Narendra Modi in Kashi: ಬದಲಾದ ವಾರಣಾಸಿ ಹೇಗಿದೆ? ಚಿತ್ರಗಳನ್ನು ನೋಡಿ
Narendra Modi on Kashi Vishwanath Dham: ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 13ರ ಸೋಮವಾರ ವಾರಣಾಸಿಯಲ್ಲಿ ಕಾಶಿ ವಿಶ್ವನಾಥ್ ಧಾಮ್ ಅನ್ನು ಉದ್ಘಾಟಿಸಲಿದ್ದಾರೆ. ವಾರಣಾಸಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಅವುಗಳ ಕುರಿತು ಮಾಹಿತಿ ಇಲ್ಲಿದೆ.
Updated on: Dec 11, 2021 | 2:43 PM

ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯು ವಿಶ್ವನಾಥ ಮಂದಿರವನ್ನು ಗಂಗಾ ನದಿಗೆ ಸಂಪರ್ಕಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಮೊದಲು ಮಂದಿರ ಹಾಗೂ ನದಿಗೆ ನೇರವಾದ ಸಂಪರ್ಕ ಇರಲಿಲ್ಲ. ಈಗ ಯಾವುದೇ ಅಡೆತಡೆಗಳಿಲ್ಲದೇ ಗಂಗೆಯ ಲಲಿತಾ ಘಾಟ್ಗೆ ಭಕ್ತರು ಮಂದಿರದಿಂದ ಭೇಟಿ ನೀಡಬಹುದು.

ಕಾಶಿ ವಿಶ್ವನಾಥ ಧಾಮ್ ಕಾರಿಡಾರ್ ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಡಿಸೆಂಬರ್ 13ರಂದು ಲೋಕಾರ್ಪಣೆಗೊಳ್ಳಲಿದೆ.

ರುದ್ರಾಕ್ಷ ಕನ್ವೆನ್ಷನ್ ಸೆಂಟರ್ ಸಭಾಭವನವಾಗಿದ್ದು, ಅಂತಾರಾಷ್ಟ್ರೀಯ ಸಂಕಿರಣಗಳಿಂದ ಕಲಾ ಪ್ರದರ್ಶನದವರೆಗೆ.. ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಬಹುದಾಗಿದೆ.

ರಿಂಗ್ ರೋಡ್ ನಿರ್ಮಾಣವಾಗಿರುವುದರಿಂದ ವಾರಣಾಸಿಯಲ್ಲಿ ವಾಹನ ದಟ್ಟಣೆ ಕಡಿಮೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿಗಳ ಸಂಚಾರಕ್ಕೆ ಸುಲಭವಾಗಿದೆ.

ಪ್ರವಾಸೋದ್ಯಮದ ದೃಷ್ಟಿಯಿಂದ ರೋ ರೋ ವೆಸೆಲ್ಸ್ಗಳನ್ನು ನಿರ್ಮಿಸಲಾಗಿದೆ.

ಗೋಡೌಲಿಯಾದಲ್ಲಿ ಬಹುಮಹಡಿಯ ಪಾರ್ಕಿಂಗ್ ಸ್ಥಳವನ್ನು ನಿರ್ಮಿಸಲಾಗಿದೆ. ಇದು ಯಾತ್ರಾರ್ಥಿಗಳ ವಾಹನ ನಿಲುಗಡೆಗೆ ಸಹಾಯಕವಾಗಲಿದೆ.

ವಾರಣಾಸಿಯನ್ನು ಕೇಬಲ್ ಹಾಗೂ ವೈರ್ ಮುಕ್ತವಾಗಿಸುವ ಪ್ರಯತ್ನಗಳು ಸಾಗಿವೆ.

ವಾರಣಾಸಿಯಲ್ಲಿ ಆರೋಗ್ಯ ಸೇವೆಗಾಗಿ ಬಿಹೆಚ್ಯು ಟ್ರಾಮಾ ಸೆಂಟರ್ ಸ್ಥಾಪಿಸಲಾಗಿದೆ. ಅಲ್ಲದೇ ಎಮರ್ಜೆನ್ಸಿ ಹಾಸಿಗೆಗಳ ವ್ಯವಸ್ಥೆಯನ್ನು ನಾಲ್ಕರಿಂದ 20 ಕ್ಕೆ ಏರಿಸಲಾಗಿದೆ. ಅಲ್ಲದೇ ಇಲ್ಲಿ ವಿವಿಧ ರೀತಿಯ ವಿಶೇಷ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎರಡು ಕ್ಯಾನ್ಸರ್ ಆಸ್ಪತ್ರೆಗಳನ್ನು ಕಾಶಿಯಲ್ಲಿವೆ.

ಐಎಂಎಸ್ ಬಿಹೆಚ್ಯುನ ಮಹಿಳಾ ಮತ್ತು ಮಕ್ಕಳ ಆರೋಗ್ಯ ವಿಭಾಗಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ ಸಂದರ್ಭ.

ಮಂಡುವಾದೀಹ್ ರೈಲ್ವೆ ಸ್ಟೇಶನ್ ಈಗ ವಿಶ್ವದರ್ಜೆಗೇರಿದ್ದು, ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದೆ.

ಸುಗಮ ವ್ಯಾಪಾರದ ಉದ್ದೇಶದಿಂದ ದೀನದಯಾಳ ವ್ಯಾಪಾರ ಸುಗಮ ಕೇಂದ್ರವನ್ನು ಸ್ಥಾಪಿಸಲಾಗಿದ್ದು, 2017ರಲ್ಲಿ ಲೋಕಾರ್ಪಣೆ ಮಾಡಲಾಗಿದೆ.



















