AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿಯ ಸಿದ್ಧಾರೂಢರ ಮಠದಲ್ಲಿ ಕಳೆಗಟ್ಟಿದ ಲಕ್ಷ ದೀಪೋತ್ಸವದ ಸಂಭ್ರಮ ಸಡಗರ

ಹುಬ್ಬಳ್ಳಿಯ ಐತಿಹಾಸಿಕ ಮಠ ಶ್ರೀ ಸಿದ್ಧಾರೂಢರ ಮಠದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ ಸಡಗರದಿಂದ ನಡೆಯಿತು. ಎತ್ತ ನೋಡಿದರತ್ತ ದೀಪಗಳ ಅಲಂಕಾರಗಳು ಕಣ್ಮನ ಸೆಳೆದವು. ಸಿದ್ಧಾರೂಢರಿಗೆ ದೀಪ ಬೆಳಗಿಸಿ ಭಕ್ತರು ಭಕ್ತಿಯಿಂದ ಇಷ್ಟಾರ್ಥಗಳನ್ನು ಬೇಡಿ‌ಕೊಂಡರು.

TV9 Web
| Edited By: Rakesh Nayak Manchi|

Updated on:Nov 24, 2022 | 9:24 AM

Share
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದಲ್ಲಿ ನಿನ್ನೆ 25ನೇ ಲಕ್ಷದೀಪೋತ್ಸವವನ್ನ ಅದ್ಧೂರಿಯಾಗಿ ಆಚರಿಸಲಾಯಿತು. ಪ್ರತಿ ವರ್ಷದಂತೆ ಕಾರ್ತಿಕ ಮಾಸದಲ್ಲಿ ಈ ಲಕ್ಷದೀಪೋತ್ಸವವನ್ನ ಆಚರಣೆ ಮಾಡಲಾಗುತ್ತದೆ. ನಿನ್ನೆ ಮಠದ ಆವರಣದ ತುಂಬ ಬಣ್ಣ ಬಣ್ಣದ ರಂಗೋಲಿಗಳ ಚಿತ್ತಾರಗಳ ಮೇಲೆ ಲಕ್ಷಾಂತರ ದೀಪಗಳನ್ನ ಜೋಡಿಸಿ ಇಡಲಾಗಿತ್ತು.

Hubli Deepotsava at historic Sri Siddharoodha Mutt in Hubballi news in kannada

1 / 5
ನೆರೆದಿದ್ದ ಲಕ್ಷಾಂತರ ಭಕ್ತರು ಮಹಾಂಗಳಾರತಿ ಬಳಿಕ ದೀಪಗಳನ್ನ ಹಚ್ಚಿ ಶ್ರೀ ಸಿದ್ಧಾರೂಢರಿಗೆ ಭಕ್ತಿಭಾವದಿಂದ ಸಮರ್ಪಿಸಿದರು. ಅದರಲ್ಲೂ ಮಹಿಳೆಯರಿಗಂತೂ ಈ ದೀಪದ ಹಬ್ಬ ಅವರ ಸಂತಸ ಹಿಮ್ಮಡಿಗೊಳಿಸಿತ್ತು. ಕುಟುಂಬ ಸಮೇತ ಬಂದ ಮಹಿಳೆಯರು ದೀಪ ಬೆಳಗಿಸಿ ಬದುಕಿನ ಕತ್ತಲೆಯನ್ನ ಹೋಗಲಾಡಿಸುವಂತೆ ಬೇಡಿಕೊಂಡರು.

Hubli Deepotsava at historic Sri Siddharoodha Mutt in Hubballi news in kannada

2 / 5
Hubli Deepotsava at historic Sri Siddharoodha Mutt in Hubballi news in kannada

ಭಕ್ತರು ದೀಪ ಹಚ್ಚುವ ದೃಶ್ಯಗಳನ್ನು ಕಣ್ಣುಗಳಲ್ಲಿತುಂಬಿಕೊಂಡರು. ಇದೇ ವೇಳೆ ಮಠದ ಆವರಣದಲ್ಲಿನ ದೀಪಗಳ ಅಲಂಕಾರವನ್ನ ತಮ್ಮ ಮೊಬೈಲುಗಳಲ್ಲಿ ಸೆರೆಹಿಡಿಯುವುದರ ಜೊತೆಗೆ ದೀಪ ಬೆಳಗಿಸಿ ತಮ್ಮ ಮೊಬೈಲ್​ಗಳಲ್ಲಿ ಸೆಲ್ಪಿ ತೆಗೆದುಕೊಂಡರು.

3 / 5
Hubli Deepotsava at historic Sri Siddharoodha Mutt in Hubballi news in kannada

ದೀಪಗಳನ್ನ ಬೆಳಗಿದ ಬಳಿಕ ಸಿಡಿಮದ್ದುಗಳು ಆಕಾಶದಲ್ಲಿ ಚಿತ್ತಾರ ಮೂಡಿಸಿದವು. ಲಕ್ಷದೀಪೋತ್ಸವ ಉದ್ದೇಶ ಪ್ರತಿಯೊಬ್ಬನ ಕಷ್ಟಗಳನ್ನ ತೊಡೆದುಹಾಕಿ ಬದುಕು ಬೆಳಕಿನ ಚಿಲುಮೆಯಾಗಲು ಭಗವಂತಾ ಸಿದ್ಧಾರೂಢ ಕೃಪೆ ತೋರು ಅಂತ ಭಕ್ತಿಭಾವದಿಂದ ಬೇಡಿಕೊಳ್ಳಲು ಅಂದಕಾರವೆಲ್ಲ ಕಳೆದುಹೋಗಲಿ ಅಂತ ಈ ದೀಪಗಳ ಹಬ್ಬ ಆಚರಣೆ ಮಾಡುತ್ತಿರುವುದಾಗಿ ಮಠದ ಆಡಳಿತ ಮಂಡಳಿ ಹೇಳಿದೆ.

4 / 5
Hubli Deepotsava at historic Sri Siddharoodha Mutt in Hubballi news in kannada

ಒಟ್ಟಾರೆ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠ ದೀಪಗಳ ಅಲಂಕಾರದಲ್ಲಿ‌ ಮಿಂದೆದ್ದಿತ್ತು. ದೀಪಗಳ ಹಬ್ಬದ ಸಂಭ್ರಮ ಸಡಗರದಲ್ಲಿ ತೇಲುತ್ತಿತ್ತು. (ವರದಿ: ಶಿವಕುಮಾರ್ ಪತ್ತಾರ್, ಟಿವಿ9 ಹುಬ್ಬಳ್ಳಿ)

5 / 5

Published On - 9:02 am, Thu, 24 November 22

Web contact
Web contact

TV9 Kannada

Read More
Follow Us
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ