ. ಪ್ರವಾಸಿಗರನ್ನ ಎತ್ತಲೂ ಕರೆದಕೊಂಡು ಹೋಗುತ್ತದೆ.

ಇನ್ನು ಶೃಂಗೇರಿ ತಾಲೂಕಿನ ಸಿರಿಮನೆ ಜಲಪಾತ, ಬರೊಬ್ಬರಿ 100 ಅಡಿ ಎತ್ತರದಿಂದ ದುಮ್ಮಿಕ್ಕುತ್ತದೆ. ಇದನ್ನು ನೋಡಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಮುಂಗಾರು ಮಳೆಯಲ್ಲೇ ಜಲಪಾತಕ್ಕೆ ಇಳಿದು ಪ್ರವಾಸಿಗರು ಫುಲ್ ಎಂಜಾಯ್ ಮಾಡುತ್ತಿದ್ದು, ಮಳೆಗಾಲದ ಪೃಕತಿ ಸೌಂದರ್ಯವನ್ನ ಸವಿಯುತ್ತಿದ್ದಾರೆ.
Published On - 9:12 am, Sun, 9 July 23




