- Kannada News Photo gallery Hubli laksha deepotsava at historic Sri Siddharoodha Mutt in Hubballi news in kannada
ಹುಬ್ಬಳ್ಳಿಯ ಸಿದ್ಧಾರೂಢರ ಮಠದಲ್ಲಿ ಕಳೆಗಟ್ಟಿದ ಲಕ್ಷ ದೀಪೋತ್ಸವದ ಸಂಭ್ರಮ ಸಡಗರ
ಹುಬ್ಬಳ್ಳಿಯ ಐತಿಹಾಸಿಕ ಮಠ ಶ್ರೀ ಸಿದ್ಧಾರೂಢರ ಮಠದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ ಸಡಗರದಿಂದ ನಡೆಯಿತು. ಎತ್ತ ನೋಡಿದರತ್ತ ದೀಪಗಳ ಅಲಂಕಾರಗಳು ಕಣ್ಮನ ಸೆಳೆದವು. ಸಿದ್ಧಾರೂಢರಿಗೆ ದೀಪ ಬೆಳಗಿಸಿ ಭಕ್ತರು ಭಕ್ತಿಯಿಂದ ಇಷ್ಟಾರ್ಥಗಳನ್ನು ಬೇಡಿಕೊಂಡರು.
Updated on:Nov 24, 2022 | 9:24 AM

Hubli Deepotsava at historic Sri Siddharoodha Mutt in Hubballi news in kannada

Hubli Deepotsava at historic Sri Siddharoodha Mutt in Hubballi news in kannada

ಭಕ್ತರು ದೀಪ ಹಚ್ಚುವ ದೃಶ್ಯಗಳನ್ನು ಕಣ್ಣುಗಳಲ್ಲಿತುಂಬಿಕೊಂಡರು. ಇದೇ ವೇಳೆ ಮಠದ ಆವರಣದಲ್ಲಿನ ದೀಪಗಳ ಅಲಂಕಾರವನ್ನ ತಮ್ಮ ಮೊಬೈಲುಗಳಲ್ಲಿ ಸೆರೆಹಿಡಿಯುವುದರ ಜೊತೆಗೆ ದೀಪ ಬೆಳಗಿಸಿ ತಮ್ಮ ಮೊಬೈಲ್ಗಳಲ್ಲಿ ಸೆಲ್ಪಿ ತೆಗೆದುಕೊಂಡರು.

ದೀಪಗಳನ್ನ ಬೆಳಗಿದ ಬಳಿಕ ಸಿಡಿಮದ್ದುಗಳು ಆಕಾಶದಲ್ಲಿ ಚಿತ್ತಾರ ಮೂಡಿಸಿದವು. ಲಕ್ಷದೀಪೋತ್ಸವ ಉದ್ದೇಶ ಪ್ರತಿಯೊಬ್ಬನ ಕಷ್ಟಗಳನ್ನ ತೊಡೆದುಹಾಕಿ ಬದುಕು ಬೆಳಕಿನ ಚಿಲುಮೆಯಾಗಲು ಭಗವಂತಾ ಸಿದ್ಧಾರೂಢ ಕೃಪೆ ತೋರು ಅಂತ ಭಕ್ತಿಭಾವದಿಂದ ಬೇಡಿಕೊಳ್ಳಲು ಅಂದಕಾರವೆಲ್ಲ ಕಳೆದುಹೋಗಲಿ ಅಂತ ಈ ದೀಪಗಳ ಹಬ್ಬ ಆಚರಣೆ ಮಾಡುತ್ತಿರುವುದಾಗಿ ಮಠದ ಆಡಳಿತ ಮಂಡಳಿ ಹೇಳಿದೆ.

ಒಟ್ಟಾರೆ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠ ದೀಪಗಳ ಅಲಂಕಾರದಲ್ಲಿ ಮಿಂದೆದ್ದಿತ್ತು. ದೀಪಗಳ ಹಬ್ಬದ ಸಂಭ್ರಮ ಸಡಗರದಲ್ಲಿ ತೇಲುತ್ತಿತ್ತು. (ವರದಿ: ಶಿವಕುಮಾರ್ ಪತ್ತಾರ್, ಟಿವಿ9 ಹುಬ್ಬಳ್ಳಿ)
Published On - 9:02 am, Thu, 24 November 22




