Cracked Heels: ಒಡೆದ ಕಾಲಿನ ಹಿಮ್ಮಡಿಗೆ ಇಲ್ಲಿದೆ ಮನೆಮದ್ದು
ನಾನಾ ಕಾರಣಕ್ಕೆ ಕೆಲವರಿಗೆ ಕಾಲಿನ ಪಾದಗಳು ಒಡೆಯುತ್ತವೆ. ಓಡಾಡುವುದಕ್ಕೂ ಕಷ್ಠವಾಗುತ್ತದೆ. ಇದದಿಂದ ಮುಕ್ತಿ ಪಡೆಯಲು ಮನೆಯಲ್ಲೇ ಮದ್ದಿದೆ.
May 11, 2022 | 8:30 AM
ಮಲಗುವ ಮುನ್ನಾ ಒಡೆದ ಹಿಮ್ಮಡಿಗೆ ಜೇನುತುಪ್ಪ ಹಚ್ಚಿ. ಜೇನುತುಪ್ಪ ಔಷಧಿ ಗುಣವನ್ನು ಹೊಂದಿದೆ. ಹೀಗಾಗಿ ಒಡೆದ ಕಾಲಿಗೆ ಇದು ರಾಮಬಾಣ ಇದ್ದಂತೆ.
ತೆಂಗಿನ ಎಣ್ಣೆ ಸರ್ವ ಕಾಯಿಲೆಗೆ ಮದ್ದಿದ್ದಂತೆ. ಹೀಗಾಗಿ ಕಾಲನ್ನು ತೊಳೆದು ತೆಂಗಿನ ಎಣ್ಣೆಯನ್ನು ಬಳಸಿ.
ಬಾಳೆಹಣ್ಣನ್ನು ಮ್ಯಾಶ್ ಮಾಡಿ ಪೇಸ್ಟ್ ಮಾಡಿ. ಪೇಸ್ಟ್ನ ಕಾಲಿಗೆ ಹಚ್ಚಿ. 20ರಿಂದ 30 ನಿಮಿಷಗಳ ಕಾಲ ಒಣಗಲು ಬಿಡಿ.
ಅಲೋವೆರಾ ಜೆಲ್ ಬಳಸಿ. ಮೊದಲು ಉಗುರು ಬೆಚ್ಚಗಿನ ನೀರಲ್ಲಿ ಪಾದವನ್ನು ನೆನೆಸಿ. ನಂತರ ಅಲೋವೆರಾ ಜೆಲ್ನ ಹಚ್ಚಿ.
ಬಿಸಿ ನೀರಿಗೆ ಅಡುಗೆ ಸೋಡಾ ಹಾಕಿ. ನಂತರ ಒಡೆದ ಕಾಲನ್ನು ನೆನೆಸಿಡಿ. 15 ನಿಮಿಷ ಕಾಲು ನೀರಿನಲ್ಲಿ ಇರಬೇಕು. ಹೀಗೆ ಮಾಡಿದರೆ ಕಾಲು ಒಡೆಯುವುದು ಕಡಿಮೆಯಾಗುತ್ತದೆ.