Home Made Drinks: ಇವುಗಳನ್ನು ಸೇವಿಸುವುದರಿಂದ ಸುಲಭವಾಗಿ ತೂಕ ಹೆಚ್ಚಿಸಿಕೊಳ್ಳಬಹುದು
ತೆಳ್ಳಗಿರುವುದು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಹಾಗಾಗಿ ಮನೆಯಲ್ಲಿ ತಯಾರಿಸಿದ ಕೆಲ ಪಾನೀಯಗಳನ್ನು ಸೇವಿಸಿ. ಇದು ಸುಲಭವಾಗಿ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
Updated on: Mar 20, 2023 | 7:00 AM

ಕೆಲವು ಜನರು ತೂಕ ಇಳಿಸಿಕೊಳ್ಳಲು ಸಾಕಷ್ಟು ಕಸರತ್ತು ಮಾಡುತ್ತಾರೆ. ಅದೇ ರೀತಿಯಾಗಿ ಕಡಿಮೆ ತೂಕವಿರುವವರು ಜಾಸ್ತಿ ಮಾಡಿಕೊಳ್ಳಲು ಒದ್ದಾಡುತ್ತಾರೆ. ಎಷ್ಟೇ ತಿಂದರೂ ದೇಹಕ್ಕೆ ಹತ್ತುವುದಿಲ್ಲ ಎಂದು ಕೆಲವರು ದೂರುತ್ತಾರೆ. ತೂಕ ಕಡಿಮೆ ಇರುವುದರಿಂದ ಕೆಲವೊಮ್ಮೆ ತೊಂದರೆಗೂ ಕಾರಣವಾಗುತ್ತದೆ. ಹಾಗಾಗಿ ಸುಲಭವಾಗಿ ಮನೆಯಲ್ಲೇ ತೂಕ ಹೆಚ್ಚಿಸಿಕೊಳ್ಳುವ ವಿಧಾನ ಇಲ್ಲಿದೆ ನೋಡಿ.

ಚಿಕ್ಕು ಶೇಕ್: ಚಿಕ್ಕು ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆ ಅಂಶವಿರುತ್ತದೆ. ಇದನ್ನು ಸೇವಿಸುವುದರಿಂದ ತೂಕ ಹೆಚ್ಚಾಸಿಕೊಳ್ಳಬಹುದು. ಇದು ದೈಹಿಕ ದೌರ್ಬಲ್ಯವನ್ನು ತೊಡೆದುಹಾಕುತ್ತದೆ ಮತ್ತು ನಿಮ್ಮನ್ನು ಬಲಗೊಳಿಸುತ್ತದೆ.

ಮ್ಯಾಂಗೋ ಶೇಕ್: ಮಾವಿನ ಹಣ್ಣಿನ ಶೇಕ್ ಸೇವಿಸುವುದರಿಂದ ತೂಕ ಹೆಚ್ಚಿಸಿಕೊಳ್ಳಬಹುದಾಗಿದೆ. ಮಾವಿನ ಹಣ್ಣುಗಳು ಕಾರ್ಬೋಹೈಡ್ರೇಟ್‌ಗಳು, ಸಕ್ಕರೆ ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿವೆ. ಪ್ರತಿದಿನ ಒಂದು ಗ್ಲಾಸ್ ಮ್ಯಾಂಗೋ ಶೇಕ್ ಕುಡಿಯುವುದರಿಂದ ಬೇಗನೆ ತೂಕ ಹೆಚ್ಚಿಸಿಕೊಳ್ಳಬಹುದು.

ಬಾಳೆಹಣ್ಣು ಶೇಕ್: ಬಾಳೆಹಣ್ಣಿನಲ್ಲಿ ಜೀವಸತ್ವಗಳು, ಖನಿಜಗಳು, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮುಂತಾದ ಅನೇಕ ಪೋಷಕಾಂಶಗಳಿವೆ. ವೇಗವಾಗಿ ತೂಕ ಹೆಚ್ಚಿಸಲು ಬಾಳೆಹಣ್ಣಿನ ಶೇಕ್ ಕುಡಿಯಿರಿ.

ಚಾಕೊಲೇಟ್ ಶೇಕ್: ಚಾಕೊಲೇಟ್ ತಿನ್ನಲು ಯಾರು ಇಷ್ಟಪಡುವುದಿಲ್ಲ ಹೇಳಿ. ತೂಕ ಹೆಚ್ಚಾಗಬೇಕೆಂದರೆ, ಚಾಕಲೇಟ್ ಮಿಲ್ಕ್ ಶೇಕ್ ಕುಡಿಯಬಹುದು. ಇದು ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಹೊಂದಿದೆ. ಚಾಕೊಲೇಟ್ ಮಿಲ್ಕ್ ಶೇಕ್ ಕುಡಿಯುವುದರಿಂದ ದೇಹಕ್ಕೆ ತ್ವರಿತ ಶಕ್ತಿ ಸಿಗುತ್ತದೆ.




