AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸಕೋಟೆಯಲ್ಲಿ 108 ಲಿಂಗ ಜೋಡಿಸಿ 60 ಅಡಿ ಎತ್ತರದ ಬೃಹತ್​ ಲಿಂಗ ನಿರ್ಮಾಣ! ಇದು ಶಿವರಾತ್ರಿ ಎಫೆಕ್ಟಾ ಅಥವಾ ಚುನಾವಣೆ ಎಫೆಕ್ಟಾ?

ಶಿವರಾತ್ರಿ ಉತ್ಸವಕ್ಕಾಗಿ 60 ಅಡಿ ಎತ್ತರದ 108 ಲಿಂಗಗಳನ್ನೊಳಗೊಂಡ ಲಿಂಗ ನಿರ್ಮಾಣ ಮಾಡಲಾಗುತ್ತಿದೆ. ಹೊಸಕೋಟೆ ನಗರದ ಚೆನ್ನಬೈರೆಗೌಡ ಕ್ರೀಡಾಂಗಣದಲ್ಲಿ ಶಿವನ ಮೂರ್ತಿ ‌ನಿರ್ಮಾಣ ಕಾರ್ಯ ನಡೆಯುತ್ತಿದೆ.

TV9 Web
| Edited By: |

Updated on:Feb 16, 2023 | 3:19 PM

Share
ಫೆಬ್ರವರಿ 18ರಂದು ಮಹಾ ಶಿವರಾತ್ರಿ ಹಬ್ಬ ಹಿನ್ನೆಲೆ ರಾಜ್ಯದಲ್ಲಿ ಭರ್ಜರಿ ತಯಾರಿ ನಡೆದಿದೆ. ಹೊಸಕೋಟೆ ನಗರದ ಚೆನ್ನಬೈರೆಗೌಡ ಕ್ರೀಡಾಂಗಣದಲ್ಲಿ ಬೃಹತ್ ಶಿವಲಿಂಗ ಪ್ರತಿಷ್ಟಾಪನೆಗೆ ಶಿವ ಭಕ್ತರು ಮುಂದಾಗಿದ್ದಾರೆ.

1 / 7
ಶಿವರಾತ್ರಿ ಉತ್ಸವಕ್ಕಾಗಿ 60 ಅಡಿ ಎತ್ತರದ 108 ಲಿಂಗಗಳನ್ನ ಒಳಗೊಂಡ ಲಿಂಗ ನಿರ್ಮಾಣ ಮಾಡಲು ಭರ್ಜರಿ ತಯಾರಿ ನಡೆದಿದೆ. ಹಗಲು-ರಾತ್ರಿ ಎನ್ನದೆ ಭಕ್ತರು ಇದರ ನಿರ್ಮಾಣದಲ್ಲಿ ತೊಡಗಿದ್ದಾರೆ.

2 / 7
40 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ಲಿಂಗ ನಿರ್ಮಾಣ ಮಾಡಲಾಗುತ್ತಿದೆ. ಮೂರು ದಿನಗಳ ಶಿವರಾತ್ರಿ ಉತ್ಸವಕ್ಕಾಗಿ ಸಚಿವ ಎಂಟಿಬಿ ನಾಗರಾಜ್ ‌ಅವರು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ.

3 / 7
ಶಿವಲಿಂಗದ ಮುಂಭಾಗ ಬೃಹತ್ ವೇದಿಕೆ ಮೂಲಕ‌ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ವಿವಿಧ ಪ್ರಸಿದ್ಧ ಕಲಾವಿದರನ್ನ ಕರೆಸಿ ಮೂರು ದಿನಗಳ ಕಾಲ ಅದ್ಧೂರಿ ಕಾರ್ಯಕ್ರಮಕ್ಕೆ ತಯಾರಿ ನಡೆದಿದೆ.

4 / 7
ಇತ್ತೀಚೆಗಷ್ಟೆ ಮುಸ್ಲಿಂ ಸಮುದಾಯಕ್ಕಾಗಿ ಎಂಟಿಬಿ ಕವ್ವಾಲಿ ಕಾರ್ಯಕ್ರಮ ಮಾಡಿಸಿದ್ದರು. ಇದೀಗ ಶಿವರಾತ್ರಿಗಾಗಿ ಲಿಂಗ ಪ್ರತಿಷ್ಟಾಪನೆ ಮಾಡಿಸಿ ಉತ್ಸವ‌ ಮಾಡುತ್ತಿದ್ದಾರೆ.

5 / 7
ಅವಿಮುಕ್ತೇಶ್ವರ ದೇವಸ್ಥಾನದದಲ್ಲಿ ವಿಶೇಷ ಪೂಜೆ ಹವನ ಇರಲಿದೆ. ಹಾಗೂ ನಾಳೆ‌ 60 ಅಡಿ ಎತ್ತರದ ಶಿವಲಿಂಗ ಉದ್ಘಾಟನೆಯಾಗಲಿದೆ. ಬೃಹತ್ ಶಿವಲಿಂಗದ ದರ್ಶನಕ್ಕಾಗಿ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ.

6 / 7
ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ರಾಜಕೀಯ ನಾಯಕರು ಉತ್ಸವಗಳ ಮೊರೆ ಹೋಗಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದಲ್ಲಿ ಹಬ್ಬದ ಕಳೆ ಜೋರಾಗಿದೆ.

7 / 7

Published On - 2:50 pm, Thu, 16 February 23