Hockey World Cup2023: ಅಬ್ಬಬ್ಬಾ,, ಇಷ್ಟೊಂದಾ! ಹಾಕಿ ವಿಶ್ವಕಪ್‌ನ ಬಜೆಟ್ ಎಷ್ಟು ಸಾವಿರ ಕೋಟಿ ಗೊತ್ತಾ?

Edited By:

Updated on: Jan 13, 2023 | 11:46 AM

Hockey World Cup2023: ಈ ಬಾರಿಯ ವಿಶ್ವಕಪ್ ಆತಿಥ್ಯಕ್ಕೆ 1098 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಬಜೆಟ್​ನಲ್ಲಿ ತೋರಿಸಲಾಗಿದೆ. ಇದು ಕ್ರೀಡಾಂಗಣ ನಿರ್ಮಾಣ, ಸಾರಿಗೆ, ನಿರ್ವಹಣೆಗೆ ಎಲ್ಲಾ ರೀತಿಯ ವೆಚ್ಚಗಳನ್ನು ಒಳಗೊಂಡಿದೆ.

1 / 5
ಭಾರತ ಸತತ ಎರಡನೇ ಬಾರಿಗೆ ಹಾಕಿ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿದೆ. ಆದಾಗ್ಯೂ, ಈ ಬಾರಿಯ ವಿಶ್ವಕಪ್ ಅನ್ನು ದೊಡ್ಡ ಮಟ್ಟದಲ್ಲಿ ಮತ್ತು 2018 ಕ್ಕಿಂತ ಹೆಚ್ಚು ವೈಭವದಿಂದ ಆಯೋಜಿಸಲಾಗಿದೆ. ರೂರ್ಕೆಲಾ ಮತ್ತು ಭುವನೇಶ್ವರದಲ್ಲಿ ಹಾಕಿ ವಿಶ್ವಕಪ್ ನಡೆಯುತ್ತಿದ್ದು, ಅದ್ಧೂರಿಯಾಗಿ ಈ ಕ್ರೀಡಾಕೂಟವನ್ನು ಆರಂಭಿಸಲಾಗಿದೆ. ಈ ಹಿರಿಮೆಗೆ ಹಣವೂ ನೀರಿನಂತೆ ಹರಿದುಬಂದಿದೆ.

ಭಾರತ ಸತತ ಎರಡನೇ ಬಾರಿಗೆ ಹಾಕಿ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿದೆ. ಆದಾಗ್ಯೂ, ಈ ಬಾರಿಯ ವಿಶ್ವಕಪ್ ಅನ್ನು ದೊಡ್ಡ ಮಟ್ಟದಲ್ಲಿ ಮತ್ತು 2018 ಕ್ಕಿಂತ ಹೆಚ್ಚು ವೈಭವದಿಂದ ಆಯೋಜಿಸಲಾಗಿದೆ. ರೂರ್ಕೆಲಾ ಮತ್ತು ಭುವನೇಶ್ವರದಲ್ಲಿ ಹಾಕಿ ವಿಶ್ವಕಪ್ ನಡೆಯುತ್ತಿದ್ದು, ಅದ್ಧೂರಿಯಾಗಿ ಈ ಕ್ರೀಡಾಕೂಟವನ್ನು ಆರಂಭಿಸಲಾಗಿದೆ. ಈ ಹಿರಿಮೆಗೆ ಹಣವೂ ನೀರಿನಂತೆ ಹರಿದುಬಂದಿದೆ.

2 / 5

ಈ ಬಾರಿಯ ವಿಶ್ವಕಪ್ ಆತಿಥ್ಯಕ್ಕೆ 1098 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಬಜೆಟ್​ನಲ್ಲಿ ತೋರಿಸಲಾಗಿದೆ. ಇದು ಕ್ರೀಡಾಂಗಣ ನಿರ್ಮಾಣ, ಸಾರಿಗೆ, ನಿರ್ವಹಣೆಗೆ ಎಲ್ಲಾ ರೀತಿಯ ವೆಚ್ಚಗಳನ್ನು ಒಳಗೊಂಡಿದೆ. ರೂರ್ಕೆಲಾದ ಬಿರ್ಸಾ ಮುಂಡಾ ಕ್ರೀಡಾಂಗಣವನ್ನು ನಿರ್ಮಿಸಲು ಹೆಚ್ಚಿನ ಹಣವನ್ನು ಖರ್ಚು ಮಾಡಲಾಗಿದೆ. 20 ಸಾವಿರ ಪ್ರೇಕ್ಷಕರ ಸಾಮರ್ಥ್ಯವಿರುವ ಈ ಕ್ರೀಡಾಂಗಣವನ್ನು ನಿರ್ಮಿಸಲು 875.78 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.

3 / 5

ಈ ವಿಶ್ವಕಪ್‌ನ ಪಂದ್ಯಗಳು ಭುವನೇಶ್ವರದ ಕಳಿಂಗ ಕ್ರೀಡಾಂಗಣ ಮತ್ತು ರೂರ್ಕೆಲಾದ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆಯಲಿವೆ. ವಿಶ್ವಕಪ್‌ಗಾಗಿ ಎರಡೂ ಕ್ರೀಡಾಂಗಣಗಳಲ್ಲಿ ಹೊಸ ಟರ್ಫ್‌ ಹಾಕಲಾಗಿದೆ. ಇದಕ್ಕಾಗಿ ಸುಮಾರು 17.5 ಕೋಟಿ ರೂ. ಖರ್ಚು ಮಾಡಲಾಗಿದೆ.

4 / 5

ಈ ಬಾರಿಯ ವಿಶ್ವಕಪ್‌ನಲ್ಲಿ 16 ತಂಡಗಳು ಭಾಗವಹಿಸುತ್ತಿವೆ. ಪಂದ್ಯಾವಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಟಗಾರರು, ಕೋಚಿಂಗ್ ಸಿಬ್ಬಂದಿ ಮತ್ತು ಇತರ ಅಧಿಕಾರಿಗಳ ನಿವಾಸಕ್ಕಾಗಿ ಹೊಸ ಕಟ್ಟಡಗಳನ್ನು ಸಿದ್ಧಪಡಿಸಲಾಗಿದೆ. ಇದಕ್ಕಾಗಿ 84 ಕೋಟಿ ರೂ. ವ್ಯಯಿಸಲಾಗಿದೆ.

5 / 5

ಸ್ಥಳ ನಿರ್ವಹಣೆ, ತಂಡಗಳು, ಅಧಿಕಾರಿಗಳು ಮತ್ತು ಇತರ ಜನರು ಬಂದು ಹೋಗುವುದಕ್ಕೆ 75 ಕೋಟಿ ರೂ. ವ್ಯಯಿಸಿದ್ದು, ಇದು ವಿಶ್ವಕಪ್‌ನ ಬ್ರ್ಯಾಂಡಿಂಗ್ ಮತ್ತು ಪ್ರಚಾರದ ವೆಚ್ಚವನ್ನು ಸಹ ಒಳಗೊಂಡಿದೆ.

Published On - 11:46 am, Fri, 13 January 23

TV9 Web

TV9 Kannada

Read More
Loading...
Unable to load recommendations.
Follow Us